ಹೆಣ್ಣು ಜಗದ ಕಣ್ಣು.

Spread the love
Share Button
ಅಬಲೆಯಾಗುವಳೆಂತು ಹೆಣ್ಣು
ಹೆಣ್ಣಲ್ಲವೇ ಜಗದ ಕಣ್ಣು.
ಹೆಣ್ಣೆಂದರೇತಕೆ ತಾತ್ಸಾರ
ಹೆಣ್ಣಿದ್ದರಲ್ಲವೇ ಸಂಸಾರ.
.
ಸೃಷ್ಟಿಯ ಮೂಲ ಆದಿ ಶಕ್ತಿ
ಸೃಷ್ಟಿಯ ಕನಸಕೂಸು ಪ್ರಕೃತಿ
ಕ್ಷಮಯಾ ಧರಿತ್ರಿ ತ್ಯಾಗಮೂರ್ತಿ
ಮಮತೆ ವಾತ್ಸಲ್ಯಗಳ ಒಡತಿ
 .
ಬಲ್ಲವರಾರು ಇವಳ ನೋವನ್ನ
ತನ್ನದಲ್ಲದ ತಪ್ಪಿಗೂ ತಾನೆ
ಕಷ್ಟಗಳ ನುಂಗಿ ತೋರುವಳು
ಮೊಗದಿ ಮಂದಹಾಸವನು.
 .
ಹೆಣ್ಣು ಮಮತೆಯ ಕಡಲು
ಒಲವಿನ ಒಡಲು ಮಡಿಲು
ತವರ ಪ್ರೀತಿಯ ಮಗಳು
ಪತಿಕುಲವ ಬೆಳಗುದೀಪ.
 .
ಕೋಪತಾಪವನು ಬದಿಗೊತ್ತಿ
ತಾಳ್ಮೆ ಸಹನೆಯನು ಮೇಲೆತ್ತಿ
ಆಸೆ ಆಕಾಂಕ್ಷೆಗಳನು ಒಳಗಿಟ್ಟು
ಸಲಹುವಳೆಲ್ಲರನು ಪ್ರೀತಿಯಿತ್ತು.
 .
ಮಗಳಾಗಿ ಸಹೋದರಿಯಾಗಿ
ಸಖಿಯಾಗಿ ಮಡದಿಯಾಗಿ
ಅಮ್ಮನಾಗಿ ಅಜ್ಜಿಯಾಗಿ
ಪ್ರೀತಿ ರಕ್ಷಣೆಯನು ಕೊಡುವ
ಹೊಣೆ ಹೊತ್ತ ಹೆಣ್ಣೇ
ಪ್ರಜ್ವಲಿಸುತಿರು ಜಗದೊಳಗೆ
ನೀ ಎಂದಿಗೂ ಅಬಲೆಯಲ್ಲ.

 – ಅನ್ನಪೂರ್ಣ. ಕುಂಬಳೆ

 

2 Responses

  1. Shruthi Sharma says:

    ನಿಜ 🙂

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: