ಮೊಗ್ಗರಳುವ ಮೊದಲೇ…

Share Button

ಅದೊಂದು  ಸಂಜೆ  ಮನೆಯ  ಅಂಗಳದಲ್ಲಿ  ಹೂಗಿಡಗಳನ್ನು  ನೋಡುತ್ತಾ  ನಿಂತಿದ್ದೆ. ಪಾತರಗಿತ್ತಿಯೊಂದು  ಗುಲಾಬಿಯ ಎಳೆ ಮೊಗ್ಗಿನ  ಮೇಲೆ  ಕುಳಿತು  ತದೇಕಚಿತ್ತದಿಂದ  ಮಕರಂದ  ಹೀರುತ್ತಿತ್ತು.  ಸುಮಾರು  20  ನಿಮಿ‍ಷಗಳು  ಕಳೆದರೂ  ಅದೇ ಧ್ಯಾನಮಗ್ನ  ಸ್ಠಿತಿ. ಮನಸನ್ನು  ಅತಿಯಾಗಿ  ಕಾಡಿದ  ಆ  ದೃಶ್ಯವನ್ನು  ಮೊಬೈಲ್  ಕ್ಯಾಮರಾದಲ್ಲಿ  ಸೆರೆ  ಹಿಡಿದೆ. ಇನ್ನೂ  ಎಷ್ಟು ಹೊತ್ತು  ಆ  ಸ್ಠಿತಿಯಲ್ಲಿ  ಇರುತ್ತಿತ್ತೋ  ಪಾತರಗಿತ್ತಿ!  ಅರ್ಧ  ಘಂಟೆಯ  ಬಳಿಕ  ಗುಲಾಬಿ  ಗಿಡದ  ಗೆಲ್ಲನ್ನು  ಮೆಲ್ಲನೆ ಮುಟ್ಟಿದೆ. ಪಾತರಗಿತ್ತಿ  ಹಾರಿ  ಹೋಯಿತು. ನನ್ನ  ಮನದಲ್ಲಿ  ಹಲವು  ಯೋಚನೆಗಳು…….

“ಮೊಗ್ಗರಳುವ  ಮೊದಲೇ  ಈ  ಪಾತರಗಿತ್ತಿಗೆ  ಮಕರಂದ  ಹೀರುವ  ತವಕ  ಯಾಕೋ” . ಮೊಗ್ಗು  ನಲುಗಿತ್ತು. ಅದೇ ದಿನ  ವೃತ್ತ ಪತ್ರಿಕೆಯಲ್ಲಿ  ಬಂದಿತ್ತು  ಸುದ್ದಿ -“ಅಪ್ರಾಪ್ತ  ಬಾಲಕಿಯ  ಅತ್ಯಾಚಾರ  ಮಾಡಿ  ಕೊಲೆ”. ನಲುಗಿದ  ಎಳೆ  ಮೊಗ್ಗು, ವಿಕೃತ  ಕಾಮಿಯ  ಕಾಮಲಾಲಸೆಗೆ  ಬಲಿಯಾದ ಎಳೆ  ಹೆಣ್ಣು  ಮಗು- ಎರಡನ್ನೂ  ಮನ  ಸಮೀಕರಿಸಿತು. ಪಾತರಗಿತ್ತಿಗೂ  ತವಕ. ಹೂವರಳುವ  ತನಕ  ಕಾಯುವ  ವ್ಯವಧಾನವಿಲ್ಲ. ಎಳೆಯ  ಹೆಣ್ಣು  ಮಗುವನ್ನು ಭೋಗಿಸಿ  ಕೊಲೆ  ಮಾಡಿದ  ಆ  ವಿಕೃತ ಕಾಮಿಯ ಕ್ರೂರತೆ ಪುಟ್ಟ ಕಂದಮ್ಮನ ಬದುಕುವ ಹಕ್ಕನ್ನು ಕಸಿದಿತ್ತು. ಹೂವಾಗಿ ಅರಳಬೇಕಿದ್ದ ಮೊಗ್ಗು ಕಮರಿತ್ತು. ಹೂವೂ- ಹೆಣ್ಣೂ ಎರಡೂ…..

 

 

-ಕೃಷ್ಣಪ್ರಭಾ, ಮಂಗಳೂರು

7 Responses

 1. Avatar Nayana Bajakudlu says:

  ಹೂವು – ಹೆಣ್ಣು ಎರಡರ ನಡುವೆಯೂ ಅದೆಷ್ಟೊಂದು ಸಾಮ್ಯತೆ . ಪುಟ್ಟ ಹೆಣ್ಣು ಮಕ್ಕಳೂ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಒಳಗಾಗುತ್ತಿರುವುದು ದುರಂತವೇ ಸರಿ .

 2. Avatar Pranam says:

  Wonderful mam

 3. Avatar Anonymous says:

  Good one

 4. Avatar Anonymous says:

  Nice writing

 5. Avatar Rama.M says:

  Chennagide

 6. Avatar jyothi says:

  ಲೇಖನ ತುಂಬಾ ಚೆನ್ನಾಗಿ ಬಂದಿದೆ..ಭಾಷೆಯ ಹಿಡಿತ ಅದ್ಭುತ ..

 7. Avatar Krishnaprabha says:

  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: