ಹಚ್ಚನೆಯ ಹಸಿರಾಗು

Share Button

 

ಅನುಭವಿಸಿ ಬರೆಯುವೆನು
ಕನಸುಗಳ ಕಟ್ಟುವೆನು
ಮನದೊಳಿಹ ಭಾವನೆಗೆ
ಜೀವತುಂಬಿ |
ದಿನದಿನವು ನಮಿಸುವೆನು
ಮನದಣಿಯೆ ನಗಧರೆಗೆ
ಜನಮನಕೆ ಸುಖವಿತ್ತು
ಕಾಯುವಂತೆ ||೧||

ಜಡತನವ ತುಂಬದಿರು
ದುಡಿಯುತಿರು ಹಗಲಿರುಳು
ಕಡೆಕಡೆದು ಬಂದಿರುವ
ಬೆಣ್ಣೆಯಂತೆ |
ಬಡಬಡಿಸಿ ಬವಣೆಯಲಿ
ಕಡೆಗಣಿಸಿ ಬದುಕದಿರು
ಬಡವಾದ ಜೀವನೆಲೆ
ನೋಯುವಂತೆ ||೨||

ಶಿಲೆಗಳಲಿ  ಮೂಡಿರುವ
ಕಲೆಗಳಿಗೆ ವಂದಿಸುತ
ಬೆಲೆಯಿರುವ ಭಾವಗಳ
ಕೆತ್ತುವಂತೆ |
ನೆಲೆಯಿರದ ಜೀವಗಳ
ನಲಿವಿತ್ತು ಮುನ್ನಡೆಸು
ಒಲವಿಂದ ಕನಸುಗಳ
ಬಿತ್ತುವಂತೆ ||೩||

ಮೆಚ್ಚಿಸುತ ಮನಸುಗಳ
ಹಚ್ಚದೆಯೆ ಕಿಡಿಗಳನು
ಬೆಚ್ಚಿಸದೆ ಕಡಲಲೆಯ
ಮೊರೆತದಂತೆ |
ಚುಚ್ಚದಿರು ಭಾವದಲಿ
ಮುಚ್ಚಿಡುತ ನೋವುಗಳ
ಹಚ್ಚನೆಯ ಹಸಿರಾಗಿ
ನಗುವೆಯಂತೆ ||೪||

(ಕುಸುಮ ಷಟ್ಪದಿ)

-ಪ್ರಮೀಳಾ ಚುಳ್ಳಿಕ್ಕಾನ

 

5 Responses

 1. Hema Hema says:

  ಕುಸುಮದಂತೆ, ನವಿರಾದ ಷಟ್ಪದಿ ..ಚೆಂದ..

 2. Avatar ನಯನ ಬಜಕೂಡ್ಲು says:

  ಒಂದೊಂದು ಸಾಲೂ ಬಹಳ ಚಂದ.

 3. Avatar ASHA nooji says:

  ಸುಪರ್

 4. Avatar ಶಂಕರಿ ಶರ್ಮ says:

  ನವಿರಾದ ಭಾವಪೂರ್ಣ ಸುಂದರ ಕವನ.

 5. Avatar Savithri bhat says:

  ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: