ಖಾಸಗಿ ಕನಸು…!

Share Button

ನಿಮಗೆ ಗೊತ್ತಿಲ್ಲವಿದು.., ನನ್ನೆದೆಯ
ಖಾಸಗಿ ವಿಷಯ ಒಂದು ಹೀಗಿದೆ ಎಂದು…!
ಈ ಮಾಧವ ಆ ಮಿಲಿಂದರ ಮೇಲೆ ಹರೆಯದಿಂದಲೂ
ನನಗೆ ಮನಸ್ಸೆಂದರೆ ಮನಸ್ಸೆಂದು..

ನನ್ನಿರುಳ ಕನಸ ತಿಜೋರಿಗೆ ಕನ್ನ
ಹಾಕಿದ್ದರರೀರ್ವರು ! ಮೊಗೆದು ಕೊಟ್ಟಿದ್ದರು
ಅಕ್ಷಯ ಭಂಡಾರದ ಒಲವನು.
ಬಿಡಿ, ಅದೆಲ್ಲಾ ಬರಿದಾಗುವ ಬರಿಯ
ಮೋಹಕ ಮಾತಾಗಿರಲಿಲ್ಲ..

ಆಗೀಗ ತೆರೆಯ ಮೇಲೆ ವಿರಳವಾಗಿ
ಕಂಡತೆ, ಈ ತರಳೆ ಮನಸ್ಸು ಆಗುತ್ತಿತ್ತು
ಮಲ್ಲೆ-ಅರಳೆ..!! ಹಿಂಜಿ ಹಿಂಜಿ…
ತೆರೆತೆರೆಯಾಗಿ ಹಗೂರ ಹಾರುತ್ತಿತ್ತು…!
ಮತ್ತೀಗಲೂ ಅವರ ಕಂಡರೆ ಒಮ್ಮೊಮ್ಮೆ ಹಾಗಾಗುವುದು ಶುದ್ಧ ಸುಳ್ಳೇನಲ್ಲ..

ಆಗ ಮಾಧವ, ಮತ್ತೀಗ ಮಿಲಿಂದ
ಯಾರನ್ನೋ ಮದುವೆಯಾದದ್ದು ಕೇಳಿ;
ಹೊಟ್ಟೆಕಿಚ್ಚು ಹೆಚ್ಚಾಗಿ, ನಿಗಿಕೆಂಡ ಕಣ್ಣಾಗಿ,
ಮನಸ್ಸು -ಸಮಾ…, ಒಂದೇ ಸಮಾ
ಉರಿದಿತ್ತು..

ಈಗಲೂ ಆಗೀಗ್ಗೆ ಮುನಿಸಿನ ದಿನಗಳಲಿ
‘ನನ್ನವರು’ ರಮಿಸಲು ಮರೆತರೋ…
ಅದೇ ಮಾಧವ – ಮಿಲಿಂದರು, ಮತ್ತೆ
ಬಳಿಬರಲು ಕನಸಲೂ ಕಾದಾಡುವರು..

ಹಗಲುಗನಸು ಮರೆಯಾದ ಮೇಲೆ,
‘ನನ್ನವರೇ’ ನನಗೆ ಸದಾ
ಸರ್ವಪ್ರಿಯರಾಗಿ ಉಳಿಯುವರು…

{ಸದಾ ಹರೆಯಕ್ಕೆ ಅಂಟಿಕೊಳ್ಳುವ ಈ
ಮನಸ್ಸೆಂದರೆ ಹೀಗೆಯೇ…?! }

– ವಸುಂಧರಾ ಕೆ ಎಂ., ಬೆಂಗಳೂರು

5 Responses

  1. SmithaAmrithraj. says:

    Chendide kavite.vasundhara

  2. ನಯನ ಬಜಕೂಡ್ಲು says:

    Beautiful madam ji. ಈ ಕವನ ಓದಿ ನನಗೂ ಮತ್ತೆ ನೆನಪಾಗುತ್ತಿದೆ ತೆರೆಮರೆಯಲ್ಲಿ ಅವಿತಿದ್ದ ಆ ಕನಸು . ಮತ್ತೆ ಹುಡುಕಾಟದಲ್ಲಿ ತೊಡಗಿತು ಮನಸು .

  3. Nagarekha Gaonkar says:

    ಸಹಜವಾಗಿ ಹೇಳುವುದು ಕಲೆ.
    ಚೆಂದ. ಇಷ್ಟವಾಯ್ತು

  4. ಪೂರ್ಣಿಮಾಸುರೇಶ್ says:

    ಕವಿತೆ ಚೆಂದ ವಸುಂಧರಾ

  5. Shankari Sharma says:

    ಸುಂದರ ಕವನ.

Leave a Reply to ಪೂರ್ಣಿಮಾಸುರೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: