ಹೇಗೆ ಮರೆಯಲಮ್ಮ

Share Button

ಒಡಲಿನಲ್ಲಿ ಹೊತ್ತುಕೊಂಡು
ಕರುಳ ಬಳ್ಳಿಯನ್ನು ಕೊಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ರಕ್ತ ನೀಡಿ ಹೊತ್ತು ತಿರುಗಿ
ಮಡಿಲ ಸೇರಲು ಉಸಿರು ಕೊಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ಆಡಿ ನಲಿಯಲು ಚಂದ ಬೆಳೆಯಲು
ಅಮೃತದಂತ ಎದೆ ಹಾಲು ಕೊಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ತಂಗಳ ಊಟ ನೀನು ಮಾಡಿ
ಬಿಸಿ ಬಿಸಿ ಊಟ ನನಗೆ ಕೊಟ್ಟೆ
ಹೇಗೆ ಮರೆಯಲ್ಲಮ್ಮ ನಿನ್ನ
ಹೇಗೆ ಮರೆಯಲಿ
.
ಎದ್ದು ಬಿದ್ದು ಗಾಯವಾಗಲು
ಎದೆಗವಚಿ ಕಣ್ಣೀರಿಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ತೊದಲು ನುಡಿಯ ನಾನು ಆಡಲು
ನಕ್ಕು ನಗಿಸಿ ಆನಂದ ಪಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ಶಾಲೆ ಮುಗಿಸಿ ಮನೆಗೆ ಬರಲು
ಓದಲು ಕೂಡಿಸಿ ಸಂಭ್ರಮ ಪಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.
ಹೊಸ ಹೊಸ ಉಡುಗೆ ತೊಡು ಎನಗೆ
ಇದ್ದುದರಲ್ಲೇ ನೀ ಸಂತಸಪಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ.
.
ಮಕ್ಕಳಿಗಾಗಿ ಜೀವ ಸವೆಸಿ
ಹಸಿವು ನಿಧಿರೆಯ ಮರೆತುಬಿಟ್ಟೆ
ಹೇಗೆ ಮರೆಯಲಮ್ಮ ನಿನ್ನ
ಹೇಗೆ ಮರೆಯಲಿ
.

-ಮಧುಮತಿ ರಮೇಶ ಪಾಟೀಲ

2 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್. ಅಮ್ಮ ಅನ್ನೋ ಜೀವವೇ ಹಾಗೆ, ಯಾವಾಗಲೂ ಶ್ರೇಷ್ಠ.

  2. Shankari Sharma says:

    ಎಲ್ಲರ ಅಮ್ಮಂದಿರ ನಿಸ್ವಾರ್ಥ ಬದುಕು, ನಿಮ್ಮ ಲೇಖನಿಯಲ್ಲಿ ನವಿರಾಗಿ ಹರಿದು ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: