ಅಪ್ಪನ ಆಪ್ತತೆ ….

Share Button

ಅಪ್ಪ-ಅಮ್ಮ ಇಬ್ಬರೂ ಮಕ್ಕಳಿಗೆ ದೇವತಾ ಸ್ವರೂಪಿಗಳು. “ಯಜ್ಞ-ಯಾಗಾದಿಗಳಿಗಿಂತಲೂ ತಂದೆ-ತಾಯಿಯರ ಸೇವೆಯೇ ಶ್ರೇಷ್ಟ” ಎಂಬುದಾಗಿ ನಮ್ಮ ಶ್ರೀ ಶೀ ರಾಘವೇಶ್ವರ ಭಾರತೀ ಶ್ರೀಗಳು ಹೇಳುತ್ತಾರೆ.  ಇವರಿಬ್ಬರನ್ನು ಹೋಲಿಸಿದಾಗ ಕೆಲವು ಮಕ್ಕಳಿಗೆ ಅಪ್ಪನಲ್ಲಿ ಯಾವುದೇ ಅಗತ್ಯತೆಯನ್ನ ಹೇಳಿಕೊಳ್ಳಲು ಭೀತಿಯನ್ನು ಕಾಣುತ್ತೇವೆ!.  ಶೈಶವಾವಸ್ಥೆಯಿಂದಲೇ ಅಮ್ಮನ ಒಡನಾಟ ಹೆಚ್ಚಾಗಿರುವುದರಿಂದ ಅಮ್ಮನಲ್ಲಿ ಸಲಿಗೆ!.ಅದೇ ಮುಂದೆ ಬೆಳೆಯುತ್ತದೆ. ಇಂತಹವರು ಅಮ್ಮನ ಮುಖಾಂತರ ಹೇಳಿಸಿ;ಅಪ್ಪನಲ್ಲಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ!!.ಆದರೆ ಕೆಲವು ಕುಟುಂಬದಲ್ಲಿ ಇದಕ್ಕೆ ತದ್ವಿರುದ್ಧವೂ ಇರುತ್ತದೆ. ಅಮ್ಮ ಜೋರು,ಅಪ್ಪ ಪಾಪ ಎಂಬ ಧೋರಣೆಯವರೂ ಇಲ್ಲದೆ ಇಲ್ಲ.ಇನ್ನು ಕೆಲವರು ಇವೆರಡಕ್ಕೂ ವಿರುದ್ಧ. ಅಪ್ಪ-ಅಮ್ಮ ಇಬ್ಬರೂ ಕ್ಯಾರೇ ಇಲ್ಲ!. ಇದು ಮಾತ್ರ ಸಂಸ್ಕಾರ ಅಲ್ಲ. ನಾಗರಿಕ ಬೆಳವಣಿಗೆ ಅಲ್ಲವೇ ಅಲ್ಲ.

ಇನ್ನೀಗ ನನ್ನ ವಿಚಾರಕ್ಕೆ ಬಂದರೆ- ನನಗೆ ಅಪ್ಪನ ಆಪ್ತತೆ ಅಧಿಕ. ಅಮ್ಮನ ಪ್ರೀತಿ ಇಲ್ಲ ಎಂದಲ್ಲ!. ಅದು ಪ್ರಾರಂಭ ಆಗಿದ್ದು ಹೇಗೆ ಅಂತೀರಾ?.ನನ್ನ ಪ್ರಾಥಮಿಕ ಶಿಕ್ಷಣ ಅಂದ್ರೆ..ಒಂದರಿಂದ ಏಳನೆ ತರಗತಿ ತನಕ;ಇಚ್ಲಂಪಾಡಿ ಕಳತ್ತೂರು ಶಾಲೆಯಲ್ಲಾಯ್ತು.ಇದು ನನ್ನ ಅಜ್ಜನಮನೆಯಲ್ಲಿದ್ದುಕೊಂಡು ಹೋಗಿ ಕಲಿಯಲು ಅಜ್ಜನ[ಅಜ್ಜನಮನೆಅಜ್ಜ] ಹೇಳಿಕೆಯಂತೆ ಅಮ್ಮನ ಏರ್ಪಾಡಿನಲ್ಲಾಯ್ತು.ಆ ಕಾಲದಲ್ಲಿ ವಾರದ ರಜೆಯಲ್ಲಿ ದೂರದ ಅಪ್ಪ-ಅಮ್ಮ ಇರುವಲ್ಲಿಗೆ ಬರಲು ಈಗಿನಂತೆ ಸೌಲಭ್ಯ ಇಲ್ಲ.  ಓಣ,ಕ್ರಿಸ್ ಮಸ್,ಹಾಗೂ ದೊಡ್ಡ ರಜೆಯಲ್ಲಿ ಮಾತ್ರ ಬರಬೇಕಷ್ಟೆ!. ಹೀಗೆ ಬಂದಿರುವಾಗ ಅಪ್ಪನಿಗೆ ನನ್ನಲ್ಲಿ ಕೊಂಗಾಟ ಹೆಚ್ಚು.ನನಗೆ ಪುಸ್ತಕವೋ ಪೆನ್ಸಿಲೋ ಚೀಲವೋ,ಡ್ರೆಸ್ ಹೀಗೆ ತೆಗೆದು ಕೊಡುವರು.ಜಾತ್ರೆಗೆ ಹೋದರೆ ಬೇಕಾದಷ್ಟು ಬಳೆ,ರಿಬ್ಬನ್ ತೆಗೆದು ಕೊಡುವರು.ಆದರೆ ಜಾತ್ರೆಯ ಭೋನಸ್ ಮಕ್ಕಳೆಲ್ಲರಿಗೂ ಒಂದೇ ತೂಕ!. ಮಕ್ಕಳಲ್ಲಿ ನಾನು ದೊಡ್ಡವಳು. “ಅಕ್ಕ ಹೇಳದೆ ಬೇಕಾದ್ದು ತೆಗೆದುಕೊಡ್ತಾರೆ ಅಪ್ಪ. ನಮಗೆ ಹೇಳಿದರೂ ಬರುವುದಿಲ್ಲ” ಎಂಬ ಭಾವನೆ ಕಿರಿಯರ ಮನಸ್ಸಲ್ಲಿ ಮೂಡಿ ಮಾತಲ್ಲೂ ಸಹಜವಾಗಿ ಬಂದರೆ ಅತಿಶಯೋಕ್ತಿ ಅಲ್ಲ. ನನಗಾದರೋ ಅಪ್ಪನಲ್ಲಿ ಹೆಚ್ಚಿನ ಸೆಳೆತ  ಬೇರೂರುತ್ತದೆ. ಎಷ್ಟಾದರೂ ಬಾಲ್ಯ ಸಹಜ ಯೋಚನೆ!. ಅದೇಕೋ ನಮ್ಮ ಹವ್ಯಕ ಸಮುದಾಯದಲ್ಲಿ ಮದುವೆಯಾದ ಮಗಳು ಅಪ್ಪನಮನೆ, ಎನ್ನುವುದು ಹಿಂದಿನಿಂದಲೇ ಬಂದ ಸರ್ವನಾಮ. ’ತಾಯಿಮನೆ’ ಎನ್ನುವುದಿಲ್ಲ. ಹಾಗೆಯೇ ಅಜ್ಜಿಮನೆ ಎನ್ನದೆ; ಅಜ್ಜನಮನೆ ಎಂಬ ಸಂಬೋಧನೆ!.

ಎಲ್ಲರೊಂದಿಗೆ ಸ್ನೇಹಾಚಾರದ ವ್ಯಕ್ತಿ—ಅಪ್ಪನಿಗೆ ಮಾತು,ಸ್ನೇಹಾಚಾರ ಅಧಿಕ. ಮಾತು ಮಾತಿಗೆ ಅವರಿಗೆ ವಿದ್ಯೆ ಕಲಿಸಿದ ಗುರುಗಳು ಹೇಳಿದ ಶ್ರೇಷ್ಟ ನುಡಿಗಳೂ ಬಿಂದುಗಳಾಗಿ ಹೊರಹೊಮ್ಮುತ್ತವೆ.  ಅವರ ಪೈಕಿ ದರ್ಭೆ ನಾರಾಯಣಶಾಸ್ತ್ರಿಗಳು ಹಾಗೂ ಪಡಿಯಡ್ಪು ಮಹಾಲಿಂಗಭಟ್ಟರ ನೆನಪು ಹೆಚ್ಚಾಗಿ ನುಸುಳುತ್ತದೆ!!  ತಮಾಶೆ,ಜೋಕುಗಳು ಕಡಿಮೆಯೇನೂ ಅಲ್ಲ!  ಮಾತಿನಲ್ಲಿ ಹರಳಾಗಿ ಬರುತ್ತವೆ ಹಲವಾರು ನುಡಿಗಟ್ಟು, ಗಾದೆ,ಜೋಕುಗಳು. ಅದೆಷ್ಟೋ ಸಮಯಕ್ಕನುಗುಣವಾಗಿ ನಮಗೆ ಮಕ್ಕಳಿಗೆ ನೆನಪಾಗಿ ಹೊರಳಿ ಬೆಳೆಗಳಾಗುತ್ತವೆ!!. ಎರಡು ವರ್ಷಗಳ ಹಿಂದೆ ನಾನು ಸಂಗ್ರಹಿಸಿ ಬರೆದ  “ಹವಿಗನ್ನಡ ವಿಶಿಷ್ಟ ನುಡಿಪ್ರಯೋಗಗಳು” ಹವ್ಯಕ ಅಧ್ಯಯನ ಕೇಂದ್ರದ ಅಮೃತ ಮಹೋತ್ಸವ [ಬೆಂಗಳೂರು]ದ ವೇಳೆ ಅವರೇ ಪ್ರಕಟಿಸಿ ಬಿಡುಗಡೆ ಮಾಡಿದ ಪುಸ್ತಕ. ಈ ಪುಸ್ತಕದಲ್ಲಿ ಇರುವುದು  ತೊಂಬತೊಭತ್ತು ಪಾಲೂ ನನ್ನ ಅಪ್ಪನ ಮಾತಿನಲ್ಲಿ ನುಸುಳಿದ ಹರಳುಗಳು!!!.

ಅಪ್ಪನ ಆಪ್ತತೆ ಹೀಗೆಃ- ನನ್ನ ವಿವಾಹದ ಮಾರಣೆದಿನ ಗೃಹಪ್ರವೇಶದಲ್ಲಿ ಮಗಳನ್ನು ಕೈಎತ್ತಿ ಕೊಡುವ ವೇಳೆ ಅಪ್ಪನ ಕಣ್ಣಲ್ಲಿ ನೀರು!. ಅಮ್ಮನಿಗಾದರೋ ಸಹಿಸುವ ಶಕ್ತಿಯಿದೆ.  ಮದುವೆಮಾಡಿ ಕೊಟ್ಟಮೇಲೂ ಅಪ್ಪ ತಿಂಗಳಿಗೊಮ್ಮೆಯಾದರೂ ನನ್ನಲ್ಲಿ ಮಾತಾಡಿಸಿ ಹೋಗಲು ಬರುವ ಅಭ್ಯಾಸ.ನನ್ನ ಎರಡನೆ ತಂಗಿ ಮನೆಯೂ ನನ್ನಲ್ಲಿಂದ ಕೇವಲ ಒಂದೂವರೆ ಕಿಲೋಮೀಟರು ಅಂತರದ ಮುಂಗಿಲ.ಇಲ್ಲಿಗೆ ಬಂದರೆ ಅಲ್ಲಿಗೂ ಹೋಗದೆ ಇರಲಾರರು. ನನ್ನಿಂದಲೇ ತಂಗಿಮನೆ; ಕರೋಪಾಡಿ ಪದ್ಯಾಣ. ಅಲ್ಲಿಗೆ ಅವರು ನಾಲ್ಕು ಬಸ್ಸಿನಲ್ಲಿ ಪ್ರಯಾಣ ಮಾಡಬೇಕಿತ್ತು. ಒಂದೇ ದಿನದಲ್ಲಿ ಮರಳಿಬರುವುದು ಅವರ ಪಾಲಿಗೆ ಪ್ರಯಾಸವೇ.ಹಾಗೆಂದು ಹೋಗಿ ನೋಡಿ ಮಾತಾಡಿಸಿ ಬರದೆ ಇರಲಾರರು.

ನನಗೆ ಹಲಸಿನಕಾಯಿ ಉಪ್ಪುಸೊಳೆ ಹಾಕುವುದಕ್ಕೆಂದು ಮೂರಡಿ ಎತ್ತರದ ಭರಣಿಯನ್ನ ಬಸ್ಸಿನಲ್ಲಿ ತಂದು ಇಳಿಸಿ ಹೊತ್ತು ತಂದು [1972 ರಲ್ಲಿ]ಕೊಟ್ಟ ದೃಶ್ಯ ಈಗಲೂ ಮನಃ.ಪಟಲದಲ್ಲಿ ಗುಣು ಗುಣಿಸುತ್ತಿದೆ!. ಮದುವೆಮಾಡಿಕೊಟ್ಟ ಎಲ್ಲಾ ಮಗಳಂದಿರಲ್ಲಿಗೂ ಆಗಾಗ ಹೋಗಿ ನೋಡಿಬರಬೇಕೆಂಬ ಅಪ್ಪನ ತುಡಿತ ಕಣ್ಣಿಗೆ ಕಟ್ಟುತ್ತಿದೆ!!.1998  ರಲ್ಲಿ ಕುಳಿತು ಮಾತಾಡುತ್ತಿದ್ದ ಹಾಗೆಯೇ ಅಪ್ಪ ಹಿರಿಮಗನ ತೊಡೆಗೆ ವಾಲಿ ಕೈಲಾಸ ಸೇರಿದ್ದರು. ಅನಾಯಾಸೇನ ಮರಣಂ| ವಿನಃ ದೈನ್ಯೇನ ಜೀವನಂ|| ಇದು ಆಗಾಗ ಅಪ್ಪ ಉಚ್ಛರಿಸುತ್ತಿದ್ದ ಉಕ್ತಿಯಾಗಿತ್ತು! ಹಾಗೆಯೇ ಆಯ್ತು!!.

-ವಿಜಯಾಸುಬ್ರಹ್ಮಣ್ಯ, ಕುಂಬಳೆ..

10 Responses

 1. Avatar Savithri bhat says:

  ಅಪ್ಪನೊಡನಿರುವ ಪ್ರೀತಿ,ಅಭಿಮಾನ ಓದಿ ಸಂತಸವಾಯಿತು..ಅಪ್ಪನ ನೆನಪು ಅನುದಿನ

 2. ಪ್ರಕಟಿಸಿದ ಹೇಮಮಾಲಾ ಹಾಗೂ ಓದಿಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

 3. Avatar ನಯನ ಬಜಕೂಡ್ಲು says:

  ಎಲ್ಲಾ ಹೆಣ್ಣುಮಕ್ಕಳು ಹೆಚ್ಚಾಗಿ ಹಚ್ಚಿ ಕೊಳ್ಳುವುದು ಅಪ್ಪನನ್ನೇ. ಚೆನ್ನಾಗಿದೆ ಬರಹ

 4. ಸುಧಾ, ನಯನ,ಸಾವಿತ್ರಿಭಟ್.ಎಲ್ಲರಿಗೂ ನಿಮ್ಮ ಅನಿಸಿಕೆಗೆ ಧನ್ಯವಾದಗಳು..

 5. Avatar ASHA nooji says:

  ಸುಪರ್ ಬರಹ .Akkoo

 6. Avatar ಶಂಕರಿ ಶರ್ಮ says:

  ಅಪ್ಪನ ನೆನಪಿನಲ್ಲಿ ಮೂಡಿ ಬಂದ ಸೊಗಸಾದ ಬರಹ. ಹುಟ್ಟಿನಿಂದಲೇ ಅಪ್ಪನನ್ನು ನೋಡದ ಎಷ್ಟೋ ಮಂದಿಗೆ ಅವರ ಪ್ರೀತಿಯ ಅರಿವೇ ಇರುವುದಿಲ್ಲ… ‌ಅಪ್ಪನ ದಿನಕ್ಕೆ ಒಳ್ಳೆಯ ಉಡುಗೊರೆ..ಧನ್ಯವಾದಗಳು ವಿಜಯಕ್ಕ.

 7. ಧನ್ಯವಾದ ಶಂಕರಿ ಅಕ್ಕ

 8. Avatar Shreekrishna Sharma Halemane says:

  ಸುಂದರ ನಿರೂಪಣೆ.

 9. Avatar Anonymous says:

  ಶ್ರೀ ಕೃಷ್ಣ ಶರ್ಮ ಹಳೆಮನೆಯವರಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: