ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಾನು ನಕ್ಕಾಗ ತನ್ನ ಎಲ್ಲಾ ನೋವುಗಳನ್ನು ಮರೆತು, ನನಗೆ ನೋವಾದಾಗ ತಾನು ಕಣ್ಣೀರು ಹಾಕುವಳು ನನ್ನ ಅಮ್ಮ. ನಾನು ಮಲಗುವ ಮುನ್ನ ತನ್ನ ಇಂಪಾದ ಸ್ವರದಿಂದ ನನಗೆ ಲಾಲಿಯನ್ನು ಹಾಡಿ ಮಲಗಿಸುವಳು ನನ್ನ ಮುದ್ದು ಅಮ್ಮ . ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮನ ಎಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗಿರುವ ನನ್ನ ತಂದೆಯವರನ್ನು ಕಳೆದುಕೊಂಡಾಗ ನಮ್ಮ ಮನೆಯಲ್ಲಿ ಬಡತನ ಕಿತ್ತು ತಿನ್ನುತ್ತಿತ್ತು. ನನ್ನ ಅಮ್ಮ ಅಂತಹ ಸಮಯದಲ್ಲಿ ಮುಂದಿನ ಜೀವನದ ಬಗ್ಗೆ ದಾರಿ ತೋಚದೆ ಇದ್ದಾಗ ಹೆದರಿ ನಾನು ಎಲ್ಲಿ ಹೆದರುತ್ತೇನೆಂದು ನನಗೆ ಏನು ಹೆದರ ಬೇಡ ನಾನು ನಿನ್ನ ಜೊತೆಯಲ್ಲಿಯೇ ಇದ್ದೇನೇ ಎಂಬ ಮಾತು ನನಗೆ ಪ್ರತಿಸಲ ಹೇಳುತ್ತಿದ್ದಳು. ಆ ಮಾತು ನನಗೆ ತುಂಬ ಸ್ಪೂರ್ತಿದಾಯಕವಾಗಿತ್ತು.
ಎರಡು ಹೂತ್ತು ಊಟಕ್ಕೂ ಹಣವಿಲ್ಲದ ಸಮಯದಲ್ಲಿ , ತಾನು ಉಪವಾಸವಿದ್ದು ತಾನು ದುಡಿದ ಹಣವೆಲ್ಲಾ ನನಗೆ ಮೀಸಲಿಟ್ಟು , ನಾನು ಕೇಳಿದ್ದೆಲ್ಲಾ ಕೊಡಿಸುತ್ತಿದ್ದಳು. ನಾನು ಬಡವನೆಂದು ಕೊರಗಬಾರದೆಂದು ತನಗೆ ಎಷ್ಟೇ ಕಷ್ಟವಾದರೂ ನನ್ನನು ಶ್ರೀಮಂತರು ಓದುವ ಶಾಲೆಯಲ್ಲಿ ನಾನು ಓದುವಂತೆ ಮಾಡಿದಳು. ದುಡಿದ ಹಣದಿಂದ ತನಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆನ್ನುವ ನಿರ್ಧರಿಸಿದಳು.ನಾನು ತಪ್ಪು ದಾರಿ ಹಿಡಿಯದಂತೆ ಮಾಡಿ, ನನಗೆ ಒಳ್ಳೆಯ ಮಾರ್ಗವನ್ನು ತೋರಿಸಿ ನಡೆಸಿ, ನನಗೆ ಬಡತನದ ಅರಿವನ್ನೇ ಹೋಗಲಾಡಿಸಿದವಳು ನನ್ನಮ್ಮ.

ಹನುಮನಿಗೆ ರಾಮನಿದ್ದಂತೆ, ಮೀನಿಗೆ ನೀರು ಇದ್ದಂತೆ, ಭಕ್ತಾದಿಗಳಿಗೆ ಶರಣರಿದ್ದಂತೆ, ಭೂಮಿಗೆ ಬೆಳಕು ಕೊಡುವ ಸೂರ್ಯನಂತೆ, ಸದಾ ನನ್ನ ಜೊತೆಯಾಗಿ ಇರುವ ನನ್ನ ತಾಯಿ. ಅವಳೇ ನನ್ನ ಮುದ್ದು ಅಮ್ಮ.
-ಪ್ರಜ್ವಲ್ ಜಮಾದಾರ್