ದೀಪಾವಳಿ…

Share Button

.

ಅನನ್ಯ ಭಕ್ತಿಯಿ಼ಂದ
ಮಾಲಿಂಗನ ಬಳ್ಳಿಯಿಂದ  ಅಲಂಕರಿಸಿದ ಗಂಗೆಯನು ಪೂಜಿಸಿ,
ಆಚರಿಸೋಣ ದೀಪಾವಳಿ
ಹಬ್ಬವ ಸಂಭ್ರಮ ಸಡಗರದಿಂದ,.

ಅಮ್ಮ/ಅಜ್ಜಿಯರ
ಅಮೃತ ಹಸ್ತದಿಂದ
ಆಯುಷ್ಯವಂತನಾಗು,
ಭಾಗ್ಯವಂತನಾಗು ಎಂಬ ಆಶೀರ್ವಚನದೊಂದಿಗೆ
ಎಣ್ಣೆಶಾಸ್ತ್ರ ಮುಗಿಸಿಕೊಂಡು
ಆರತಿ ಮಾಡಿಸಿಕೊಂಡು
ಆರತಿ ತಟ್ಟೆಯಲಿ
ಆರತಿ ಮಾಡಿದವರಿಗೆ ಯಥಾಶಕ್ತಿ ನೋಟುಹಾಕಿ
ಅಭ್ಯಂಜನ ಸ್ನಾನ ಮುಗಿಸಿಕೊಂಡು
ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ,.

ಆಕಾಶಬುಟ್ಟಿ ತೂಗಿಹಾಕಿ
ಮನೆಯ ಎಲ್ಲೆಡೆ
ಪ್ರಣತಿ ದೀಪ /ಹಣತೆ ಬೆಳಗಿ
ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿ
ಹೊಸ ವಸ್ತ್ರಗಳ ಧರಿಸಿ
ಬಂಧು ಬಳಗದೊಂದಿಗೆ
ಮೆರೆದಾಡಿ,
ಅಂಗಡಿಗಳ ಲಕ್ಷ್ಮೀಪೂಜೆ ನೋಡಲು ಅಡ್ಡಾಡಿ
ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ,

ಅಳಿಯತನ
ಅಕ್ಕನತದಿಗಿ,ಭಾವಬಿದಿಗಿ,
ಅಮ್ಮನ ಚೌತಿ ಮಾಡಿ, ಪಗಡೆಯಾಟ ಆಡಿ,
ಯಾವುದಾದರೊಂದು
ಪ್ರಮುಖ ಪತ್ರಿಕೆಯ ದೀಪಾವಳಿ ವಿಶೇಷಾಂಕವ ಕೊಂಡು ಓದಿ,
ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ…

-ಮಾಲತೇಶ  ಹುಬ್ಬಳ್ಳಿ

2 Responses

  1. ಕಾಂತಿ ಎಸ್ ಎ says:

    ಬಹುಷ್ಯ ಈ ವರ್ಷದ ಎಲ್ಲಾ ಆಚರಣೆಗಳು ನಿಮ್ಮ ಕವನದಲ್ಲಿ ಮಿಂದೆದ್ದಿವೆ. ಸುಂದರ ಕವಿತೆ ಮಾಲತೇಶ್ ಸರ್.

  2. Shankari Sharma says:

    ಚಂದದ ಕವನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: