ನನ್ನ ಪ್ರಥಮ ವಿಮಾನ ಯಾನ…

Share Button

ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ ತಮ್ಮ; ಅವನ ಕುಟುಂಬದೊಂದಿಗೆ ನನ್ನನ್ನೂ ಕರೆದಿದ್ದ.

ತಯಾರಿ- ನಾಲ್ಕು ದಿನ ಮುಂಚಿತವಾಗಿ ಟಿಕೆಟ್ ಬುಕ್ ಆನ್ ಲೈನಲ್ಲಿ ಮಾಡಿದ್ದ ತಮ್ಮ (ಮಂಗಳೂರು ಎಮ್.ಆರ್.ಪಿ.ಎಲ್ ಆಡಿಟರ್ ಆಗಿದ್ದವ) . 13.04.2018  ರಂದು ಮಂಗಳೂರು ಬಜಪ್ಪೆ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.30 ಕ್ಕೆ ಟಿಕೆಟ್ ಬುಕ್ ಮಾಡಿದ್ದ. ನಮ್ಮ ಬ್ಯಾಗ್ ಸೆಟ್ಟಿನ ವ್ಯವಸ್ಥೆಗೆ ಒಬ್ಬೊಬ್ಬರದು 15 ಕೆ.ಜಿ ಒಳಗಿರಬೇಕು. ಚಾಕು, ಪ್ಲಾಸ್ಟಿಕ್ ಬಾಟ್ಳಿ ವಗೈರೆ ಒಯ್ಯುವ ಹಾಗಿಲ್ಲ. ಆಧಾರ್ ಕಾರ್‍ಡ್ ಪ್ರತಿ ಸ್ಟೆಪ್ಪಿನಲ್ಲೂ ತನಿಖೆ ಮಾಡುವರು. ಎಂಬಿತ್ಯಾದಿ ನಿಯಮಗಳನ್ನು ತಮ್ಮ ನನ್ನೊಡನೆ ಕಿವಿಮಾತು ಹೇಳಿದ್ದ.ಹೊರಡುವ ದಿನ ಪ್ರಾತಃಕಾಲ; ಟಿಕೇಟಿನಲ್ಲಿ ನಿಗದಿ ಪಡಿಸಿದ ಸಮಯಕ್ಕಿಂತ ಸ್ವಲ್ಪ ವಿಳಂಬವಾಗುವುದು ಹಾಗೂ ಹೊರಡಲು  8.30  ರ ಬದಲು 11 ಎ.ಎಮ್ ಗೆ ಎಂಬ ಸೂಚನೆ ಮೊಬೈಲಿಗೆ ಬಂತು.ಅಷ್ಟೊತ್ತಿಗೆ ಆ ಉತ್ಸಾಹಕ್ಕೆ ಒಂದಿನಿತು ಬ್ರೇಕು ಬಿದ್ದರೂ 10 ಗಂಟೆ ಮುಂಚಿತವಾಗಿ ಬಜಪ್ಪೆ ವಿಮಾನ ನಿಲ್ದಾಣಕ್ಕೆ ನಾವೆಲ್ಲ ಟ್ಯಾಕ್ಸಿಯಲ್ಲಿ ಹಾಜರಾದೆವು.

ವಿಮಾನ ನಿಲ್ದಾಣದಲ್ಲಿ-ಸ್ಟೇಶನ್ನಲ್ಲಿ ನಾಲ್ಕು ಕಡೆ ತಪಾಸಣೆ!. ಬ್ಯಾಗುಗಳ ತಪಾಸಣೆಗೆ ನಮ್ಮ ನಮ್ಮ ಡ್ರೆಸ್‌ಬ್ಯಾಗುಗಳನ್ನೂ ವ್ಯಾನಿಟಿಬ್ಯಾಗುಗಳನ್ನೂ ಸಂಬಂಧಪಟ್ಟ ಮಿಶನಿನ ಟ್ರೇಗೆ ಹಾಕಲು ಸೂಚಿಸಿದಾಗ ನನಗಂತೂ ಎದೆ ಡಬಡಬ ಅಂತು. ಪರ್ಸು,ಮೊಬೈಲು ಇತರ ಸರಂಜಾಮಗಳು ಹಾನಿಯಾಗದೆ ನಮ್ಮಕೈಸೇರಿದರೆ ಸಾಕಪ್ಪ ಅನ್ನಿಸಿತು!. ನನ್ನ ಕಸಿವಿಸಿ ಕಂಡು ತಮ್ಮ ಏನೂ ಚಿಂತೆ ಬೇಡ ಬಿಡು ಅಂದ. ನಮ್ಮ ತಪಾಸಣೆಗಾಗಿ ಎರಡೆರಡು ಬೂತುಗಳ ಹೊರಗೆ ಕೂರಬೇಕಿತ್ತು ಕೂದೆವು. ಒಂದೊಂದೇ ತಪಾಸಣೆಯಾಗಿ ಮುಂದಿನ ಚೇಂಬರಿಗೆ ಬಂದೆವು.ಒಂದಷ್ಟು ಹೊತ್ತಲ್ಲಿ ಈ ತಪಾಸಣಾ ವಿಧಾನಗಳೆಲ್ಲ ಮುಗಿದ ಮೇಲೆ ವಿಮಾನ ಹೊರಡುವ ವೇಳೆಯು ಧ್ವನಿವರ್ಧಕದಲ್ಲಿ ಬಿತ್ತರಗೊಳ್ಳುತ್ತಿತ್ತು.

ಅಂತೂ ವಿಮಾನ ಬಂತು.ಎಲ್ಲಾ ವಿಮಾನಗಳೂ ರೈಲು, ಬಸ್ಸುಗಳಂತೆ ಸ್ಟೇಶನಿನ ಬದಿವರೆಗೆ ಬಾರದೆ ಒಂದಷ್ಟು ಅಂತರದಲ್ಲಿ ನಿಲ್ಲುವುದು.ವಿಮಾನಕ್ಕೆ ವಿಶಾಲ ಮೈದಾನು!. ಏರಿದೆವು ಏರೋಪ್ಲೇನು-ವಿಮಾನ ನಿಂದೆಡೆಗೆ ಕರೆದೊಯ್ಯಲು ಅದದು ವಿಮಾನದ ಹೆಸರಿನ ಬಸ್ಸು!.ವಿಮಾನಕ್ಕೆ ಹತ್ತಲು ಸ್ಟೆಫ್‌ಗಳ ಏಣಿ!. ಹತ್ತುವಾಗಲೂ ಆಧಾರ ಕಾರ್ಡಿನ ತಪಾಸಣೆ!. ಅಂತೂ ಬಹಳ ಉತ್ಸಾಹದಲ್ಲಿ ವಿಮಾನ ಹತ್ತಿದೆ!!!. ಹತ್ತುವಾಗಲೇ ಗಗನಸಖಿಯರ ನಗುಮೊಗದ ಸ್ವಾಗತ!!(ತಮ್ಮಲ್ಲಿಗೆ ಅತೀ ಆತ್ಮೀಯರು ಬಂದಂತೆ). ಅವರವರ ಸೀಟಿನ ನಂಬರು ನೋಡಿ ಕುಳಿತುಕೊಂಡೆವು. ನನಗೆ ಕಿಟಿಕಿ ಬದಿಯ ಸೀಟು.ಸೀಟಿನಲ್ಲಿ ಆಸೀನರಾದಕೂಡಲೇ ಬೆಲ್ಟ್ ಕಟ್ಟಿಕೊಳ್ಳಲು ಸೂಚನೆ ಬಂತು. ಬೆಲ್ಟ್ ಸಿಕ್ಕಿಸಿಕೊಳ್ಳಲು ಹಾಗೂ ಬಿಡಿಸುವುದಕ್ಕೆ ಹೇಳಿಕೊಟ್ಟರು. ಹಾಗೆಯೇ ವಿಮಾನ ಹೊರಡುವ ವೇಳೆ, ಅದು ಪ್ರಯಾಣ ಮಾಡುವ ಸಮಯ, ನಮ್ಮ ಸ್ಟೇಶನ್ ತಲಪುವ ಸಮಯಗಳನ್ನು ಗಗನಸಖಿಯರು ಬಿತ್ತರಿಸಿದರು.ಪ್ರಥಮವಾಗಿ ಒಂದು ಕಿಲೋಮೀಟರಿನಷ್ಟು ನೆಲಮಾರ್ಗದಲ್ಲಿ ಚಲಿಸಿದ ವಿಮಾನ ಮತ್ತೆ ಆಗಸಕ್ಕೆ ಜಿಗಿಯಿತು.ಅಷ್ಟರಲ್ಲಿ ಅದರ ಬದಿಯ ಎರಡೂ ರೆಕ್ಕೆಗಳಲ್ಲಿ ನೇತಾಡುತ್ತಿದ್ದ ಚಕ್ರಗಳು ಒಳಗೆ ಸರಿದವು!. ನಾನು ಕಿಟಿಕಿಯ ಹೊರಗೆ ನೋಡುತ್ತಿದ್ದೆ. ಮೆಲ್ಲ ಮೆಲ್ಲನೆ ದೊಡ್ಡ ದೊಡ್ಡ ಮನೆಗಳು,ಮರಗಳು ಪುಟ್ಟಪುಟ್ಟದಾಗುತ್ತಾ ಬಂದುವು. ಕಟ್ಟೋಣಗಳು ಬೆಂಕಿಪೊಟ್ಟಣದಂತೆ, ಮರಗಳು ಹುಲ್ಲು ಹಾಸಿನಂತೆ, ಡಾಮರು ಮಾರ್ಗಗಳು ಕರಿಹಾವು ಹರಿದಾಡಿದಂತೆ ಕಂಡವು. ಸ್ವಲ್ಪ ಹೊತ್ತಲ್ಲಿ ಬಿಳಿಮೋಡಗಳು ನಮ್ಮಿಂದ ಕೆಳಗೆ ಅರಳೆ ಬಿಚ್ಚಿಕೊಂಡಂತೆ ಕಂಡವು!!.ನೆಲಬಿಟ್ಟು ಆಗಸದಲ್ಲಿ ಹಾರುವ ಪರಿ!!.ಮನಕ್ಕೆ ಆಹ್ಲಾದ ಒಂದೆಡೆಯಾದರೆ;ವಿಮಾನದೊಳಗಿದ್ದ ನಮ್ಮ ಇರುವಿಕೆಗೆ ಗಟ್ಟಿ ಆಧಾರ…!.ನೆಲಬಿಟ್ಟ ವಿಮಾನ ಹಾಗೂ ಅದರ ಚಾಲಕನ ನಿಯಂತ್ರಣ ತಾನೇ! ನನ್ನೊಳಗೆ ಎದ್ದ ಪ್ರಶ್ನೆ?!!.ಅದಕ್ಕೆ ಉತ್ತರವೆಂದರೆ ನಮ್ಮೊಳಗಿನ ವಿಶ್ವಾಸ ಹಾಗೂ ಇತರ ಪ್ರಯಾಣಿಕರ ಸಹ ಪ್ರಯಾಣ!!.ವಿಮಾನದೊಳಗೆ ಗಗನಸಖಿಯರು ನಾಲ್ಕು ಮಂದಿಯಿದ್ದರು. ಟ್ರೇಯಲ್ಲಿ ತಿಂಡಿ ಹಾಗೂ ಜೂಸ್‌ಗಳ ಸಹಿತ ಪ್ರಯಾಣಿಕರ ಸಮೀಪ ಬರುತ್ತಿದ್ದರು.ಅಗತ್ಯವುಳ್ಳವರು ತೆಗೆದು ಉಪಯೋಗಿಸಬಹುದು.

ನೆಲ ಪ್ರವೇಶ-ಪ್ರಯಾಣಿಸುತ್ತಿದ್ದ ನಾವು ಹೈದ್ರಾಬಾದ್ ಸ್ಟೇಶನ್ ತಲಪುತ್ತಿದ್ದಂತೆ; ವಿಮಾನ ಭೂಮಿಗೆ ಸ್ಪರ್ಶವಾದಾಗ ಗಡಕ್ ಎಂಬ ಸದ್ದು ಹೇಗೆಂದರೆ; ಚಿಕ್ಕಂದಿನಲ್ಲಿ ಕುಂಟೆಬಿಲ್ಲೆ ಆಡುವಾಗ ಆಟದ ಕೋಣೆಯೊಳಗೆ ಹಾರಿ ಕುಳಿತಂತೆ ಭಾಸವಾಯ್ತು!!. 12-15 ಕ್ಕೆ ಮಧ್ಯಾಹ್ನ ಹೈದ್ರಾಬಾದ್ ಸ್ಟೇಶನ್ ತಲುಪಿದೆವು. ವಿಮಾನ ಏರುವಾಗ ಗಗನಸಖಿಯರು ಸ್ವಾಗತಿಸಿದಂತೆ ಇಳಿಯುವಾಗಲೂ ನಗುಮೊಗದಲ್ಲಿ ಬೀಳ್ಕೊಟ್ಟರು; ತಮ್ಮಲ್ಲಿಗೆ ಬಂದ ಅತಿಥಿಗಳನ್ನು ಆತ್ಮೀಯತೆಯಿಂದ ಬೀಳ್ಕೊಟ್ಟಂತೆ!!!.

ದ್ವಿತೀಯ ಯಾನ – ಹೈದ್ರಾಬಾದಲ್ಲಿ ಲುಂಬಿನಿ ಬೋಟ್,ಗೋಲ್ಕೊಂಡಾ ಫೋರ್ಟ್,ಚಾರ್ಮಿನಾರ್,ಬಿರ್ಲಾಮಂದಿರ, ಹಾಗೆಯೇ ಅಲ್ಲಿಯ ವಿಶೇಷತೆಯೆನಿಸಿದ ರಾಮೋಜಿ ಫಿಲ್ಮ್ ಸಿಟಿ ಮೊದಲಾದುವುಗಳನ್ನೆಲ್ಲಾ ನೋಡಿ, ಪೂರ್ವ ನಿಗದಿತದಂತೆ 16/04/2018 ರಂದು ಸಂಜೆ 7-30 ರ ವಿಮಾನಯಾನಕ್ಕೆ ಊರಿಗೆ ಹಿಂತಿರುಗಲು ಅಣಿಯಾದೆವು. ಈ ಬಾರಿ ನಮ್ಮ ಗ್ರೂಪಿನಲ್ಲಿ ಕೆಲವರು ಬೆಂಗಳೂರು ವಿಮಾನಕ್ಕೆ ಹೋಗಬೇಕಾಗಿದ್ದುದರಿಂದ ಅವರ ವಿಮಾನ ಸಮಯ 5.30 ಪಿ.ಎಮ್ . ನಾವು ಉಳಕೊಂಡ ರೆಸ್ಟೋರೆಂಟ್(ರಾಮಪಲ್ಲಿಯ ಸೃಜನ)ನಾವೆಲ್ಲ ಒಟ್ಟಿಗೆ ಬಿಟ್ಟುಕೊಡುವ ದೃಷ್ಟಿಯಿಂದ ನಾವು ವಿಮಾನ ಸ್ಟೇಶನ್ 5 ಗಂಟೆಗೇ ತಲಪಿದೆವು. ಸಾದಾರಣ 2-30 ರಷ್ಟು ಸಮಯ ಸ್ಟೇಶನಿನಲ್ಲಿ ಕಳೆಯಬೇಕಾಗಿಬಂತು. ಪ್ರಯಾಣಿಕರಿಗೆ ಸಮಯದೂಡುವ ಮನರಂಜನೆಗಾಗಿ ವಿಮಾನ ನಿಲ್ದಾಣದಲ್ಲಿ ಟಿ.ವಿ ಅಲ್ಲದೆ ನಮ್ಮ ಖರೀದಿಗಾಗಿ ತರತರದ ಮಳಿಗೆಗಳೂ ಇವೆ. ಖರೀದಿಸದೆ ಇದ್ದರೆ ಒಮ್ಮೆ ಸುತ್ತಾಡಿ ನೋಡುವುದಕ್ಕಡ್ಡಿಯಿಲ್ಲ.ವ್ಯಾನಿಟಿಬ್ಯಾಗುಗಳ ಅಂಗಡಿಯಲ್ಲದೆ ಟೆಕ್ಸಟೈಲ್‌ಗಳು,ಕಿವಿಯಾಭರಣಗಳು,ಮಕ್ಕಳ ಆಟದ ಸರಂಜಾಮಗಳು,ಪುಸ್ತಕಭಂಡಾರ ಹೀಗೆ ಎಲ್ಲಾತರದ ಮಾರಾಟಮಳಿಗೆಗಳು ಬೆಲೆ ದುಬಾರಿಯಾದರೂ ಅಲ್ಲಿವೆ.ಅದನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದೆವು.ಹಿಂದಿನ ಬಾರಿಯಂತೆ ಆ ವಿಮಾನಕ್ಕೆ ಹೊಂದಿದ ಬಸ್ಸು ನಮ್ಮನ್ನು ವಿಮಾನದೆಡೆಗೆ ಒಯ್ದ ತಲಪಿಸಿದಾಗ ಆಧಾರಕಾರ್ಡ್ ತಪಾಸಣೆಯಾಗಿ ವಿಮಾನ ಏರಿದೆವು. ಗಗನಸಖಿಯರು ನಗುಮೊಗದಿ ಸ್ವಾಗತಿಸಿದರು. ಈ ಬಾರಿಯೂ ನನ್ನ ಸೀಟು ಕಿಟಿಕಿ ಪಕ್ಕವೇ ಆಗಿತ್ತು. ಈ ಬಾರಿ ರಾತ್ರಿ ಪ್ರಯಾಣವಾದ್ದರಿಂದ ಕಳೆದಬಾರಿಯಷ್ಟು ಮಜಾ ಇರಲಿಲ್ಲ. ಭೂಮಿಯಲ್ಲಿದ್ದಾಗ ನಕ್ಷತ್ರಗಳು ಕಾಣಬೇಕಿದ್ದರೆ ಮೇಲೆ ಆಕಾಶ ನೋಡಬೇಕು ತಾನೇ!. ಆದರೆ..ನಾವೊಂದು ಪ್ರಯಾಣದವೇಳೆ ಕೆಳಗೆ ಇಣುಕಿದರೆ ನಕ್ಷತ್ರಮಯ!!.(ಮಕ್ಕಳಿಗೆ ಕೇಳಲು ಇದೊಂದು ಒಗಟು ನನ್ನಲ್ಲಿ ಸೃಷ್ಟಿಯಾಯ್ತು) ಅದೂ ಒಂದಷ್ಟು ಮೇಲೇರುವ ತನಕ.ಭೂಮಿಯ ಕಟ್ಟಡಗಳ ಕರೆಂಟು ಬಲ್ಬಿನ ಅಯೋಮಯ!!!.

ಮೊಬೈಲು ಪ್ರಕರಣ- ಗಗನಸಖಿಯೋರ್ವಳು ನೀರಿನ+ತಿಂಡಿಯ ಟ್ರೇಯೊಂದಿಗೆ ನಾವಿದ್ದೆಡೆ ಹಾದುಹೋದಾಗ ಆಕೆಯ ಫೊಟೋವನ್ನು ಮೊಬೈಲಲ್ಲಿ ಕ್ಲಿಕ್ಕಿಸಿದೆ. ಅದನ್ನು ಕಂಡ ಆಕೆ ನನ್ನೊಡನೆ ಪ್ರೀತಿಯಿಂದ ಆತ್ಮೀಯತೆಯಲ್ಲಿ ಮಾತನಾಡಿ;ನನ್ನ ಮೊಬೈಲು ಕೇಳಿ ಕೈಗೆತ್ತಿಕೊಂಡು ಆ ಫೊಟೋವನ್ನು ಡಿಲೀಟ್ ಮಾಡಿ ನನ್ನ ಕೈಗಿತ್ತು ನಗುತ್ತಾ ಆಚೆ ಸರಿದಳು. ಆಕೆ ಡಿಲೀಟ್ ಮಾಡಿದರೇನು!?. ಮತ್ತೊಂದು ಫೊಟೋ ನನ್ನ ಮೊಬೈಲಲ್ಲೇ ಇದೆ!. ಎಂದು ನನ್ನ ತಮ್ಮನಲ್ಲಿ ತಿಳಿಸಿ ನಕ್ಕೆ. ಅದಕ್ಕವನು ಅದನ್ನು ನೀನು ಡಿಲೀಟ್ ಮಾಡು. ಅವರ ರೂಲ್ಸಿನಲ್ಲಿ ಇಲ್ಲದ ವ್ಯವಹಾರ ನಮಗ್ಯಾಕೆ ಎಂದನವ.ಅವನ ಮಾತಿಗೆ ಒಪ್ಪಿಗೆ ನೀಡಿ ಡಿಲೀಟ್ ಮಾಡಿದೆ!. ಮೊಬೈಲಿಂದ ಡಿಲೀಟಾದರೂ ಆಕೆ ಈಗಲೂ ನನ್ನ ಬಳಿ ನಗುತ್ತಾ ಬಂದು ನನ್ನ ಮೊಬೈಲು ಕೈಗೆತ್ತಿಕೊಂಡ ಆ ದೃಶ್ಯ ನನ್ನ ಮನೋಪಟಲದಲ್ಲಿದೆ!!.

– ವಿಜಯಾಸುಬ್ರಹ್ಮಣ್ಯ,ಕುಂಬಳೆ

12 Responses

  1. SHREEKRISHNA SHARMA H says:

    ಪ್ರಥಮ ಪ್ರಯಾಣದ ಅನುಭವದ ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ.
    ಅಭಿನಂದನೆಗಳು

  2. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಆತ್ಮೀಯ ಹೇಮ ಮಾಲಾ ಪ್ರಕಟಿಸಿದ ತಮಗೆ ಧನ್ಯವಾದಗಳು. . ಹಾಗೂ ಮೆಚ್ಚುಗೆ ವ್ಯಕ್ತ ಪಡಿಸಿದವರಿಗೂ. ಮೆಚ್ಚುಗೆ ವ್ಯಕ್ತಮಾಡಿದವರಲ್ಲಿ ನನ್ನ ಹೆಸರು ಕಾಣಬಹುದು. ಅದಿಲ್ಲಿ ಮೊಬೈಲಿನಲ್ಲಿ ಲಿಂಕ್ ಕೊಟ್ಟಿದ್ದೆ. ನನ್ನ ಒಬ್ಬ ಪುಳ್ಳಿ ವ್ಯಕ್ತಪಡಿಸಿದ್ದು.

  3. Naveena Krishna says:

    Vimanayanada anubhava kathana chennagidhe dodamma

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಓದಿನೋಡಿದ ನವೀನ ಹಾಗೂ ಕುಸುಮಂಗೆ ಧನ್ಯವಾದಗಳು.

  4. Hema says:

    ಪ್ರಥಮ ವಿಮಾನಯಾನದ ಅನುಭವಗಳ ನಿರೂಪಣೆ ಸೊಗಸಾಗಿದೆ.

  5. ಕುಸುಮ says:

    ಸೊಗಸಾದ ಪ್ರಯಾಣ ಕಥನ…..ದೊಡ್ಡಮ್ಮ

  6. Shyam says:

    Tumba soghasada kathana doddatte.

  7. Susheela k padyana says:

    Anubhava kathana kanninge kattida hangidu.

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಧನ್ಯವಾದಗಳು ಸುಶೀಲಾ ಟೀಚರ್

  8. Shankari Sharma says:

    ವಿಜಯಕ್ಕ..ನಿಮ್ಮ ವಿಮಾನಯಾನ ಭಾರೀ ರೈಸಿದೆ..!!

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಧನ್ಯವಾದಗಳು ಶಂಕರಿಅಕ್ಕ,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: