ಅಕ್ಷರದ ಆ(ಈ)ಯೀ

Share Button

(ಜನವರಿ 3 ರಂದು ಪ್ರಥಮ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಪುಲೆ ಇವರ ಜನ್ಮ ದಿನದ ನಿಮಿತ್ಯ…)

ನೀನಿರುವೆ  ಸಾವಿತ್ರಿಬಾಯಿ
ನಮ್ಮೆಲ್ಲರ ಅಕ್ಷರದ ಆಯೀ
ಅಸಮಾನತೆ ಕಂದಕದಿಂದೆದ್ದು
ಗೆದ್ದಿರುವೆ ಆಗಿ ನೀ ಸರಸೋತಿ.

ಹೆಣ್ಣೊಂದು ಕಲಿತರೆ
ಜಗವೇ ಕಲಿತಂತೆಂಬುದನು
ಅಕ್ಷರದ ಕ್ರಾಂತಿ ಕಿಡಿಗಳನ್ನಾಗಿ
ಸಿಡಿಸಿದೆ ನಮ್ಮೆಲ್ಲರ ಅಕ್ಷರದ ಆಯೀ

ಅಪಹಾಸ್ಯ ಗೈದವರಿಗೆ.
ತೋರಿದಿ ಸ್ತ್ರೀ ಶಕ್ತಿಮಹಿಮೆ
ಹಿರಿದಾಯಿತು ಶಿಕ್ಷಣದಗರಿಮೆ
ಸಹನಾಮಯಿ ನೀ ಕರುಣಾಮಯಿ

ಕಲ್ಲು ಬೀಸಿದವರಿಗೆ
ಬಳಪದ ಕಲ್ಲು ಪುಸ್ತಕ ಕೊಟ್ಟೆ
ಅಡ್ಡಗಟ್ಟಿದವರಿಗೆ ನೀ
ಅಕ್ಷರದೂಟವ ಬಡಿಸಿದೆ.

ಮನೆಯೇ ಮೊದಲ ಪಾಠಶಾಲೆ
ಜನನಿ ಮೊದಲ ಗುರುವೆಂದು
ನುಡಿತೋರಣ ಕಟ್ಟಿ ಅಕ್ಷರದ
ಕ್ರಾಂತಿಗೆ ನೀ ಮುನ್ನುಡಿಯಾದೆ.

– *ರೇಮಾಸಂ*
ಡಾ.ರೇಣುಕಾತಾಯಿ ಎಂ.ಸಂತಬಾ.
rensan2004@yahoo.com

4 Responses

  1. Hema Hema says:

    ಚೆಂದದ ಕವನ..ಅಕ್ಷ್ರರದ ಆಯಿಗೆ ಪ್ರಣಾಮಗಳು.

  2. Avatar ನಯನ ಬಜಕೂಡ್ಲು says:

    ಸುಂದರವಾದ ಕವನ.
    ಆ ವಿದ್ಯಾದೇವಿಗೊಂದು ನಮನ.

  3. Avatar ASHA nooji says:

    ಚಂದದ ￿ಅಕ್ಷರದಸಾಲುಗಳು

  4. Avatar Shankari Sharma says:

    ಅಪರೂಪದ ಧೀಮಂತ ಮಹಿಳೆಯ ಬಗ್ಗೆ ಅಭಿಮಾನವೆನಿಸುತ್ತದೆ. ಚಂದದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: