ಅಹಂಕಾರಕ್ಕೆ ಉದಾಸೀನವೇ ಮದ್ದು….

Share Button


ಹೌದು ನಮ್ಮ ನಡುವೆ ಇಂತಹ ಜನಗಳಿರುತ್ತಾರೆ. ತುಂಬಿದ ಸಭೆಯಲ್ಲೋ, ಗೆಳೆಯರ ಗುಂಪಿನಲ್ಲಿ ಚರ್ಚೆಯ ಸಮಯದಲ್ಲೋ ಅಥವಾ ಹರಟೆಯ ಸಮಯದಲ್ಲೋ, ಯಾವಸಂದರ್ಭದಲ್ಲಿಯೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಸದಾ ನಿಮ್ಮನ್ನು, ನಿಮ್ಮ ಮಾತುಗಳನ್ನು, ನಿಮ್ಮ ವ್ಯಕ್ತಿತ್ವವನ್ನು ಅಲ್ಲೆಗಳೆಯುತ್ತಾರೆ, ನಿಮ್ಮನ್ನು ಕೀಳಾಗಿ ಬಿಂಬಿಸುವಪ್ರಯತ್ನದಲ್ಲಿರುತ್ತಾರೆ. ಎಲ್ಲರ ಮುಂದೆ ನಿಮ್ಮ ದೌರ್ಬಲ್ಯವನ್ನು ಎತ್ತಿಹಿಡಿದು ನಿಮ್ಮನ್ನು ತಲೆತಗ್ಗಿಸುವಂತೆ ಮಾಡಿಬಿಡಬೇಕು ಎಂದು ಹವಣಿಸುತ್ತಾರೆ. ತಾವೇ ಮಹಾನ್ ಬುದ್ಧಿವಂತಎಂಬಂತೆ ಭಾವಿಸಿರುತ್ತಾರೆ. ಮತ್ತೊಬ್ಬರ ನಂಬಿಕೆಯನ್ನು ಒಪ್ಪುವುದೇ ಇಲ್ಲ. ಆದರೆ ಎಲ್ಲರೂ ಇವರ ಅಭಿಪ್ರಾಯಗಳನ್ನೇ ಒಪ್ಪಬೇಕು ಎಂಬ ಧೋರಣೆಯಲ್ಲಿರುತ್ತಾರೆ. ಅವರಅಭಿಪ್ರಾಯವನ್ನು ನೀವು ಒಪ್ಪದಿದ್ದರೇ ನಿಮ್ಮನ್ನು ಅವಿವೇಕಿ ಎಂದೇ ಅವರ ಭ್ರಮಿಸುತ್ತಾರೆ. ಇದಕ್ಕೆಲ್ಲಾ ಕಾರಣ ಅವರ ಅಹಂಕಾರ ಹಾಗೂ ಅಜ್ಞಾನ.

ಅವರ ಸಂಪತ್ತಿನ ಬಗ್ಗೆ ಅವರಿಗೆ ಇರವ ದುರಾಭಿಮಾನ. ಹಣ ಇದ್ದರಷ್ಟೇ ದೊಡ್ಡಮನುಷ್ಯ ಎಂದು ಅವರು ನಂಬಿರುತ್ತಾರೆ. ಹಾಗಾಗಿ ಅವರಿಗಿಂತ ಆರ್ಥಿಕವಾಗಿ ಹಿಂದೆ ಇರುವವರನ್ನುಹೀಯ್ಯಾಳಿಸುವುದು, ನಿಮ್ಮ ಮಾತಿಗೆ ಕುಹಕವಾಡುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೇ ನಿಮ್ಮ ಹಿಂದೆ ನಿಮಗೆ ಪರಿಚಯವಿರುವವರ ಬಳಿ ನಿಮ್ಮ ಬಗ್ಗೆಅವಹೇಳನಕಾರಿಯಾಗಿ ಆಡಿಕೊಳ್ಳುವುದನ್ನು ಮಾಡುತ್ತಾರೆ. ಅವನೇನು ಮಹಾ ಎಂಬಂತೆ ವರ್ತಿಸುತ್ತಾರೆ. ಹೀಗೆ ಮಾಡುವುರಿಂದ ಅವರಿಗೇನು ಲಾಭ ಎಂಬುದೇನಮಗರಿಯುವುದಿಲ್ಲ. ಹೀಗೆ ಮಾಡುವುದರಿಂದ ತಾನು ದೊಡ್ಡವನಾಗುತ್ತೇನೆ ಎಂದು ತಿಳಿದಿರುತ್ತಾರೆ. ಆದರೆ ಇನ್ನೊಬ್ಬರನ್ನು ಅವಹೇಳನ ಮಾಡಿ ಆಡಿಕೊಳ್ಳುವುದರಿಂದ ಅವರವ್ಯಕ್ತಿತ್ವ ಹಳ್ಳಹಿಡಿದಿರುತ್ತದೆ. ಇಂತವರಿಗೆ ಯಾರು ಸ್ನೇಹಿತರೇ ಇರುವುದಿಲ್ಲ. ಇದ್ದರೂ ಅವರ ಮುಂದೆ, ಅವರ ಹಣಕ್ಕೋ, ಅಧಿಕಾರಕ್ಕೋ ತಲೆಬಾಗಿ ಮಾತ್ರ ಸ್ನೇಹಿತರಂತೆನಾಟಕವಾಡತ್ತಿರುತ್ತಾರೆ. ಆದರೆ ಅವರ ಹತ್ತಿರ ಹೆಚ್ಚು ಹೊತ್ತು ಇರಲು ಇಷ್ಟಪಡುವುದಿಲ್ಲ.

ಇಂತಹ ದುರಹಂಕಾರವಿರುವವರು ಒಬ್ಬ ವ್ಯಕ್ತಿಯನ್ನು ವ್ಯಕ್ತಿಯ ವ್ಯಕ್ತಿತ್ವದ ಮೂಲಕ ಅಳೆಯದೇ ಕೇವಲ ಹಣದಿಂದ ಅಳೆಯುತ್ತಾರೆ. ನೀವು ಯಾವುದೇ ವಿಷಯವನ್ನುವಸ್ತುನಿಷ್ಠವಾಗಿಯೇ ಹೇಳುತ್ತಿದ್ದರೂ ಅದಕ್ಕೆ ಆಕ್ಷೇಪಣೆ ಸಲ್ಲಿಸಿ, ತಮ್ಮ ಆಂಗಿಕ ಭಾಷೆಯಲ್ಲಿಯೇ, ಕಣ್ಣುಗಳ ನೋಟಗಳಿಂದಲೇ ನಿಮ್ಮ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂಅವರು ನಿಮ್ಮನ್ನು ದ್ವೇಷಿಸುವುದಕ್ಕೆ ಕಾರಣವೇ ಇರುವುದಿಲ್ಲ. ಆದರೂ ಅವರು ನಿಮ್ಮನ್ನು ಬೆನ್ನುಬೀಳುತ್ತಾರೆ.

ಇನ್ನು ಇಂತಹ ಅಹಂಕಾರಿಗಳು ತಾವೇನಾದರೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಅಂದರೆ ಆರ್ಥಿಕವಾಗಿಯೋ, ಅಧಿಕಾರಿಯಾಗಿದ್ದರೇ ತಮ್ಮನ್ನು ತಾವುಪರಿಚಯಮಾಡಿಕೊಳ್ಳುವುದು ತಮ್ಮ ಹೆಸರಿನಿಂದಲ್ಲ, ಬದಲಾಗಿ ತಮ್ಮ ಹುದ್ದೆಯಿಂದ, ಅಧಿಕಾರದಿಂದ. ತಾವು ಹುಟ್ಟಿದಾಗಿನಿಂದ ಅಧಿಕಾರಿಯಾಗಿಯೇ ಹುಟ್ಟಿದ್ದೇನೆ ಎಂಬಂತಿರುತ್ತದೆಅವರ ನಡವಳಿಕೆ. ಇದಕ್ಕೆ ಕಾರಣ ಅವರ ಅಲ್ಪಜ್ಞಾನ.

ಇಂತಹ ಅಹಂಕಾರದ ವರ್ತನೆಗೆ ಸೂಕ್ತ ಉಪಾಯವೆಂದರೆ ಉದಾಸೀನ” ಮಾಡಿಬಿಡುವುದು. ಅವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಾರೆ ಎಂಬುದು ನಿಮಗೆತಿಳಿದಿರುವುದರಿಂದ, ಅವರು ಹೇಳುವುದನ್ನು ಮನಸ್ಸಿಗೆ ಹಾಕಿಕೊಳ್ಳಬಾರದು. ಏನು ಆಗೆ ಇಲ್ಲವೆಂಬಂತೆ ಅವರ ಕುಹಕದ ನುಡಿಗಳಿಗೆ ಮುಗುಳ್ನಗೆಯನ್ನು ಬೀರಬೇಕು. ಅದೇಪರಿಹಾರ. “ಅಹಂಕಾರಕ್ಕೆ ಉದಾಸೀನವೇ ಮದ್ದು-ಕುಹಕಕ್ಕೆ ಮುಗುಳ್ನಗೆಯೇ ಉತ್ತರ”  ಆಗ ಅವರಿಗಾಗುವ ಮಾನಸಿಕ ಸೋಲು ಅವರನ್ನು ಕಂಗೆಡಿಸುತ್ತದೆ. ಮಾನಸಿಕವಾಗಿಅವರಿಗೆ ಗೊಂದಲವಾಗಿಬಿಡುತ್ತದೆ. ಅರೇ.. ನಾನು ಏನು ಹೇಳಿದರೂ ಇವನು ತಲೆ ಕೆಡಿಸಿಕೊಳ್ಳುತ್ತಿಲ್ಲವಲ್ಲ ಎಂದು ಚಡಪಡಿಸುತ್ತಾರೆ. ಅಷ್ಟಕ್ಕೂ ತನ್ನಲ್ಲಿರುವ ದೌಲತ್ತಿನ ಬಗ್ಗೆಅಹಂಕಾರ ಪಟ್ಟುಕೊಂಡು ಇನ್ನೊಬ್ಬರನ್ನು ಆಡಿಕೊಳ್ಳುವುದು, ಸಭೆಯಲ್ಲಿ ತೇಜೋವದೆ ಮಾಡುವುದು, ಕುಹಕದ ನುಡಿಗಳನ್ನಾಡುವುದು ಒಂದು ರೀತಿಯ ಮಾನಸಿಕ ರೋಗವೇ ಸರಿ.

“ಬೆಟ್ಟದ ಮೇಲೊಂದು ಮನೆಯ ಮಾಡಿ  ಮೃಗಗಳಿಗಂಜಿದೊಡೆಂತಯ್ಯ,
ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆ–ತೊರೆಗಳಿಗಂಜಿದೊಂಡೆತಯ್ಯ,
ಸಂತೆಯಲ್ಲೊಂದು ಮನೆಯ ಮಾಡಿ ಸದ್ದು–ಗದ್ದಲಗಳಿಗಂಜಿದೊಡೆಂತಯ್ಯ,
ಚನ್ನಮಲ್ಲಿಕಾರ್ಜುನ ಲೋಕದಲ್ಲಿ ಹುಟ್ಟಿಬಂದ ಬಳಿಕ, ನಿಂದೆಗಳು ಬಂದಾಗ ಸಮಾಧಾನಿಯಾಗಿರಬೇಕು”

ಎಂದು ಅಕ್ಕಮಹಾದೇವಿಯವರು ಈಗಾಗಲೇ ಹೇಳಿದ್ದಾರೆ. ಹಾಗಾಗಿ ನಿಮ್ಮ ನಡುವೆ ಇಂತಹ ಅಹಂಕಾರ ತುಂಬಿದ, ಕುಹಕಿಗಳು ಇದ್ದಾಗ ಅವರನ್ನು, ಅವರ ಮಾತುಗಳನ್ನುಉದಾಸೀನ ಮಾಡಿಬಿಡಿ. ಅವರ ಕುಹಕಕ್ಕೆ ಮುಗುಳ್ನಕ್ಕುಬಿಡಿ. ಆಗ ಅವರ ಮಾನಸಿಕ ಸೋಲು ಅವರಿಗೆ ಅರಿವಾಗುತ್ತದೆ.
.

 –ಶರತ್ ಪಿ.ಕೆ. ಹಾಸನ.

 

8 Responses

 1. Hema Hema says:

  ನಿಜ..ಬರಹ ಇಷ್ಟವಾಯಿತು. ನಮ್ಮ ನಡುವೆ ಇಂಥಹ ಮಂದಿ ಆಗಾಗ ಕಾಣಸಿಗುತ್ತಾರೆ.

 2. ಶ್ರೀನಿವಾಸ ರಂಗಪ್ಪ ಶ್ರೀನಿವಾಸ ರಂಗಪ್ಪ says:

  ಹೌದು ಎಷ್ಟೋ ಜನ ತಾವೇ ಬುದ್ದಿವಂತರೆಂದು ಬೇರೆಯವರನ್ನು ಕುಹಕದಿಂದ ಮಾತನಾಡುತ್ತಾರೆ.ಅಂತಹವರನ್ನು ಉದಾಸೀನ ಮಾಡಿದರೆ ಸರಿಹೋಗಬಹುದು. “ಅಹಂಕಾರ ಕ್ಕೆ ಉದಾಸೀನ ಮದ್ದು” ಹಿಂದಿನವರು ಮಾಡಿದ ಗಾದೆ

 3. Avatar Nishkala Gorur says:

  ಒಪ್ಪೋವಂತ‌ ಬರಹ ಮತ್ತು ಅಭಿಪ್ರಾಯ…!!!

 4. Avatar Prakruthi says:

  ಈಗ ಸಾಮಾನ್ಯವಾಗಿ ಕಂಡು ಬರುವಂತಹ ಜನಗಳು ಹೀಗೆಯೆ

 5. Avatar prabhamaninagaraj says:

  ಉತ್ತಮ ಬರಹ .

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: