ನದಿ

Share Button

ಸಾಗರದೊಳಗೆ ಲೀನವಾಗುವ ಮೊದಲು
ನದಿಯೊಂದು ಒಳ -ಒಳಗೆ ನಡುಗುವುದಂತೆ

ಸಾಗಿದ ದಾರಿಯಲ್ಲೊಮ್ಮೆ ಹಿಂದಿರುಗಿ ನೋಡಿದರೆ
ಬೆಟ್ಟಗಳ ತುದಿ, ಕಣಿವೆಗಳ ಇಳಿಜಾರು
ಕಾಡು  ಸೀಳಿಕೊಂಡು ಹಾದು ಹೋದ
ಹಳ್ಳಿಗಳ ನೆನಪು ಒತ್ತರಿಸಿ ಬರುವುದಂತೆ

ಮುಂದೆ ನೋಡಿದರೆ ಅನಂತ ಸಾಗರ
ತನ್ನನ್ನು ಇಡಿಯಾಗಿ ನುಂಗಿ ಹಾಕುವ
ತನ್ನ ಅಸ್ತಿತ್ವವನ್ನೇ ಅಳಿಸಿ ಹಾಕುವ ಆಗರ
ಒಂದು ಹೆಜ್ಜೆ ಮುಂದಿಟ್ಟರೆ
ತಾನೇ ಇಲ್ಲದಾಗುವ ಭಯ ಮತ್ತೆ
ಕಣ್ಮುಂದೆ ಸುಳಿಯುವುದಂತೆ

ಆದರೆ, ಹೆಜ್ಜೆ ಕಿತ್ತಿಡದೇ  ಅನ್ಯ ಮಾರ್ಗವಿಲ್ಲ
ನದಿಗೆ ಹಿಮ್ಮುಖತೆಯಿಲ್ಲ
ಹಾಗೆ ನೋಡಿದರೆ ಯಾರಿಗೂ ಹಿಂದೆ ಸಾಗಲು ಸಾಧ್ಯವಿಲ್ಲ
ಈ ಸೃಷ್ಟಿಯಲಿ ಹಿಂದಿರುಗುವಿಕೆ ಎನ್ನುವುದೇ ಇಲ್ಲ

ಭಯವ ನೀಗಿಸಿಕೊಂಡು ನದಿ ಈಗ
ಸಾಗರದೊಳೊಗಿಳಿಯಬೇಕು
ಧೈರ್ಯ ಒಗ್ಗೂಡಿಸಿಕೊಂಡು ಮುನ್ನುಗ್ಗಬೇಕು
ತಾನು ಸಾಗರದೊಳಗೆ ಕಳೆದುಹೋಗುತ್ತಿಲ್ಲ
ಸಾಗರವೇ ಆಗುತ್ತೇನೆನ್ನುವ
ವಿಶ್ವಾಸವೊಂದೇ  ಸಾಕು

ಮೂಲ: ಖಹಲೀಲ್ ಗಿಬ್ರಾನ್
ಕನ್ನಡಕ್ಕೆ :ರಾಜೇಶ್ವರಿ. ಎನ್

5 Responses

 1. Avatar ನಯನ ಬಜಕೂಡ್ಲು says:

  ವೆರಿ ನೈಸ್. ನನಗನ್ನಿಸೋದು ಈ ಕವನ ಕೇವಲ ನದಿಯ ಕುರಿತಾಗಿ ಮಾತ್ರ ಅಲ್ಲ, ಬದುಕಿನ ಕುರಿತಾಗಿಯೂ ಹೌದು ಅಂತ.

 2. Avatar Shankari Sharma says:

  ಸುಂದರ ಭಾವಾನುವಾದದ ಕವಿತೆ ಚೆನ್ನಾಗಿ ಮೂಡಿಬಂದಿದೆ. ಜೀವನ ನದಿಯು ಸಂಸಾರ ಸಾಗರಕ್ಕೆ ಸೇರುವ ಹಾದಿಯಲ್ಲಿನ ತುಮುಲಗಳು ಮನ ತಟ್ಟುತ್ತವೆ.

 3. Avatar Shararada says:

  ಸೂಪರ್. ಅರ್ಥಗರ್ಭಿತ

 4. Avatar Krupa bs says:

  Very nice poem excellent attempt in translating a poem.here ,through the use of excellent forms of words u decorated the poem.the embodiment of beauty of nature is fleeting.

 5. Avatar Pavan Kumar Chillergiker says:

  ಹಿಂದಕ್ಕೆ ಹೋಗುಯುದು ನೀರಿನ ಗುಣವಲ್ಲ , ಮುಂದಕ್ಕೆ ಸಾಗುವದು ಪ್ರಕೃತಿಯ ಆಜ್ಞೆ.

  ತನ್ನ ಹಿಂದೆ ಪರ್ವತ , ಕಾಡು, ಪ್ರಾಣಿ ಗಳನ್ನೂ ಪೋಷಣೆ ಮಾಡಿ ಬಿಟ್ಟಿರುದು ನಿಜ , ಮುಂದೆ ಜಲಾಶಯ ದ್ ಜೀವಿಗಳಿಗೆ ಆಶ್ರಯ ನೀಡಲು ಮುಂದಾಗಿದೆನೆಂದು
  ಹೆಮ್ಮಿ ಇಂದ ಸಾಗುವೆನು.

  ಸಾಗರವು ನನ್ನನ್ನು ನುಂಗುಯುದು ನಿಜ , ನಾನು ಸಾಗರದಲ್ಲಿ ಇಳಿದು ಮುಂದೆ ಸಾಗಲೇಬೇಕು.

  ಪ್ರಕೃತಿಯ ಈ ನಿಯಮವನ್ನು ಯಾರು ಮುರಿಯ ಲಾರೆ, ಸಾಗರಯು ಮುಂದೆ ಸಮುದ್ರ ಸೇರುಯುದು,
  ಪ್ರಕೃತಿಯವು ಎಳೆದ ಈ ರೇಖೆಯು ನಿಯಮವು ನದಿಗೆ ಮಾತ್ರ ವಲ್ಲ ಸಾಗರಕ್ಕೂ ಅನ್ವಯಸುಯುದು. ಥಾಂಕ್ ಯು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: