ಸೂಜಿ ದಾರ

Spread the love
Share Button

 Smith Amritaraj

ಸ್ಮಿತ ಅಮೃತರಾಜ್, ಸ೦ಪಾಜೆ.

 

 

ಇರಲಿ ಬಿಡಿ
ಹೇಗಾದರೊಮ್ಮೆ ಸರಿಯಾದರಷ್ಟೇ
ಸಾಕು.
ಮತ್ತೊ೦ದಷ್ಟು ದಿನಕ್ಕೆ
ಸುಧಾರಿಸಬಹುದು
ಸೂಜಿ ದಾರ ಹಿಡಿದು
ಹೊಲಿದದ್ದೇ ಹೊಲಿದದ್ದು

ಎಷ್ಟೊ೦ದು ತಾದ್ಮಾಯತೆ
ಅದೆಷ್ಟು ಹುರುಪು
ಮೊದ ಮೊದಲಿಗೆ
ಎಲ್ಲವಕ್ಕೂ ಎಲ್ಲರಿಗೂ
ಅದೇ ಉಮೇದು

ಸೂಕ್ಷ್ಮ ಕಣ್ಣಿನ ಸಣ್ಣ ಸೂಜಿಗೆ
ಕಣ್ಣಲ್ಲಿ ಕಣ್ಣಿಟ್ಟು ದಾರ
ಪೋಣಿಸುವುದಷ್ಟೇ ಪ್ರಯಾಸ
ಉಳಿದ೦ತೆ ಹತ್ತಿರ ಹತ್ತಿರ
ಹೊಲಿಗೆ ಹಾಕಿ ಬೇರ್ಪಟ್ಟ
ತುದಿಗಳಿಗೆ ಬೆಸುಗೆ ಹಾಕುವುದು
ಎಷ್ಟು ಖುಷಿಯ ವಿಷಯ

ಇಲ್ಲಿಯವರೆಗೆ ಎಲ್ಲಿತ್ತೋ ಏನೋ
ಹೊಲಿಯಲು ತಯಾರಾದದ್ದೇ ತಡ
ನಮೂನೆ ನಮೂನೆ ತರಾವರಿ ಬಟ್ಟೆಗಳು

ಉದ್ದಕ್ಕೆ ನೇಯ್ದದ್ದೆಷ್ಟೋ
ಅಡ್ಡಕ್ಕೆ ತೇಪೆ ಹಚ್ಚಿದ್ದೆಷ್ಟೋ
ಹೊಲಿದಷ್ಟೂ ಸಿಧ್ದಿಸುವ ತಾಳ್ಮೆ
ಎಳೆ ಎಳೆಯಲ್ಲೂ ಹರಿದಾಡುವ ಒಲುಮೆ

needle workತ೦ದದ್ದೇ ತ೦ದದ್ದು
ಬಣ್ಣ ಬಣ್ಣದ ದಾರ
ಹೊಲಿದಾಗಲೆಲ್ಲಾ ಕೂಡಿಕೊಳ್ಳುತ್ತವೆ
ಮತ್ತೆ ಮತ್ತೆ ಬಿಟ್ಟುಕೊಳ್ಳುತ್ತವಲ್ಲ?
ಸೂಜಿಯದ್ದು ಈಗ ನಿರ್ಲಿಪ್ತ ರಾಗ.

ಬೇಡ!
ಸೂಜಿಯೇ ಇಲ್ಲದ ಹೊಲಿಗೆ
ಇನ್ನೂ ಸರಾಗ
ಹೊಲಿದದ್ದು ಮತ್ತೆ ಹರಿಯಬಾರದಷ್ಟೆ
ಅದರೆಡೆಗಷ್ಟೇ ಆಕೆಯ ಧ್ಯಾನ….

 

-ಸ್ಮಿತ ಅಮೃತರಾಜ್, ಸ೦ಪಾಜೆ.
ಕೊಡಗು.

07/03/2014

2 Responses

  1. Ashok Mijar says:

    ಕವನ ತುಂಬಾ ಚೆನ್ನಾಗಿದೆ.

  2. Krishnaveni Kidoor says:

    ಇನ್ನೂ ಬರೆಯಿರಿ .ಚೆನ್ನಾಗಿದೆ .

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: