ಹತ್ತರೊಳಗಿನ

Share Button

 

ಒಂದು ಕಡೆ ನೆಲೆ ನಿಲ್ಲವಾಗೇ
ಬಿಂದುವಂತೆ ಸ್ಥಿರವಾಗಿರುವಾಗೇ
ಇಂದುಧರನ ಭಜಿಸಲಾರೇತಕೆ?
.
ಎರಡು ನಾಲಿಗೆ ಹಾವಂತಾಗದೇ
ಎರಡು ಬುದ್ಧಿಯ ಹೊಂದದಂತೆ
ಎರಡು ಗಳಿಗೆ ಧ್ಯಾನಿಸಲಾರೇತಕೆ?
.
ತ್ರಿಕರಣ ಶುದ್ಧವನು ಪಡೆಯಲು
ತ್ರಿಕಾಲವು ಮುಗ್ಧ ಮನದಿಂದ
ತ್ರಿಮೂರ್ತಿಗಳ ಪೂಜಿಸಲಾರೇತಕೆ?
,
ಚತುರ್ಮುಖನ ಸೃಷ್ಟಿಯಲಿ
ಚತುರ ಸಿದ್ಧಿ ಬುದ್ಧಿಯ ಪಡೆದು
ಚಾರಿತ್ರ್ಯದಿಂದ ಬಾಳಲಾರೇತಕೆ?
.
ಪಂಚ ಭೂತಗಳಿಂದಾದ ದೇಹದ
ಪಂಚೇಂದ್ರಿಯಗಳ ನಿಗ್ರಹಿಸುವ
ಪಂಚತಂತ್ರವ ತಿಳಿಯಲಾರೇತಕೆ?
.
ಷಡ್ವರ್ಗಗಳನು ಅರಿಯ ಜಯಿಸುವ
ಷಡ್ಕೋನದ ಗಣಿತ ನಿಯಮವನು
ಷಣ್ಮುಖನಂತೆ ಅರಿಯಲಾರೇತಕೆ?
,
ಸಪ್ತ ವರ್ಣಗಳ ಮಳೆಬಿಲ್ಲ ಬಾಳನು
ಸಪ್ತ ಸಾಗರಗಳ ಗಾಂಭೀರ್ಯವನು
ಸಪ್ತ ಋಷಿಗಳಂತೆ ಜಯಿಸಲಾರೇತಕೆ?
.
ಅಷ್ಟ ಮದಗಳ ಮದವಡಿಗಿಸಿ
ಅಷ್ಟೈಶ್ವರ್ಯದ ಸೌಖ್ಯವ ದೀನಾಗಿ
ಅಷ್ಟ ದಿಕ್ಕುಗಳಲಿ ಬಾಳಲಾರೇತಕೆ?
.
ನವ ಮಾಸದಿ ಹುಟ್ಟಿದ ಶಿಶುವಿನ ತಲೆಯಲ್ಲಿ
ನವಗ್ರಹ ಜೋತಿಷ್ಯವ ತುಂಬುವ ಬದಲು
ನವನೀತ ತುಪ್ಪದ ಪಾಠ ಹೇಳಲಾರೇತಕೆ?
.
ಹತ್ತರೊಳಗಿನ ಈ ಜೀವನ ತತ್ವವನು
ಹತ್ತು ಮಂದಿಗೆ ಹಂಚುವ ಮನಸನು
ಹತ್ತು ನಿಮಿಷ ನೀನು ಮಾಡಲಾರೇತಕೆ?.

.
– ಶಿವಮೂರ್ತಿ.ಹೆಚ್ , ದಾವಣಗೆರೆ.

6 Responses

 1. Avatar ನಯನ ಬಜಕೂಡ್ಲು says:

  no words

 2. Avatar Shankari Sharma says:

  ಒಂದರಿಂದ ಹತ್ತರೊಳಗಿನ ಜೀವನ ತತ್ವವನ್ನು ನಿರೂಪಿಸುವ ಸುಂದರ ಕವನ.

 3. Avatar Bhaskaracharya says:

  So beautiful chennagide

 4. Avatar Preethiaradhya says:

  Vasathavda Nika jivana Satya
  Naviiru badku bavne satyakke bele illa bannavilide natka maduva janarige stana mana asthi olleya jivana maryade labisuttade

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: