ಅಮೋಘ ‘ಗಾನ’ ವರ್ಷ

Share Button

ಕಲಾಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ ಎಂಬ ಮಾತೊಂದಿದೆ. ಅದಕ್ಕೆ ಅವಿರತ ಪರಿಶ್ರಮ,ಅವಿರಳ ಪ್ರೋತ್ಸಾಹ, ಅರ್ಪಣಾಭಾವ ಅಂದರೆ ತನ್ನನ್ನು ತಾನೇ ಕಲೆಗೆ ಅರ್ಪಿಸುವುದು, ಇತ್ಯಾದಿಗಳನ್ನು ಮೈಗೂಡಿಸಿಕೊಂಡು ಮುಂದುವರಿದರೆ ಕಲಾ ಮಾತೆ ಆಶೀರ್ವದಿಸಿ ಮುನ್ನಡೆಸುವುದರಲ್ಲಿ ಎರಡು ಮಾತಿಲ್ಲ. ಕೆಲವರಿಗೆ ಕಲೆಯು ಹುಟ್ಟಿನಲ್ಲಿಯೇ ಬಂದರೆ ಇನ್ನು ಕೆಲವರಿಗೆ ದೈವದತ್ತವಾಗಿರುತ್ತದೆ. ಇನ್ನು ಕೆಲವರು ಏಕಲವ್ಯನಂತೆ ಕಂಡು ಕೇಳಿ ಇತರರ ಸಹಾಯ ಇಲ್ಲದೆ ಕಲಿತು ಮುಂದೆ ವರುವವರು ಇದ್ದಾರೆ.

ಅಮ್ಮ ತೊಟ್ಟಿಲ್ಲಲ್ಲಿ ಮಗನನ್ನು ಮಲಗಿಸಿ  ಜೋಗುಳ ಹಾಡುತ್ತಿದ್ದಾರೆ.  ವಾತಾಪಿ ಗಣಪತಿಂಭಜೇ, ಆಡಿಸಿದಳು ಯಶೋದೆಅಮ್ಮನೂ  ಗಾಯಕಿಯೇ. ಅಮ್ಮನ ಇಷ್ಟವಾದ ಹಾಡದು.ಎರಡೂವರೆ ವರುಷದ  ಮಗು ಸಹ ಅಮ್ಮನ ತುಟಿಯನ್ನೇ ನೋಡುತ್ತಾ ತೊದಲು ನುಡಿಯಲ್ಲಿ ಹಾಡಿಯೇ ಬಿಟ್ಟಿತು   ” ಮುಲಿ  ಪಲ ಪಾಪೂಜಿತಂ ” … ಅದೇ ಹಾಡು ಆಗಬೇಕು ನಿದ್ದೆ ಬರಬೇಕಿದ್ದರೆ.  

ಇದು ದುಬೈಯಲ್ಲಿ ಉದ್ಯೋಗದಲ್ಲಿರುವ ಬಂಟ್ವಾಳ ತಾಲೂಕಿನ ತೆಂಕಬೈಲಿನವರಾದ  ಪ್ರಸನ್ನ ಟಿ. ಎನ್ ಹಾಗು ಸ್ಮಿತಾ ಭಟ್ ದಂಪತಿಗಳ ಮಗನಾದ 10 ವರುಷ ವಯಸ್ಸಿನ  ಪೋರನು ಎಳೆವೆಯಲ್ಲಿ, ಆಗತಾನೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯುವ ಸಮಯದಲ್ಲಿ,ಆಟಿಕೆಗಳಲ್ಲಿ ಆಡುವ ಪ್ರಾಯದಲ್ಲಿ ಹೇಗೆ ಹಾಡಿನ  ಬಗ್ಗೆ ಒಲವು ತೋರಿಸುತ್ತಿದ್ದ, ಹಾಡನ್ನು ಎಷ್ಟು ಇಷ್ಟ ಪಡುತ್ತಿದ್ದ ಎಂದು ಇದರಲ್ಲಿ ಅರ್ಥಮಾಡಿಕೊಳ್ಳಬಹುದು. ಇವನು ಬೇರಾರು ಅಲ್ಲ.  ಗಾಯನ ಲೋಕಕ್ಕೆ ಹೆಜ್ಜೆ ಇಟ್ಟಿರುವ ದುಬೈಯ ಡಿಪಿಎಸ್ ಶಾಲೆಯಲ್ಲಿ ಈಗ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿರುವ ಕನ್ನಡದ ಕುಡಿ   ಅಮೋಘ ವರ್ಷ ಭಟ್.

ಇಷ್ಟು ಸಣ್ಣ ವಯಸ್ಸಿನಲ್ಲಿ ಅಮೋಘ ಮಾಡಿದ ಸಾಧನೆಗಳು ಹಲವು.   ಭಾರತದಂತೆ ಇಲ್ಲಿ ಅವಕಾಶಗಳು ಹೆಚ್ಚುಇರದಿದ್ದರೂ , ಸಿಗುವ ಅವಕಾಶಗಳನ್ನು ಕೈ ಬಿಡವುದಿಲ್ಲ. ಇವನು ಹಾಡಿದ ಪ್ರಮುಖ ವೇದಿಕೆಗಳುಗ್ಲೋಬಲ್ ವಿಲೇಜ್  2017″, ಶಾರ್ಜಾ ಕರ್ನಾಟಕ ಸಂಘ, ಓಶಿಯಾನ್ ಕಿಡ್ಸ್ ಎಕ್ಸ್ಟ್ರಾವೆಗಾನ್ಸ 2017, ದುಬೈ ಕನ್ನಡಿಗರು ಕಾರ್ಯಕ್ರಮದ ವೇದಿಕೆ ,ಧ್ವನಿ  ಪ್ರತಿಷ್ಠಾನದ “2ನೆಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, 20ನೆಯ ಹವ್ಯಕ ವಾರ್ಷಿಕೋತ್ಸವ ,ಬಸವ ಜಯಂತಿ ಕಾರ್ಯಕ್ರಮ, ದೇವಾಡಿಗ ಸಂಘದ ಕದಂ ವಾರ್ಷಿಕ ಸಮ್ಮೇಳನ ಇತ್ಯಾದಿಗಳಲ್ಲಿ ತನ್ನ ಕಂಠ ಸಿರಿಯನ್ನು ಪ್ರದರ್ಶಿಸಿ ಪಾತ್ರನಾಗಿ ತನ್ನ ಹೆಸರಿಗೆ ಒಂದು ತನ್ನದೇ ಆದ ಮೊಹರನ್ನು ಮೂಡಿಸಿದ್ದಾನೆ.

ಅಮೋಘನ ಸಂದರ್ಶನವು ಯುಎಇ ಪ್ರಮುಖ ಬಾನುಲಿ ಕೇಂದ್ರ  ಸ್ಪೈಸ್ 105.4ನಲ್ಲಿ ಪ್ರಸಾರವಾಗಿದೆ. ಅವನು ಹಾಡಿದ ಹಾಡುಗಳು ಅಮೇರಿಕಾದ ಚಾನೆಲ್ 1170 ಎಮ್ ಹಾಡು  ಸಂತೋಷಕ್ಕೆಹಾಗುಗಾಥಾ ರಹೇ ಮೇರಾ ದಿಲ್ಕಾರ್ಯಕ್ರಮಗಳಲ್ಲಿ ಪ್ರಸಾರವಾಗಿದೆ.

ಮಂಗಳೂರಿನ ಪಾವಂಜೆ ದೇವಸ್ಥಾನದಲ್ಲಿ ಹಾಗು ಪುತ್ತೂರಿನಲ್ಲಿ ಕಚೇರಿಗಳನ್ನು ಕೊಟ್ಟಿರುವುದು ಇವನ ಹಾಡಿನ ರೆಕ್ಕೆಗೆ ಮೂಡಿದ ಗರಿಗಳು .

ಅಮೋಘನ ಸಾಧನೆಯ ಹಿಂದೆ ಅಮ್ಮ ಸ್ಮಿತಾ ಮತ್ತು ಅಪ್ಪ ಪ್ರಸನ್ನ ಅವರ ಪರಿಶ್ರಮವಿದ್ದೇ ಇದೆ. ಅಮ್ಮನೇ ಮೊದಲ ಗುರು ಎಂಬ ನಾಣ್ನುಡಿ ಗೆ ಸರಿತೂಗುವಂತೆ ತನ್ನ  5ನೆಯ ವರ್ಷದಲ್ಲಿ ಅಮ್ಮನ ಬಳಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡತೊಡಗಿದನು. ಸದ್ಯ ಶ್ರೀಮತಿ  ದಿವ್ಯ ಶಂಕರಿ ಇವರ ಬಳಿ ಅಭ್ಯಸಿಸುತ್ತಿದ್ದಾನೆ.  ಇದರ ಜತೆ ಮೃದಂಗ ಹಾಗು ಗಿಟಾರ್ ಸಹ ಕಲಿಯುತ್ತಿದ್ದಾನೆ.

ಸ್ಮಿತಾ ಭಟ್ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ಅವನು ಚಿಕ್ಕವನಿದ್ದಾಗ  ತಿರುಗುತ್ತಿರುವ ಫ್ಯಾನ್ ಲಯಕ್ಕೆ ಹಾಡುತ್ತಿದ್ದ, ನಲ್ಲಿಯ ನೀರಿನಲ್ಲಿ ಹೊರಹೊಮ್ಮುವ ಶ್ರುತಿಗೆ ಹಾಡುತ್ತಿದ್ದ. ಆಗಲೇ ನಾನು ಇದನ್ನೇ ಗಮನಿಸಿದ್ದೆ. ನಾಲ್ಕನೇ ವರುಷದಲ್ಲಿ ಬಾಲಿವುಡ್ ಡ್ಯಾನ್ಸ್ ಕ್ಲಾಸಿಗೆ ಸೇರಿಸಬೇಕೆಂದು ಹೋದಾಗ ಪಿಯಾನೋ ಬಾರಿಸುತ್ತಿದ್ದ ಮಕ್ಕಳನ್ನು ಕಂಡು ಅದಕ್ಕೆ ಸೇರಬೇಕಾಗಿ ಬಂತು. ಇದೆಲ್ಲ ಅಮೋಘನ ಗಾಯನದಲ್ಲಿದ್ದ ಉತ್ಸಾಹ ತೋರಿಸುತ್ತದೆ .ಒಂದೆರಡು ಕಡೆ ತನ್ನ ಪ್ರೀತಿಯ ತಂಗಿ 5 ವರುಷದ ನಿನಾದಳ ಜತೆ ವೇದಿಕೆ ಹಂಚಿಕೊ0ಡು ಹಾಡಿದ್ದು ತನ್ನ ಅಮೂಲ್ಯ ಕ್ಷಣವೆಂದು ನೆನಪಿಸುವ ಅಮೋಘನಿಗೆ ಅರ್ಜಿತ್ ಸಿಂಗ್ ಹಾಗು ಶ್ರೇಯ ಘೋಷಾಲ್  ಅಂದರೆ ತುಂಬಾ ಇಷ್ಟ.

ಯು ಮಟ್ಟದ ಕನ್ನಡ ಚಿತ್ರ ಗೀತೆಗಳ ಸ್ಪರ್ಧೆಯಲ್ಲಿ 2ನೆಯ ಪ್ರಶಸ್ತಿವಾಫಿ ಸೂಪರ್ಸ್ಟಾರ್ 2017″ ಹಾಗುಕಿಡ್ಸ್ ಸೂಪರ್ ಸ್ಟಾರ್  2017ಸ್ಪರ್ಧೆಗಳಲ್ಲಿ ಸೆಮಿಫೈನಲಿಸ್ಟ್  ಆಗಿ ಹೊರಬಂದರೆ, ಇಲ್ಲಿಯ ಬಿಗ್ ಡಿಇ ಗ್ರೂಪ್ ನಡೆಸಿದ ಅಮೆಜಿಂಗ್ ಸ್ಟಾರ್ಸ್ 2015  ಮಕ್ಕಳ ಅಭೂತ ಕೌಶಲ ಗುರುತಿಸುವ ಕಾರ್ಯಕ್ರಮದಲ್ಲಿಎಮರ್ಜಿಂಗ್ ಟ್ಯಾಲೆಂಟ್ಬಿರುದನ್ನ ತನ್ನ ಮುಡಿಗಾಗಿಸಿಕೊಂಡಿದ್ದಾನೆ. 2015   ಮಕ್ಕಳ ರೆಡ್ ಇಂಟರ್ನ್ಯಾಷನಲ್  ಯುವಜನೋತ್ಸವದಲ್ಲಿ ಹಿಂದಿ ಸುಗಮ ಸಂಗೀತದಲ್ಲಿ ಎರಡೆನೇ ಸ್ಥಾನ, ಇಂಟರ್  ಜೂನಿಯರ್ ಶಾಲೆಯ ಉತ್ಸವಕ್ರಿಸಾಲೀಸ್ನಲ್ಲಿ ತನ್ನ ಶಾಲೆಯ ವಿಜೇತ ಕ್ಯಾಡೆನ್ಸ್ಕೊರಲ್ ತಂಡದ ಸದಸ್ಯನಾಗಿದ್ದಾನೆ.

ಕಲಿಯುವಿಕೆಯಲ್ಲೂ ಮುಂದಿರುವ ಅಮೋಘವರ್ಷನು ಶಾಲೆಯಲ್ಲಿ   ನೀಡಲ್ಪಡುವ ಬಿರುದುಟಿಎಂಎಸ್ ಐಡಲ್ ” “ಸಾಂಗ್ ಬರ್ಡ್ಹಾಗು ಗೋಲ್ಡನ್  ಸ್ಟಾರ್ ಪ್ರಶಸ್ತಿಗಳನ್ನು ಪಡೆದಿರುತ್ತಾನೆ.   

“ವಾಯ್ಸ್ ಆಫ್ ಯು ಎ.ಈ “:

ಎಸ್ ಕೆ ಎಸ್ ಇವೆಂಟ್ಸ್ ಅರ್ಪಿಸುವ ಯು   ಮಟ್ಟದ  ಗಾಯನ ಸ್ಪರ್ಧೆಯಲ್ಲಿ” ವಾಯ್ಸ್ ಆಫ್ ಯುಎಈಕಾರ್ಯಕ್ರಮದ 200 ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳಿದ್ದ ಇದರಲ್ಲಿ ಅಮೋಘನು ಫೈನಲ್ ತಲಪಿರುವ ಏಕಮಾತ್ರ ಕನ್ನಡಕುವರ. ಅದಕ್ಕಾಗಿ ಭರಪೂರ ಸಿಧ್ಧತೆಯಲ್ಲಿರುವ ಈತನು ಡಿಸೇಂಬರ್ 1 2017ರಂದು ಶೇಖ್ ರಶೀದ್ ಆಡಿಟೋರಿಯಂ ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆ. ಕಾರ್ಯಕ್ರಮಕ್ಕೆ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಉಪಸ್ಥಿತಿ ಇನ್ನು ಮೆರುಗು ಕೊಡಲಿದೆ. ಕವಿತಾಜಿ ಯವರೊಂದಿಗೆ  ತೀರ್ಪುಗಾರರಾಗಿ ಮಿಥುನ್ ಡೇ ಸರ್ಕಾರ್ ಅವರು ಜತೆ ಸೇರಲಿದ್ದಾರೆ. . ಅಂದು ಅಮೋಘ ಹಾಡುಗಳ ವರ್ಷಧಾರೆಯನ್ನೇ ಸುರಿಸಲಿರುವ ಅಮೋಘವರ್ಷ ಕಾರ್ಯಕ್ರಮದಲ್ಲಿ ಜಯಶಾಲಿಯಾಗಿ ಬರಲಿ ಎಂದು ನಾವೆಲ್ಲರೂ ಆಶಿಸುವ ನಮ್ಮೆಲ್ಲರ ಹರಕೆ ಹಾರೈಕೆಗಳು ಪುಟ್ಟ ಪೋರನ ಮೇಲಿರಲಿ.

ಭರವಸೆಯ ಗಾಯಕನಾಗಿರುವ ಈತನು  ಮುಂಬರುವ ದಿನಗಳಲ್ಲಿ ಪ್ರಬುದ್ಧ ಗಾಯಕನಾಗಿ ಹೊರಬರಲಿ ಹಾಗು ನಮ್ಮೆಲ್ಲರ ಮನದಲ್ಲಿ  ಅವನ ಹಾಡುಗಳು  ಮನೆ ಮಾಡಲಿ..


ಬರಹ : ರಜನಿ ಭಟ್ ,ಅಬುಧಾಬಿ

2 Responses

  1. ಎಳವೆಯಲ್ಲೇ ಸಾಧನೆ ಮಾಡಬೇಕಾದರೆ ಗುರುತಿಸುವಿಕೆ ಬಹಳ ಮುಖ್ಯ. ಪ್ರತಿಭೆಯೊಂದಕ್ಕೆ ಸರಿಯಾದ ಪ್ರೋತ್ಸಾಹ ಸಿಕ್ಕಿರುವುದು ಖುಷಿಯ ಸಂಗತಿ. ಅಮೋಘ ಮತ್ತು ನಿನಾದರಿಗೆ ಶುಭಾಶಯಗಳು.

    • Hema says:

      ಬರಹಗಳನ್ನು ಓದಿ, ಧನಾತ್ಮಕವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವುದು ಓದುಗರ ದೊಡ್ಡ ಗುಣ. ನೀವು ಬರಹಗಾರರಿಗೆ ಮತ್ತು ಚಿಕ್ಕವರಿಗೆ ಪ್ರತಿಕ್ರಿಯಿಸುವ ವಿಧಾನವೂ ಪುಟ್ಟ ಲೇಖನದಂತಿರುತ್ತದೆ.ಸುರಹೊನ್ನೆಗೆ ಬರೆಯಿರಿ..ಸ್ವಾಗತ.

Leave a Reply to Sindhu Devi K Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: