ಮರಳಿ ಮಣ್ಣಿಗೆ….!!
ನಿನ್ನ ನೆನಪಿನ ಹಕ್ಕಿ
ಎದೆಯಾಳದಲಿ ಸಿಕ್ಕಿ,
ಏಕೋ ಬಿಕ್ಕಿ ಬಿಕ್ಕಿ ನೋವು,
ರಾಗವೂ ಹೊಮ್ಮುತ್ತಿಲ್ಲ,
ಅನುರಾಗವೂ ಚಿಮ್ಮುತ್ತಿಲ್ಲ..
ನೆನಪಿನಾಳದಲ್ಲಿ ಹರಿವ ಝರಿ ನೀನು,
ಯಾವುದೋ ನದಿಯೊಳಗೆ ಲೀನ,
ನಾನು ನಿನ್ನ ನೆನಪಲ್ಲೇ ವಿಲೀನ,
ನನ್ನೊಳಗೆ ಝರಿಯಿಲ್ಲ!
ನನ್ನಲ್ಲಿ ಏನೋ ಸರಿಯಿಲ್ಲ…
ಮನೆಯ ಹೆಂಚಿನ ನಡುವೆ
ಮಳೆಗೆ ಜಿನುಗುವ ನೆನಪು,
ನಿನ್ನ ಪ್ರೀತಿಯ ಬಿಸುಪು,
ಮಳೆಯು ಮತ್ತೆ ಮಣ್ಣಿಗೆ,
ನೀನಿಲ್ಲ ಇಲ್ಲಿ,
ನಾನು ಮರಳಿ ಮಣ್ಣಿಗೆ….!!
– ಪ್ರಭು ಆರ್, ಮೈಸೂರು.
“ಮರಳಿ ಮಣ್ಣಿಗೆ ..” ತುಂಬಾ ಚೆನ್ನಾಗಿ, ಅರ್ಥವತ್ತಾಗಿ ಮೂಡಿಬಂದಿದೆ. .
Very nice to read your poems, Prabhu….
ಮರಳಿ ಮಣ್ಣಿಗೆ-
maraLi maNNige .good. but positive thinking is always good.Readers prefer positive tone.