ಹುದುಗಿಸಿಕೊ ಎನ್ನ ..

Share Button

 

ನಸುಕಿನ  ಆಹ್ಲಾದ  ಮೌನದಿ
ಸಪ್ಪಳವ ಅಡಗಿಸಿದ ಮನದಿ
ಮಾತುಗಳ  ಅಣಗಿಸಿದ ನಿಶ್ಯಬ್ದದಿ
ಶಬ್ಡಗಳ ಗದ್ದಲವಿರದ  ಧ್ಯಾನದಿ
ನಿನ್ನೊಳಗಿನ  ಮಧುರ  ಸ್ವರವ
ಆಲಿಸಿ ಆನಂದಿಸುವ ಸುಸಮಯದಿ
ನಿನ್ನೊಳಗೆ  ಲೀನವಾಗುವೆ   ಕರಗಿ …
ಒಲ್ಲೆಯೆನದೆ ಒಪ್ಪಿಕೊ ದಯಮಾಡಿ
ಹುದುಗಿಸಿಕೊ   ಅನಂತ ಚೇತನದ
ಅಲೆಗಳ  ಒಳ ಪದರುಗಳಲಿ
ನಾಲ್ಕೇ ದಿನಗಳ ಬಾಳು ಮುಗಿಯುವುದರಲಿ ..

 – ಭಾರತಿ ಪಿ.ಜಿ.

 

1 Response

  1. ಸವಿಜೇನಿನಂತೆ ಚಪ್ಪರಿಸಬೇಕಾದ ಮಧುರವಾದ ಕವನ. ಒಂದು ಹನಿ ಜೇನಿನ ಸಂಗ್ರಹಕ್ಕೆ ಹೇಗೆ ದುಂಬಿ ದಿನವಿಡೀ ಅಲೆದಾಡುವುದೋ ಹಾಗೆಯೇ ಜೀವಮಾನವಿಡೀ ಹೆಣಗಬೇಕಿಷ್ಟು ಆಧ್ಯಾತ್ಮ ಘನಿಸಬೇಕಾದರೆ. ಆ ಆಧ್ಯಾತ್ಮಿಕತೆಯ ಮಧುವನ್ನು ಸುಂದರ ಶಬ್ದಗಳಲ್ಲಿ ಕಟ್ಟಿಕೊಟ್ಟಿದ್ದೀರಿ, ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: