ಬೆಳಕ ಹುಡುಕಿ ಹೊರಟ ಮನುಜರ ಮಧ್ಯದಲ್ಲಿ

Share Button

 

 Ku.Sa.Madhusudan

ಹಾಗೆ ಬೆಳಕು ಹುಡುಕಿಹೊರಟವರೆಲ್ಲ ನಾಚುವಂತೆ

ಮಿಂಚುಹುಳುವೊಂದು 

ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು!

ಕಣ್ಣು ಕೋರೈಸುವ ಬೆಳಕಿರದಿದ್ದರೂ

ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು

ಆತ್ಮವಿಶ್ವಾಸ ತುಂಬಿತು.

.

ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆಲ್ಲಿ ಕತ್ತಲಿಲ್ಲ ಹೇಳು

ಮನೆಯ ಪ್ರತಿ ಮೂಲೆಯೊಳಗೆ

ಮನಸಿನ  ಸ್ವಂತ ಕೋಣೆಯೊಳಗೆ

ಹಾಗೆ ಹೊರಬಂದರೆ  ಬಕ್ಕಬೋರಲಾಗಿ ಬಿದ್ದ ಬಯಲೊಳಗೆ

ಅಷ್ಟೂ ದೇವರ ಗರ್ಭಗುಡಿಯೊಳಗೆ

ಮಸೀಧಿಮಂದಿರಗಳ ಅಂಗಳದೊಳಗೆ

ಇಗರ್ಜಿಗಳ ಶಾಂತ ಮೌನದೊಳಗೆ

ಸಭ್ಯ ಸಜ್ಜನರ  ಮಹಲುಗಳೊಳಗೆ

ಖೈದಿಗಳ ಕೂಡಿಹಾಕಿದ ಕಾರಾಗೃಹದೊಳಗೆ

ಸ್ಮಶಾನದ ಗೋರಿಗಳ  ಆಳದೊಳಗೆ

ಕಡಲಂತ ಕತ್ತಲಿಗೆ ಕೊನೆಯೆಲ್ಲಿ

ಬೆಳಕ ಹುಡುಕಿ ಹೊರಟ ಅಜ್ಞಾನಿಗಳ ಹುಡುಕಾಟದಲ್ಲಿ?

ಕತ್ತಲಿಗಿಂತ ಅಧಿಕ ಬೆಳಕುಂಟು

ಕಾಣುವ ಕಣ್ಣಿರುವವರಿಗೆ

ಸಹಸ್ರ ಸೂರ್ಯರೂ ಸಾಲರು

ಮನಸು ಮುಚ್ಚಿಕೊಂಡು ಕೂತ ಮನುಷ್ಯರಿಗೆ!

 

seachingfor light

 

– ಕು.ಸ.ಮಧುಸೂದನನಾಯರ್ , ರಂಗೇನಹಳ್ಳಿ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: