ವಿಶ್ವ ಜಲ ದಿನ -ಮಾರ್ಚ್ 22

Share Button

ಜಲ ಜಾಗೃತಿ
ನೆಲ ಸಂಸ್ಕೃತಿ
ಬೆರೆಸಲೆರಡು ರೀತಿನೀತಿ
ಉಳಿಸಲದೆ ಹನಿ ಪ್ರಕೃತಿ ||

ದಿನ ವೆಚ್ಚದಲಿ
ಹೂ ಗುಚ್ಚದಲಿ
ಕರವಿಡೆ ಸ್ವಚ್ಚತೆ ಕೂಲಿ
ನೀರಾಗಿ ಹೋಗಿದೆ ಖಾಲಿ ||

ಎಡೆ ಹುಟ್ಟುತಲಿ
ನಡೆ ಬಯಲಲ್ಲಿ
ನದಿ ಕಾಲುವೆಯ ಹಳ್ಳದಲಿ
ಸಾಗರ ತೆಕ್ಕೆ ಕೊನೆಯಲ್ಲಿ ||

ಸಿಹಿ ಕರಗುತಿದೆ
ಕಹಿ ತಿರುಗುತಿದೆ
ಲವಣದ ಜಲ ಇಂಗುತಲಿದೆ
ಬವಣೆಯ ಫಲ ನುಂಗಿಸಲಿದೆ ||

ನರ ನಶಿಸುತಿದೆ
ವರ ಶಪಿಸಲಿದೆ
ಎಚ್ಚೆತ್ತುಕೊ ಉಳಿಸೊ ಭರದೆ
ಬದುಕಿಲ್ಲ ನಿರ್ಜಲ ಜಗದೆ ! ||

– ನಾಗೇಶ ಮೈಸೂರು

2 Responses

  1. Shankari Sharma says:

    ಜೀವಜಲ ಸಂರಕ್ಷಣಾ ಕಾಳಜಿ ತುಂಬಿದ ಸಕಾಲಿಕ ಕವನ.

  2. ASHA nooji says:

    ಸೊಗಸಾಗಿದೆ

Leave a Reply to ASHA nooji Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: