ಎಕ್ಕದ ಗುಣವ ನೋಡಕ್ಕ…

Share Button

ನೀಲಿ ಎಕ್ಕದ ಹೂಗಳು

ಪ್ರಕೃತಿಯ ಅದ್ಭುತ ಸೃಷ್ಟಿಯಲ್ಲೊಂದಾಗಿರುವ ಎಕ್ಕದ ಗಿಡವು ಆಯುರ್ವೇದೀಯ ಗುಣ ಮತ್ತು ವೈದಿಕ ಅಂಶಗಳ ಕಾರಣದಿಂದ ಪವಿತ್ರವಾದ ಸ್ಥಾನವನ್ನು ಪಡೆದಿದೆ. ಈ ಸಸ್ಯವನ್ನು ನಮ್ಮ ಮನೆ  ಮುಂದೆ ಈಶಾನ್ಯ ಭಾಗದಲ್ಲಿ ಬೆಳೆಸಿದರೆ ವಾಸ್ತುವಿನ ದೋಷ ನಿವಾರಣೆ ಆಗುವುದು ಎಂದು ನಂಬಿಕೆ.ಆರ್ಯುವೇದದಲ್ಲಿ ಮತ್ತು ಜ್ಯೊತಿಷ್ಯ ಮತ್ತು ವೇದಗಳಲ್ಲಿಯೂ ಎಕ್ಕದ ಗಿಡದ ಪ್ರಾಮುಖ್ಯತೆಯನ್ನು ಹೇಳಲಾಗಿದೆ.

ಮನೆಮುಂದೆ ಅದನ್ನು ಬೆಳೆಸಿದರೆ ದಿನಾ ನಾವು ಎದ್ದೊಡನೆ ಮೊದಲು ನೋಡುವುದು ಎಕ್ಕ ಗಿಡ. ಔಷಧೀಯ ಗುಣ ಹೊಂದಿರುವ ಇದು ಮನುಷ್ಯನಿಗೆ ಉಪಕಾರಿಯೂ ಆಗಿರುತ್ತದೆ. ನಿತ್ಯ ನೋಡುವ ಗಿಡ  ಅದ್ಭುತವನ್ನು ಸೃಷ್ಟಿಸುತ್ತದೆ ಎಂದರೆ ನಂಬಲು ಅಸಾಧ್ಯ ಅಲ್ಲವೇ? ಬಿಳಿ ಎಕ್ಕದ ಹೂಗಳನ್ನು ಹಾರ ಮಾಡಿ ಗಣಪತಿಗೆ ಮತ್ತು ಶಿವದೇವರಿಗೆ ಅರ್ಪಿಸುತ್ತಾರೆ. ದಿನಾ ಒಂದು ಹೂವನ್ನಾದರೂ ದೇವರಿಗೆ ಸಮರ್ಪಣೆ ಮಾಡುವುದು ಆಚರಣೆ.

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವ ಈ ಸಸ್ಯವು ಈಗ ಪಟ್ಟಣಗಳ ಬಾಲ್ಕನಿಗಳಲ್ಲಿಯೂ ರಾರಾಜಿಸುತ್ತದೆ. ಆಯುರ್ವೇದದಲ್ಲಿ ಸಾಕಷ್ಟು ಬಳಕೆಯಲ್ಲಿರುವ ಈ ಗಿಡವು ಮನೆ ಔಷಧವೆಂದೇ ಹೇಳಲಾಗಿದೆ. ಎಕ್ಕದ ಗಿಡದ ಕೆಲವು ಔಷಧೀಯ ಉಪಯೋಗಗಳು ಹೀಗಿವೆ:

 1. ನಡೆದಾಡುವಾಗ ಆಕಸ್ಮಿಕವಾಗಿ, ಕಾಲಿಗೆ ಮುಳ್ಳು ಚುಚ್ಚಿದರೆ, ಆ ಜಾಗಕ್ಕೆ ಎಕ್ಕಗಿಡದ ಹಾಲನ್ನು ಹಚ್ಚಿ. ಕೆಲವು ಗಂಟೆಗಳಲ್ಲಿ ಮುಳ್ಳು ಜಾರಿ ಬೀಳುವುದು.
 2. ಮಧುಮೇಹ ರೋಗ ಇರುವವರು ಎಕ್ಕದ ಗಿಡದ ಎಲೆಯನ್ನು ಪಾದದ ಅಡಿಗೆ ಇಟ್ಟು ಕಾಲುಚೀಲ ಧರಿಸಿ. ಬೆಳಗ್ಗಿನಿಂದ ಸಂಜೆಯ ತನಕ ಇಟ್ಟು ತೆಗೆದರೆ ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದೇ ರೀತಿ 3-4 ತಿಂಗಳು ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆಯೆಂದು ತಿಳಿದು ಬಂದಿದೆ.
 3. ವಿಷಯುಕ್ತ ಚೇಳು ಕಡಿದರೆ, ಎಕ್ಕದ ಗಿಡದ ಬೇರಿನ ರಸವನ್ನು ಅರಸಿನ ಮತ್ತು ಸ್ವಲ್ಪ ನೀರಿನೊಂದಿಗೆ ತೇಯ್ದು ಸೇವಿಸಿದರೆ ಉಪಶಮನವಾಗುತ್ತದೆ.
 4. ಮೂಲವ್ಯಾಧಿಗೆ ಇದರ ಹಾಲನ್ನು ಹಚ್ಚಿದಾಗ ನೋವು ಶಮನಾಗುತ್ತದೆಯಂತೆ.
 5. ಮಂಡಿನೋವಿದ್ದರೆ, ಎಕ್ಕದ ಎಲೆಯನ್ನು ಸುಟ್ಟು, ಅದನ್ನು ನೋವಿರುವ ಜಾಗಕ್ಕೆ, ಬಟ್ಟೆಯಲ್ಲಿ ಕಟ್ಟಿದರೆ ನೋವು ಶಮನವಾಗುತ್ತದೆ.

ಬಿಳಿ ಎಕ್ಕದ ಹೂಗಳು

ಕನಿಷ್ಟ 27 ವರ್ಷ ಬಾಳಿಕೆ ಬರುವ ಈ ಸಸ್ಯವು ಅಪರೂಪವೆನಿಸತೊಡಗಿದೆ. ಎಕ್ಕದ ಗಿಡದಲ್ಲಿ ಬಿಳಿ ಹಾಗೂ ನೀಲ ಬಣ್ಣದ ಪ್ರಬೇಧಗಳಿವೆ. ಭಾರತದಲ್ಲಿ ಬಹುತೇಕ ಎಕ್ಕದ ಹೂಗಳು ನೀಲಬಣ್ಣದಲ್ಲಿರುತ್ತವೆ. ಅಪರೂಪಕ್ಕೆ ಕಂದು ಬಣ್ಣದಲ್ಲೂ ಇರುತ್ತದೆ. ಆದರೆ ಬಿಳಿ ಬಣ್ಣದ ಎಕ್ಕ ವಿಶೇಷ. ಸಿಗುವುದು ವಿರಳ. ಇದನ್ನು ಶ್ವೇತಾರ್ಕವೆಂದೂ ಕರೆಯುತ್ತಾರೆ. ಇದು ನೋಡಲು ಸುಂದರ ಮತ್ತು ಗಿಡವು ವಿಸ್ತಾರವಾಗಿ ಹರಡುವುದು. ಎಕ್ಕದ ಗಿಡದ ಹಾಲು ಶುಭ್ರವಾಗಿ ಬಿಳಿ ಬಣ್ಣದಲ್ಲಿರುತ್ತದೆ. ಇದರ ಬೀಜಗಳು ಅಗಸೆ ಅಗಸೆ ಗಿಡದ ಬೀಜದಂತೆ ಇರುತ್ತವೆ.

ಎಕ್ಕದ ಗಿಡದ ಬೇರನ್ನು ಪಡೆಯಲು  5-6  ಅಡಿಗಳಷ್ಟು ನೆಲವನ್ನು ಅಗೆಯಬೇಕು. 10-15 ವರ್ಷತುಂಬಿದ ಈ ಗಿಡದ ಬೇರಿನಲ್ಲಿ ಗಣಪತಿಯ ಮೂರ್ತಿಗಳು ಪ್ರಕೃತಿಕವಾಗಿ ಮೂಡುತ್ತವಂತೆ. ಅದನ್ನು ಜಾಗ್ರತೆಯಿಂದ ಹೆಕ್ಕಿ ತೆಗೆದು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಅಷ್ಟೈಶ್ವರ್ಯ ಲಭಿಸಿ, ಸಕಲ ಸಂಕಷ್ಟಗಳು ದೂರವಾಗಿ ಬಿಡುತ್ತವೆ ಎಂಬ ನಂಬಿಕೆಯೂ ಇದೆ. ಹಿಂದಿನ ಕಾಲದಲ್ಲಿ ಹಿರಿಯರು ಇದರ ಬೇರನ್ನು ಅಗೆದು ಗಣಪತಿ ಮೂರ್ತಿಯನ್ನು ತೆಗೆದು ಜೋಪಾನ ಮಾಡಿಡುತಿದ್ದರು. ಗಿಡದ ವಯಸ್ಸು ಹೆಚ್ಚುತ್ತಾ ಹೋದಂತೆ ಅತೀ ಕಡಿಮೆ ಸಂಖ್ಯೆಯಲ್ಲಿ ಗಣಪತಿಯ ಮೂರ್ತಿ ಸಿಗುತ್ತದೆಯಂತೆ.

ಎಕ್ಕದ ಗಿಡಗಳ ಸಂತತಿಯು ವಿನಾಶದೆಡೆಗೆ ಸಾಗದಂತೆ ಕಾಳ ಜಿವಹಿಸುದರೊಂದಿಗೆ, ಈ ಗಿಡದ ಔಷಧೀಯ ಗುಣವನ್ನು ಯುವಪೀಳಿಗೆಗೂ ಪರಿಚಯಿಸಬೇಕಿದೆ.

– ಆಶಾ ನೂಜಿ .

5 Responses

 1. Avatar ನಯನ ಬಜಕೂಡ್ಲು says:

  ಹೌದು, ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಸಸ್ಯ ಇಂದು ಅಳಿವಿನಂಚಿನಲ್ಲಿದೆ. ಬಹಳಷ್ಟು ಮಂದಿಗೆ ಈ ಸಸ್ಯದ ಪರಿಚಯವೇ ಇಲ್ಲ. ಉತ್ತಮ ಬರಹ ಮೇಡಂ

 2. Avatar ASHA nooji says:

  ಧನ್ಯವಾದಗಳು

 3. Avatar Mamatha Rajesh says:

  ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ ನಿಮ್ಮ ಬರಹ ..thank you Akka

 4. Avatar Shankari Sharma says:

  ಆಶಾ, ಎಕ್ಕದ ಬಗೆಗಿನ ಸವಿವರ ಲೇಖನ ಚೆನ್ನಾಗಿ ಮೂಡಿಬಂದಿದೆ.
  ಬಿಳಿ ಎಕ್ಕದ ಗಿಡದ ದಂಟನನ್ನು ಒಣಗಿಸಿ
  ಎಳ್ಳೆಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಮಂಡಿನೋವಿರುವಲ್ಲಿ ಹಚ್ಚಿದರೆ, ನೋವು ಕಡಿಮೆಯಾಗುವುದೆಂದು ವೈದ್ಯರೊಬ್ಬರು ಹೇಳಿದ ನೆನಪು.

 5. Avatar ASHA nooji says:

  ￿ಅಪ್ಪಾ .ಹೊ ತಿಳಿಸಿದ್ದಕ್ಕೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: