ಸತ್ಯವೋ? ಸುಳ್ಳೋ? ನೀವೇ ಹೇಳಿ!

Share Button

ಸುಳ್ಳು ಸಿಹಿಯಂತೆ. ಆದರೆ ಸುಳ್ಳಿನ ನಿಜ ತಿಳಿದಾಗ ಅದರಷ್ಟು ಕಹಿ ಬೇರೆ ಇಲ್ಲ. ಆದರೂ ಯಾಕೆ ಈ ಸುಳ್ಳಿನ ಸಂತೆ?ರಂಗು ರಂಗಾದ ಸುಳ್ಳುಗಳು. ಬೆಲೆ ಕೊಟ್ಟಷ್ಟು ರಂಗೇರುವ ಸುಳ್ಳು! ಆದರೆ ಬೆಲೆ ಕಟ್ಟಲಾಗದ ಸತ್ಯಕ್ಕೆ ಸಮವೆ?

ಸಮಾಧಾನಪಡಿಸುವ ಸುಳ್ಳು, ಸಂತೋಷಪಡಿಸುವ ಸುಳ್ಳು, ದುಃಖ ತರುವ ಸುಳ್ಳು, ಸಿಟ್ಟಿಗೇಳಿಸುವ ಸುಳ್ಳು, ಆಶರ್ಯಕ್ಕೂ ಸುಳ್ಳು, ನವರಸಕ್ಕೂ ಸುಳ್ಳು, ಹೊಟ್ಟೆ ತುಂಬಿಸುವ ಸುಳ್ಳು, ಸಾಯಿಸುವ ಸುಳ್ಳು, ಬದುಕಿಸುವ ಸುಳ್ಳು ಇತ್ಯಾದಿ. ಒಹೋ! ಎಷ್ಟೊಂದು ಸುಳ್ಳುಗಳು ಸಂತೆಯಲ್ಲಿ! ನಿಮ್ಮ ಅನುಕೂಲಕ್ಕೆ ತಕ್ಕಂತೆ ಸುಳ್ಳುಗಳ ಖರೀದಿ ಮಾಡಿ. ಚೌಕಾಶಿಯೇ ಇರದ ಸುಳ್ಳಿನ ವ್ಯವಹಾರ.

ಸುಳ್ಳನ್ನು ಒಯ್ಯುವಾಗ ತಕ್ಕಡಿಯಲ್ಲಿ ತೂಗಿ ಎಷ್ಟು ಬೇಕೋ ಅಷ್ಟೇ ಒಯ್ಯಬೇಕೆಂಬುದು ಸುಳ್ಳಿನ ಸಂತೆಯ ಕಿವಿಮಾತಂತೆ. ಸುಳ್ಳಿನ ಸಂತೆಗೆ ಸಾವೇ ಇಲ್ಲ. ಏಕೆಂದರೆ ಸತ್ಯಕ್ಕೆ ಸುಳ್ಳಿನ ಲೇಪನ ಎಷ್ಟು ಹಚ್ಚಿದರೂ, ದೀರ್ಘಕಾಲ  ಬಾಳುವುದಿಲ್ಲವಲ್ಲ! ಸುಳ್ಳನ್ನು ಬದಲಾಯಿಸಲೂ ಬಹುದು. ಈ ಆಯ್ಕೆ ಸತ್ಯಕ್ಕಿಲ್ಲ. ಸುಳ್ಳನ್ನು ಸುಳ್ಳಾಗಿಸುವ ಪ್ರಯತ್ನವದು. ಆದರೆ ಸುಳ್ಳನ್ನು ಸುಳ್ಳಾಗಿಸಿದರೆ ಸತ್ಯವಾಗುವುದು ಎಂಬ ಮಾತು ಪೂರ್ತಿ ಸತ್ಯವಲ್ಲ.

ಸುಳ್ಳಿಗೆ ಸುಳ್ಳನ್ನು ಎಷ್ಟೇ ಲೇಪಿಸಿದರೂ ಮೂಲ ಸತ್ಯವನ್ನು ಮರೆಮಾಚಲು ಸಾಧ್ಯವೇ ಇಲ್ಲ. ಸತ್ಯವನ್ನು ಬಚ್ಚಿಡಲು ಹೋದಷ್ಟು ನಮಗೆ ನಾವು ಮೋಸ ಮಾಡಿಕೊಳ್ಳುತ್ತೇವೆ. ಸುಳ್ಳಿನಿಂದ ಸತ್ಯವನ್ನು ಕೊಳ್ಳಲೂ ಆಗದು, ಕೊಲ್ಲಲೂ ಆಗದು. ಸತ್ಯಕ್ಕೆಂದೂ ಸಾವಿಲ್ಲ.

“ಸತ್ಯಮೇವ ಜಯತೇ”

– ಸ್ವಪ್ನ, ಪಿ.ಎಸ್ 

4 Responses

  1. Shruthi Sharma says:

    ಚಿಕ್ಕ, ಚೊಕ್ಕ, ಅರ್ಥಪೂರ್ಣ ಬರಹ.. ತುಂಬಾ ಇಷ್ಟವಾಯಿತು 🙂

  2. Shankari Sharma says:

    ಸುಳ್ಳಿನ..ಸುಳ್ಳಾಗದ ಬರಹ ಚೆನ್ನಾಗಿದೆ.

  3. ಎಸ್ ಎ ಕಾಂತಿ, ಕೈಗಾ says:

    ’ಓ ಮಯ್ಯಾ ಮೇರಿ ಮೈ ನಹಿ ಮಾಖನ ಖಾಯೋ’ ಎಂದು ಕೃಷ್ಣ ಹೇಳಿದ ಸುಳ್ಳಿನಿಂದಾಗಿಯೇ ಯಶೋದೆಗೆ ವಿಶ್ವ ದರ್ಶನವಾಗಿದ್ದು ಅಲ್ಲವೇ? ಆ ಸುಳ್ಳು ಹೇಳದೆ ಇದ್ದರೆ ಯಶೋದೆ ಬ್ರಹ್ಮಾಂಡ ದರ್ಶನವಾಗುತ್ತಲೆ ಇರಲಿಲ್ಲ. ಈಗ ಹೇಳಿ ಸುಳ್ಳು ಸತ್ಯಕ್ಕೆ ಸಮವಲ್ಲದಿದ್ದರೆ ಬ್ರಹ್ಮಾಂಡದಷ್ಟು ಚಿಕ್ಕದೇ?

  4. Vani says:

    Haha. Good one. ಈಗಿನ ಪ್ರಪಂಚ ಕೆ ಸುಳ್ಳೇ ಬೇಕು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: