ರೆಡ್ ಕ್ರಾಸ್ ಸಂಸ್ಥೆ

Share Button

ಅದು 19 ನೆಯ ಶತಮಾನದ ಕಾಲ, ಒಂದರ ಹಿಂದೆ ಒಂದರಂತೆ ಯುದ್ಧಗಳು ತಾಂಡವವಾಡುತ್ತಿದ್ದ ಕಾಲ. ಆಗ ಜನರು ಗಾಯಗೊಂಡಾಗ, ಸಾವನ್ನಪ್ಪುವ ಸಮಯದಲ್ಲಿ, ಸುಷ್ರೂಶೆ ನಡೆಸಲು  ಸಾದ್ಯವಾಗದಂತಹ ಕಠಿಣ ಸಮಯದಲ್ಲಿ ಜನರ ಆರೋಗ್ಯಕ್ಕಾಗಿ ನಿರ್ಮಿತವಾದಂತಹ ಸಂಸ್ಥೆಯೆಂದರೆ ಅದು ರೆಡ್ ಕ್ರಾಸ್.

ರೆಡ್ ಕ್ರಾಸ್ ಸಂಸ್ಥೆಯು ರಾಜಕೀಯ, ಧಾರ್ಮಿಕ ನಂಬಿಕೆಗಳು ,ರಾಷ್ಟ್ರೀಯತೆ ,ವರ್ಗ ಮುಂತಾದುವುಗಳ ತಾರತಮ್ಯವಿಲ್ಲದೆ ಸಹಾಯ ಮಾಡುವ ವಿಶ್ವದ ಅತ್ಯಂತ ದೊಡ್ಡ ಮಾನವೀಯ  ಸಂಘಟನೆಯಾಗಿದೆ. ಮಾನವನ ಜೀವ ಹಾಗೂ ಆರೋಗ್ಯವನ್ನು ರಕ್ಷಿಸಲು ಸ್ಥಾಪಿತವಾದ ಈ ಸಂಸ್ಥೆ ಪ್ರಪಂಚದಾದ್ಯಂತ 17 ಮಿಲಿಯನ್ ಗೂ ಅಧಿಕ ಸದಸ್ಯರನ್ನು, ಸ್ವಯಂಸೇವಕರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಹೊಂದಿದೆ.

ರೆಡ್ ಕ್ರಾಸ್ ಸಂಸ್ಥೆಯ ಲೋಗೋಗಳು ಇಂಗ್ಲೀಷ್, ಫ್ರೆಂಚ್, ಸ್ಪ್ಯಾನಿಷ್, ಅರೇಬಿಕ್,  ಚೈನೀಸ್, ರಷ್ಯನ್ ಹೀಗೆ ಆರು ಅಧಿಕೃತ ಭಾಷೆಗಳಲ್ಲಿ ಇದೆ.  ಬೇರೆ ಬೇರೆ ದೇಶಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ. ಭಾರತದಲ್ಲೂ ರೆಡ್ ಕ್ರಾಸ್ ಸಂಸ್ಥೆ ಇದೆ . ಇದು ಇಂಟರ್ನ್ಯಾಷನಲ್ ರೆಡ್ ಕ್ರಾಸ್ ಅಂಡ್  ರೆಡ್ ಕ್ರೆಸೆಂಟ್ ಮೂವುಮೆಂಟ್ ನ ಮೂಲಭೂತ ತತ್ವಗಳನ್ನು ಒಳಗೊಂಡಿದೆ ಹಾಗೂ ಅದರ ಒಂದು  ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದಾದ್ಯಂತ 700 ಕ್ಕೂ ಅಧಿಕ ಶಾಖೆಗಳನ್ನು ಇದು ಹೊಂದಿದೆ.

ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಪ್ರೇರಿತ ಸೇವೆ,  ಏಕತೆ, ಮತ್ತು ಸಾರ್ವತ್ರಿಕತೆ ಇವೆಲ್ಲಾ ರೆಡ್ ಕ್ರಾಸ್ ನ ತತ್ವಗಳಾಗಿದೆ. ಹೆನ್ರಿ ಡೂನಾಂಟ್ 1863 ರಲ್ಲಿ ರೆಡ್ ಕ್ರಾಸ್ ನ ಲೋಗೋವನ್ನು ವಿನ್ಯಾಸಗೊಳಿಸಿದರು. ರೆಡ್ ಕ್ರಾಸ್ ನ ವಿನ್ಯಾಸವು 1864 ರಲ್ಲಿ ಮೊದಲ ಜಿನೀವಾ ಸಮಾವೇಶದಿಂದ ಹುಟ್ಟಿಕೊಂಡಿತು.  ಪ್ರತೀ ವರ್ಷ ಮೇ 8 ರಂದು ರೆಡ್ ಕ್ರಾಸ್ ದಿನವನ್ನಾಚರಿಸಲಾಗುತ್ತದೆ . ಯಾಕೆಂದರೆ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದ ಹೆನ್ರಿ ಡೂನಾಂಟ್ ನ ಹುಟ್ಟಿದ ದಿನ ಅದಾಗಿದೆ.  ಆಸ್ಪತ್ರೆ ಸೇವೆಗಳು, ಬೢಡ್ ಬ್ಯಾಂಕ್, ಹೆಚ್ ಐ ವಿ / ಏಡ್ಸ್ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಮಾತೃತ್ವ, ಮಕ್ಕಳ ಮತ್ತು ಕುಟುಂಬ ಕಲ್ಯಾಣ, ನರ್ಸಿಂಗ್, ಸಂವಹನ ಮತ್ತು ಸಾಂಕ್ರಾಮಿಕ ರೋಗಗಳ ಸನ್ನದ್ಧತೆ ಮತ್ತು ತಡೆಗಟ್ಟುವಿಕೆ, ಬೆಂಕಿಯ ಪರಿಹಾರ ಕಾರ್ಯಗಳು , ರೈಲ್ವೆ ಮತ್ತು ಇತರ ಅಪಘಾತಗಳು, ವಿಕಲಚೇತನರಿಗೆ ಸಹಾಯ, ಇನ್ನೂ ಅನೇಕ ಬಗೆಯ ಸಹಾಯಗಳನ್ನು ರೆಡ್ ಕ್ರಾಸ್ ಸಂಸ್ಥೆಯು ಜನರಿಗೆ ಒದಗಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಾನವ ಜನ್ಮಕ್ಕಿಂತ ದೊಡ್ಡದಾದದ್ದು ಏನಿದೆ ? ಹೀಗೆ ಸಾವು – ನೋವಿನ ಆಟಗಳ ಮಧ್ಯೆ ಆಪತ್ಕಾಲದ ನೆಂಟನಂತೆ ಸಹಾಯದ ಹಸ್ತ ಚಾಚುವ ರೆಡ್ ಕ್ರಾಸ್ ಗೆ ಕೋಟಿ ಕೋಟಿ ನಮನಗಳು.

-ಸಹ್ಯಾದ್ರಿ ರೋಹಿತ್ , ಕಡಬ

6 Responses

  1. Hema says:

    ಸಾಂದರ್ಭಿಕ ಬರಹ, ಮಾಹಿತಿಪೂರ್ಣವಾಗಿದೆ.

  2. Prem Uday Kumar says:

    Nice

  3. Shridhar says:

    Good info keep it up

  4. shashikala says:

    ಉತ್ತಮ ಮಾಹಿತಿಯುಳ್ಳ ಬರಹ

  5. Pallavi Bhat says:

    ಮಾಹಿತಿಪೂರ್ಣ ಬರಹ.

Leave a Reply to shashikala Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: