ಹಲಸಿನ ಸಿಹಿಹಲ್ವ, ಖಾರ ಸೋಂಟೆ

Share Button

Savithri Bhat Dec 2015 - Copy

 

ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ  ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ ಹಣ್ಣಿನ ಸಿಹಿಹಲ್ವ ಮತ್ತು ನೆಂಚಿಕೊಳ್ಳಲು ಖಾರದ ಸೋಂಟೆ ಮಾಡಿ ತಿನ್ನಬಹುದು.

ಹಲಸಿನ ಕಾಯಿಯ ಸೋಂಟೆ :

ಹಲಸಿನ ಕಾಯಿಯ ಸೊಳೆ ಯನ್ನು ಚಿಪ್ಸ್ ಗೆ ಬೇಕಾಗುವಂತೆ ಸೀಳಿ .ಅದಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ .ಅದಕ್ಕೆ ಒಂದು ಸೌಟು ಕಡಲೇ ಹಿಟ್ಟು ,ಖಾರ ಪುಡಿ, ಇಂಗು , ಓಮ ಸೇರಿಸಿ  ಚೆನ್ನಾಗಿ ಕಲೆಸಿ.  ಇದನ್ನು  ಕಾದಎಣ್ಣೆ ಯಲ್ಲಿ ಕರಿದರೆ ‘ಹಲಸಿನ ಕಾಯಿ ಸೋಂಟೆ’  ತಿನ್ನಲು ಸಿದ್ಧ.

Halasina hannina sonte-halva

ಹಲಸಿನ ಹಣ್ಣಿನ ಹಲ್ವ :

ಬೀಜ ಬೇರ್ಪಡಿಸಿ, ಆಯ್ದ  ಹಲಸಿನ ಹಣ್ಣಿನ ಸೊಳೆಗಳನ್ನು ಮಿಕ್ಸಿಯಲ್ಲಿ ರುಬ್ಬಬೇಕು.   ನಾಲ್ಕು ಕಪ್  ನಷ್ಟು ರುಬ್ಬಿದ ಹಣ್ಣಿಗೆ  2 ಕಪ್ ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ ತಿರುವಿ.  ಅರ್ಧ ಕಪ್ ತುಪ್ಪ ಸೇರಿಸಿ ಪುನ: ಕಾಯಿಸಿ .ನಂತರ ಸ್ವಲ್ಪ ಏಲಕ್ಕಿ ಪುಡಿ,ಗೋಡಂಬಿ ಸೇರಿಸಿ ಚೆನ್ನಾಗಿ ಬೆರೆಸಿ. ಹಲ್ವ ಮುದ್ದೆಯಾಗಿ  ತಳ ಬಿಟ್ಟಾಗ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.

ಈ ತಿಂಡಿಗಳು ಒಂದು ವಾರದ ವರೆಗೆ ಕೆಡುವುದಿಲ್ಲ.

 

 

 – ಸಾವಿತ್ರಿ ಭಟ್ ಪುತ್ತೂರು

 

2 Responses

  1. Shruthi Sharma says:

    ವಾಹ್! ಸೂಪರ್! 🙂

  2. Shankari Sharma says:

    ಸೋಂಟೆ…ಹಲ್ವ…ಮಳೆಗೆ ತಿನ್ನಲು ಬಹಳ ರುಚಿ…ಧನ್ಯವಾದಗಳು ಸಾವಿತ್ರಿ ಅಕ್ಕ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: