ಕೊರೋನಾ ನಂತರದ ದೇಶ….

Share Button

ಈಗ ಕಾಡುತ್ತಿರುವ ಕೊರೋನಾ ವರ್ಷದ ಕೊನೆಗಾದರೂ ತನ್ನ ಹಿಡಿತವನ್ನು ಸಡಿಲಿಸುತ್ತದೆಯೇ ಎಂಬ ಅನುಮಾನವಿದೆ. ಈ ಕೊರೋನಾದಿಂದ ಕೆಲವು ಧನಾತ್ಮಕ ಬದಲಾವಣೆಗಳೂ ಆಗಲಿವೆ. ಅವು ಹೇಗೆ ಎಂಬುದನ್ನು ನೋಡೋಣ.

ಮೊಟ್ಟ ಮೊದಲನೆಯದಾಗಿ, ದೇಶ ಡಿಜಿಟಲ್l ಅಥವಾ ಆನ್ ಲೈನ್ ಕಡೆಗೆ ದಾವುಗಾಲು ಹಾಕುತ್ತಿದೆ. ಎಲ್ಲಾ ಸಾಫ್ಟ್ ವೇರ್‍ ಸಂಸ್ಥೆಗಳೂ  ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು  ಶುರು ಮಾಡಿವೆ. ಇದೇ ಶಾಶ್ವತವಾದರೆ ಪ್ರಸಿದ್ಧ ಐಟಿ ದಿಗ್ಗಜ ಕಂಪೆನಿಗಳನ್ನು ನಡೆಸಲು ಬೃಹತ್ ಕಟ್ಟಡ ಬೇಕಾಗಿಲ್ಲ, ಪರ್ಯಾಯ ಮಾರ್ಗಗಳನ್ನು ಹುಡುಕುವ ಸಾಧ್ಯತೆ ಇದೆ. ಒಂದು ಸಣ್ಣ ಕಟ್ಟಡ ಸಾಕು. ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ, ಕಂಪೆನಿಗಳಿಗೆ ದೊಡ್ಡ ಉಳಿತಾಯ.

ಇನ್ನು ವಿದ್ಯಾಭ್ಯಾಸದ ಕಡೆಗೆ ಬಂದರೆ ಎಲ್ಲ ಕಡೆ ಶುರುವಾಗಿರುವ ಕೋಚಿಂಗ್ ಕ್ಲಾಸ್ ಗೆ ಉಳಿಗಾಲ ಇಲ್ಲ. ಆನ್ ಲೈನ್ ಕೋಚಿಂಗ್ ಕ್ಲಾಸ್ ಮೂಲಕ  ತರಬೇತಿ ಲಭ್ಯ. ದೇಶದಲ್ಲಿರುವ ಅತ್ಯುತ್ತಮ ಶಿಕ್ಷಕರನ್ನು  ಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರಿಗೆ ನೇಮಿಸಿ, ಅವರಿಗೆ ಉತ್ತಮ ವೇತನ ಕೊಟ್ಟು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತದೆ, ಅದೂ ಸಹ ಮನೆಯಲ್ಲಿಯೇ ಕುಳಿತು.( ಹುಡುಗರು ಬೈಕ್, ಸ್ಕೂಟರ್ ಕೇಳುವಂತಿಲ್ಲ) ಹುಡುಗರು ಯಾವುದೇ ಊರಿನಲ್ಲಿದ್ದರೂ ತೊಂದರೆ ಇಲ್ಲ.

ಕ್ಷೌರದ ಸಮಸ್ಯೆಯೆಂದರೆ ಲಾಕ್ ಡೌನ್  ಸಮಯದಲ್ಲಿ ಕೂದಲು ಬೆಳೆದು ಸೆಲೂನ್ ಗಳಿಗೆ ಹೋಗಲಾಗದೆ ಹುಡುಗ ಯಾರು? ಹುಡುಗಿ ಯಾರು? ಎಂದು ಗೊತ್ತಾಗುತ್ತಿಲ್ಲ.ಅದಕ್ಕಾಗಿ ಕೆಲವರು ತಾವೇ ಕತ್ತರಿಯಲ್ಲಿ ಬಾಚಣಿಗೆ ಸಹಾಯದಿಂದ ಕಟ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಅದು ಇಲಿ ತಿಂದ ಹಾಗೆ ಕಾಣುತ್ತದೆ. ಕ್ರಮೇಣ ಅಭ್ಯಾಸವಾದ ಮೇಲೆ ಸರಿ ಹೋಗಬಹುದು. ಕೆಲವರು ಹೇರ್ ಟ್ರಿಮ್ಮೆರ್ ಉಪಯೋಗಿಸುತ್ತಿದ್ದಾರೆ.ಲಾಕ್ ಡೌನ್ ತೆಗೆದಾದ ಮೇಲೆ ಇದೇ ಅಭ್ಯಾಸವಾಗಿ ಸೆಲೂನಿಗೆ ಹೋಗದೇ ಇರಬಹುದು. ರೇಜರ್ಆವಿಷ್ಕಾರವಾಗುವ ಮೊದಲು ಕ್ಷೌರಕ್ಕೆ ಎಲ್ಲರೂ ಸೆಲೂನ್ ಗೆ ಹೋಗುತ್ತಿದ್ದರು. ಈಗ ಹೇರ್ ಕಟ್ಟಿಂಗ್ ಗೆ ಮಾತ್ರ ಹೋಗುತ್ತಿದ್ದಾರೆ. ಮುಂದೆ ಅದೂ ನಿಂತು ಹೋಗಿ ಕ್ಷೌರಿಕರಿಗೆ ಕೆಲಸವಿಲ್ಲದಾಗುವ ಸಾಧ್ಯತೆಯೂ ಇದೆ.

ಇನ್ನು ಹೋಟೆಲ್ಗಳು, ಇನ್ನು ಮುಂದೆ ಯಾವುದೇ ಹೋಟೆಲ್ ಗೆ ಲೈಸೆನ್ಸ್ ಕೊಡಬೇಕಾದರೂ ಪಾರ್ಸೆಲ್ ಸೇವೆ  ಮಾತ್ರ ಇರುವಂತ ಹೋಟೆಲ್ ಗಳಿಗೆ. ಕುಳಿತು ತಿನ್ನುವ ಹೋಟೆಲ್ ಗಳಿಗೆ ಹೆಚ್ಚಿನ ತೆರಿಗೆ. ಹೀಗಾಗಿ ಎಲ್ಲಾ ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ  ಮಾತ್ರ. 

ಲಾಕ್ ಡೌನ್ ಮಾಡುವ ಮೊದಲು ಐರನ್ ಮಾಡದ ಬಟ್ಟೆಗಳು ಹಾಗೆಯೇ ಇದೆ. ಎರಡು ತಿಂಗಳಿಂದ ಬರಿ ಚಡ್ಡಿ ಬನೀನ್ ಗಳಲ್ಲೇ ಕಾಲ ಕಳೆದಾಯಿತು. ಲಾಕ್ ಡೌನ್ ತೆಗೆದರೂ ಲಾಂಡ್ರಿ ಗೆ ಹೋಗಬೇಕಾಗಿಲ್ಲ. ಪಾಪ ಲಾಂಡ್ರಿಯವನು, “ಆ ಕರೋನಾ ಸಿಕ್ಕರೆ ಈ ಬಿಸಿ ಐರನ್ ಬಾಕ್ಸ್ ನಿಂದಲೇ ಅದನ್ನು ಸಾಯಿಸ್ತೀನಿ” ಅಂದ.

ತಮ್ಮ ರೋಗ ನಿರೋಧಕ ಶಕ್ತಿ  ಜಾಸ್ತಿ ಮಾಡಿಕೊಳ್ಳಲು ಸೈಕಲ್ ಉಪಯೋಗ ಜಾಸ್ತಿಯಾಗುತ್ತೆ. ಮಾಸ್ಕ್ ಉಪಯೋಗದಿಂದ ಬ್ಯೂಟಿಪಾರ್ಲರ್ ಕಡಿಮೆಯಾಗುತ್ತೆ. ಚಾರಣಿಗರ ಸಂಖ್ಯೆ ಸದ್ಯಕ್ಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಮದುವೆ ಮನೆಗಳಲ್ಲಿ ಜನ ಕಮ್ಮಿಯಾಗುತ್ತಾರೆ. 

ಶರಣುವೊಗು ಜೀವನ ರಹಸ್ಯದಲಿ ಸತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮದಲಿ- ಮಂಕುತಿಮ್ಮ.

ಜೇವನದಲಿ ಒಂದು ರಹಸ್ಯವಿದೆ. ಆ ರಹಸ್ಯಕ್ಕೆ ಶರಣು ಹೋಗು. ಏನು ಆ ರಹಸ್ಯ? ಪ್ರಕೃತಿ ಯಾವಾಗಲೂ ಶಕ್ತಿ ಶಾಲಿಗಳನ್ನು ಇಷ್ಟಪಡುತ್ತದೆ. ಜಳ್ಳು ಕಾಳುಗಳನ್ನು ತೂರಿ ಗಟ್ಟಿ ಕಾಳನ್ನು ಉಳಿಸುತ್ತದೆ. ನಿಶ್ಶಕ್ತರು ನನಗೆ ಬೇಡ, ನನಗೆ ಶಕ್ತಿಶಾಲಿಗಳು ಬೇಕು. ಇದನ್ನೆ ಡಾರ್ವಿನ್ ಹೇಳಿದ್ದು, “Survival of the fittest during the struggle for existence”. ಶಕ್ತಿಶಾಲಿಗಳೆಂದರೆ ಪೈಲ್ವಾನ್ ಗಳಲ್ಲ. ಯಾರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೋ ಅವರು ಮಾತ್ರ. ಹಾಗಾಗ ಬೇಕಾದರೆ ಸರಿಯಾದ ಆಹಾರ, ಯೋಗ, ವ್ಯಾಯಾಮ ಇವುಗಳ ಜೊತೆಗೆ ವೈದ್ಯಕೀಯ ಸಹಾಯ. ಹೀಗಾಗದೆ ಕೇವಲ ವ್ಯಾಕ್ಸಿನ್ ಕಂಡುಹಿಡಿದು ಅದರಿಂದ ಕೊರೋನಾ ಮುಕ್ತ ವಿಶ್ವವನ್ನು ಮಾಡುತ್ತೇವೆಂದರೆ ಕೆಲವೇ ವರ್ಷಗಳಲ್ಲಿ   ಕೊರೋನಾ ಅಪ್ಪ ಬರಲು ತುದಿಗಾಲಲ್ಲಿ ನಿಂತಿದ್ದಾನೆ.

ಕೊರೋನಾ ಅನ್ನೋದು ಏನು ಇದು? ಜೀವಿಯೇ? ನಿರ್ಜೀವಿಯೇ? ಅದು ರಕ್ತಬೀಜಾಸುರನ ರಕ್ತದ ಹಾಗೆ, ಅವನ ರಕ್ತ ಭೂಮಿಗೆ ಬಿದ್ದ ಕೂಡಲೇ ಸಹಸ್ರಾರು ರಾಕ್ಷಸರು ಹುಟ್ಟುವಂತೆ. ಈ ಕೊರೋನಾ ಕಣಕ್ಕೆ ಜೀವವಿಲ್ಲ, ಆದರೆ ಮನುಷ್ಯನ ಕಣ್ಣಿನ ಪಿಸಿರು, ಮೂಗಿನ ಸಿಂಬಳ. ಎಂಜಲು ಯಾವುದಾದರೂ ಸಿಕ್ಕರೆ ಸಾಕು ಜೀವ ತಳೆದು ರಕ್ತಬೀಜಾಸುರರು ಜನ್ಮ ತಾಳುತ್ತಾರೆ.

ಏನೇನೋ ಹೇಳುತ್ತಿದ್ದರು, ಇದರ ಆಯುಸ್ಸು ಕೇವಲ 45 ದಿನ ಅಂತ, ಸುಳ್ಳಾಯಿತು. ಇದು ಬರಿ ಚಳಿ ದೇಶದಲ್ಲಿ ಬದುಕುತ್ತೆ, ನಮ್ಮ ದೇಶದ ಸೆಖೆಗೆ ಇದರ ಆಟ ನಡೆಯಲ್ಲ ಅಂತ. ನಮ್ಮ ದೇಶ ಇರಲಿ ಮರಳುಗಾಡಿನ ಆ ಸೆಖೆಯ ಜನರನ್ನೂ ಬಿಡಲಿಲ್ಲ. ಇದು ಕೇವಲ ಮುದುಕರನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತೆ, ಯುವಕರನ್ನಲ್ಲ ಎಂದರು. 16 ವರ್ಷದ ಯುವಕ, ಮೂರು ತಿಂಗಳ ಮಗುವು ಸಹ ಕೊರೋನಾಗೆ ಆಹುತಿಯಾಯಿತು. ಹೀಗೆ ಹೇಳಿದ್ದೆಲ್ಲವನ್ನೂ ಸುಳ್ಳು ಮಾಡುತ್ತಾ ಮುನ್ನುಗ್ಗುತ್ತಿದೆ, ಈ ಕೊರೋನಾ.

ಹಿರಣ್ಯಕಶಿಪುವಿನಂತೆ,  ನನಗೆ ಆಯುಧದಿಂದ ಮರಣ ಬೇಡ, ಮನೆಯೊಳಗೆ ಬೇಡ, ರಾಕ್ಷಸರಿಂದ ಬೇಡ, ಪ್ರಾಣಿಗಳಿಂದ ಬೇಡ ಇತ್ಯಾದಿ ವರ ಪಡೆದಂತೆ ಈ ಕರೋನಾ, ನನಗೆ ಪ್ಲೇಗ್ ವ್ಯಾಕ್ಸಿನ್ ನಿಂದ ಮರಣ ಬೇಡ, ಕಾಲರಾ ಚುಚ್ಚುಮದ್ದಿನಿಂದ ಬೇಡ, SARS ನಿಂದ ಬೇಡ ಇತ್ಯಾದಿ ವರ ಪಡೆದು, ಹೊಸ ಅವತಾರ ತಾಳಿ, ರುದ್ರ ತಾಂಡವ ನೃತ್ಯವಾಡುತ್ತಿದೆ. ಯಾವಾಗ ‘ನರಸಿಂಹ` ಅವತಾರವಾಗುತ್ತೋ ಎಂದು ಕಾಯುತ್ತಿದೆ ಜಗತ್ತು.

-ಎ.ಜಿ.ಸೋಮಶೇಖರ್, ಮೈಸೂರು

    

5 Responses

  1. P says:

    ಹಗುರವಾಗಿ ಮನಸ್ಸಿಗೆ ಮುದನೀಡುತ್ತದೆ. Article is very funny.

  2. ಪ್ರಸ್ತುತ ವಸ್ತು ನಿಷ್ಠ ಬರಹ.

  3. Anonymous says:

    ಚಂದದ ಬರಹ ಸರ್

  4. ASHA nooji says:

    ‍ಚಂದದಬರಹ sir

  5. ಶಂಕರಿ ಶರ್ಮ says:

    ಸಕಾಲಿಕ ಲಘಹಾಸ್ಯ ಬರಹ ಚೆನ್ನಾಗಿದೆ.

Leave a Reply to P Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: