ಸಿರಿಗನ್ನಡ ಸವಿಗನ್ನಡ…….

Share Button

 

ಸಿರಿಗನ್ನಡ ಸವಿಗನ್ನಡ
ಮನ-ಮನಗಳ ಬೆಸೆಯುತ್ತಾ
ಬದುಕನ್ನು ಸಿಹಿಯಾಗಿಸುವ
ಸಿಹಿಗನ್ನಡ ಕನ್ನಡ ಕನ್ನಡ ಕನ್ನಡ||ಪ||

ತ್ರಿಪದಿ ಛಂದಸ್ಸಿನಿಂದ ರಚನೆಗೊಂಡ
ಕಪ್ಪೆ ಅರಭಟ್ಟನ ಶಾಸನವ ನೋಡು.
ಶ್ರಿವಿಜಯನ ಕವಿರಾಜ ಮಾರ್ಗ
ಹೆಚ್ಚಿಸಿತು ದೇಸಿ ಸಾಹಿತ್ಯದ ಸೊಗಡು||ಪ||

ಹಳೆಗನ್ನಡ ನಡುಗನ್ನಡ ಹೊಸಗನ್ನಡದ
ಕಂಪು ಹರಡಿತು ಜಗದಗಲ ವಿಸ್ತೃತವಾಗಿ.
ವ್ಯಾಸ ದಾಸ ಸಂತರು ತಿರ್ಥರು ಕೊಡುಗೆ
ನೀಡಿದರು ಸವಿಗನ್ನಡದ ಬೆಳವಣಿಗೆಗಾಗಿ.||ಪ||

ಹೊಸ ದಿಗಂತದೆಡೆಗೆ ಒಯ್ದ ನವೋದಯ ನವ್ಯ
ನವ್ಯೋತ್ತರ ದಲಿತ ಬಂಡಾಯ ಸಾಹಿತ್ಯಗಳು.
ಭವ್ಯ ಕನ್ನಡ ನಾಡ ಕಟ್ಟಲು ಶ್ರಮಿಸಿದ
ಕವಿ ಸಾಹಿತಿ ಲೇಖಕ ಮನಗಳು.||ಪ||

ಪ್ರಸ್ತುತ ದಿಸ್ಸು, ದಟ್ಟು, ಎನ್ನಡಗಳ ನಡುವೆ
ಕನ್ನಡ ಸೊರಗುತಿದೆ ಎಂದು ತಿಳಿಯದಿರು.
ಅನಾಮಿಕರಿಗೂ ಕನ್ನಡ ನಾಡು ಅನ್ನ ನೀರು ಗಾಳಿ
ನೀಡಿ ಪೊರೆಯುತಿಹುದ ಮರೆಯದಿರು.||

ಕನ್ನಡವ ಉಳಿಸಿ.. ಉಳಿಸಿ… ಎಂದು ಬೊಬ್ಬೆ
ಇಟ್ಟು ಹೋರಾಡದಿರು.
ಪರಭಾಷೆಯ ವ್ಯಾಮೋಹ ಬಿಟ್ಟು
ಕನ್ನಡವನ್ನು ಮಾತಾಡುತಿರು.||ಪ||

ಸಿರಿಗನ್ನಡ ಸವಿಗನ್ನಡ
ಮನ-ಮನಗಳ ಬೆಸೆಯುತ್ತಾ
ಬದುಕನ್ನು ಸಿಹಿಯಾಗಿಸುವ
ಸಿಹಿಗನ್ನಡ ಕನ್ನಡ ಕನ್ನಡ ಕನ್ನಡ.||ಪ||
                                                    
ಧಿಮಾಕು_ಬಿಡಿ_ಕನ್ನಡ_ಮಾತಾಡಿ
ಕನ್ನಡವನ್ನು ನಾವು ಉಳಿಸುತ್ತಿಲ್ಲ,
ಕನ್ನಡ ನಮ್ಮನ್ನು ಉಳಿಸುತ್ತಿದೆ.

-ರಾಜೇಶ ಎಸ್ ಜಾಧವ ,ಬಾಗಲಕೋಟ.

2 Responses

  1. Venkatesh Rasthepalya says:

    ಕನ್ನಡ ಭಾಷೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಕವನ ತುಂಬಾ ಸುಂದರವಾಗಿದೆ. ಧನ್ಯವಾದಗಳು ತಮಗೆ.

Leave a Reply to Venkatesh Rasthepalya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: