ಹೆಣ್ಣು ಜಗದ ಕಣ್ಣು

Share Button

ಸಂಸಾರ  ಸಾಗರದಲ್ಲಿ ಮಿಂದು
ಸಂತಸದ ಜ್ಯೋತಿ ಬೆಳಗುವಳು ನಾರಿ
ಅಲೆಗಳಂತೆ ಬರುವ  ನೋವಲಿ ಬೆಂದು
ಮನೆಯವರಿಗಾಗುವಳು ಉಪಕಾರಿ

ಮಮತೆಯ ಮಡಿಲ ತುಂಬಿದ ಕುಲವಧು
ಸಕಾರಾತ್ಮ ಸದ್ಗುಣವ ಹೊಂದಿದ ಮಹಿಳೆ
ನಂಬಿಕೆಯ ಕಳಸವ ತುಂಬಿದಂತ ಮಧು
ಹಿರಿಕಿರಿಯರಿಗಾಸರೆಯಾದವಳು ಇವಳು

ಪತಿ ಇಚ್ಛೆಯರಿತು ಸಾಗಿಸೋ ಜೀವನ
ಬಾಳನೌಕೆಗೆ ಹೆಗಲು ಕೊಟ್ಟು ಬಾಳುವಳು
ಆರ್ಥಿಕತೆಯ ಅರಿತ ಮನೆಗವಳೆ ಪಾವನ
ಹೆಣ್ಣಾದವಳು ಮನೆಗೆ  ಕಣ್ಣಾಗಿರುವಳು

ಸಮಾಮುಖಿಯಾಗಿ ಜನ ಸೇವೆಗೈದು
ಸಂಘಟನೆಯ ಕಾರ್ಯವ ಕೈಗೊಳ್ಳುವಳು
ಎಲ್ಲರಂಗದಲ್ಲಿಯೂ ತಾ ಸಾಧನೆಗೈದು
ಸರ್ವಶ್ರೇಷ್ಟ ಮಹಿಳೆ ಎಂದೆನಿಸುವಳು

ಇವಳ ಶಕ್ತಿ ಹೆಚ್ಚಿದೆ ಮುಗಿಲೆತ್ತರ ಹವಣಿಕೆ
ಪುರುಷನಂತೆ ಸರಿಸಮವ ನಿಂತಿಹಳು
ಕಷ್ಟದಲೂ ತೀರಿಸುವಳು ಮಕ್ಕಳ ಬಯಕೆ
ದಿಟ್ಟ ಹೆಜ್ಜೆ ಇಟ್ಟ  ಜಗದ ಕಣ್ಣಿವಳು

-ಮಧುಮತಿ ರಮೇಶ ಪಾಟೀಲ,ಬಳ್ಳಾರಿ 

4 Responses

  1. ಹೆಣ್ಣಿನ ಉತ್ತಮ ಸ್ಥಾನವ ಬಿಂಬಿಸುವ ಕವನ ಚೆನ್ನಾಗಿದೆ. ಮಧುಮತಿಯವರಿಗೆ ಮಧುರವಾಗಿ ಸೂಚಿಸುವ ಅಭಿನಂದನೆಗಳು

  2. ನಯನ ಬಜಕೂಡ್ಲು says:

    ಹೆಣ್ಣಿನ ಬದುಕಿನ ಪೂರ್ತಿ ಚಿತ್ರಣ
    ಮಹಿಳಾ ದಿನದ ಶುಭಾಶಯಗಳು

  3. Shankari Sharma says:

    ಮಹಿಳಾಮಣಿಯ ಮಹತ್ತತೆಯನ್ನು ಸಾರುವ ಸೊಗಸಾದ ಕವನ.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: