ಉದ್ದಿನ ಸಂಡಿಗೆ

Share Button

Chandravathy

 

ಬೇಸಗೆಯಲ್ಲಿ ಬಿಸಿಲಿನ ಸದುಪಯೋಗ ಪಡೆದು ಮಾಡಬಹುದಾದ ಕೆಲಸ ವಿವಿಧ ಹಪ್ಪಳ-ಸಂಡಿಗೆಗಳ ತಯಾರಿ.

ಉದ್ದಿನಬೇಳೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಬಳಸಿ ಸಂಡಿಗೆಯನ್ನು ತಯಾರಿಸುವ ವಿಧಾನ ಹೀಗಿದೆ:

  1. ಒಂದು ಲೋಟದಷ್ಟು  (ಸುಮಾರು 100 ಗ್ರಾಮ್) ಉದ್ದಿನಬೇಳೆಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಉದ್ದಿನಬೇಳೆಯನ್ನು ಸೋಸಿ ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ.
  2. ಕಾಲು ಕಿಲೊ ಹಸಿರುಮೆಣಸಿನಕಾಯಿಗಳನ್ನು ತೊಟ್ಟು ಬೇರ್ಪಡಿಸಿ, ಶುಚಿಗೊಳಿಸಿ, ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗಲೇ ಒಂದು ಟೇಬಲ್ ಸ್ಪೂನ್ ನಷ್ಟು ಉಪ್ಪು ಸೇರಿಸಿ. ಆಗ ಉಪ್ಪು-ಖಾರ ಚೆನ್ನಾಗಿ ಹೊಂದಿಕೊಳ್ಳುತ್ತದೆ.
  3. ರುಬ್ಬಿದ ಉದ್ದಿನಹಿಟ್ಟು ಮತ್ತು ಹಸಿರುಮೆಣಸಿನಕಾಯಿ ತರಿಯನ್ನು ಬೆರೆಸಿ  ಚೆನ್ನಾಗಿ ಕೆದಕಿ. ಈ ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ಗಟ್ಟಿಯಿರಬೇಕು .
  4. ಹೀಗೆ ಸಿದ್ಧಪಡಿಸಿದ ಹಿಟ್ಟಿನಿಂದ ಬಾಳೆ ಎಲೆ ಮೇಲೆ ಪುಟ್ಟದಾಗಿ ಸಂಡಿಗೆಗಳನ್ನು ಹಾಕಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.
  5. ಒಣಗಿದ ಸಂಡಿಗೆಗಳನ್ನು ಗಾಳಿಯಾಡದ ಶೇಖರಿಸಿಟ್ಟರೆ ಒಂದು ವರ್ಷಕ್ಕೂ ಕೆಡುವುದಿಲ್ಲ.

uddu-menasu-uppu     Sandige1

ಊಟಕ್ಕೆ ನೆಂಚಿಕೊಳ್ಳಲು ಬೇಕೆನಿಸಿದಾಗ, ಕಾದ ಎಣ್ಣೆಯಲ್ಲಿ ಉದ್ದಿನ ಸಂಡಿಗೆಗಳನ್ನು ಕಂದು ಬಣ್ಣಕ್ಕೆ ಬರುವಂತೆ ಕರಿಯಬೇಕು. ಈ ಸಂಡಿಗೆಯು ತುಪ್ಪನ್ನ ಅಥವಾ ಮೊಸರನ್ನದೊಂದಿಗೆ ಉಣ್ಣಲು ಬಹಳ ರುಚಿಯಾಗಿರುತ್ತದೆ.sandige 2

ವಿ.ಸೂ :  ಹಸಿರುಮೆಣಸಿನಕಾಯಿಯ ಘಾಟು ತಗ್ಗಿಸಲು ಬೇಕೆನಿಸಿದರೆ, ಹಿಟ್ಟು ತಯಾರಿಸುವಾಗ ಸ್ವಲ್ಪ ಕಾಪ್ಸಿಕಮ್ , ಸೋರೆಕಾಯಿ, ಸೌತೆಕಾಯಿ ಅಥವಾ ಬೂದುಗಂಬಳಕಾಯಿ ಇವುಗಳಲ್ಲಿ ಯಾವುದಾದರೂ ಒಂದನ್ನು ತುರಿದು ಹಿಂಡಿ ಸೇರಿಸಬಹುದು.  ಆದರೆ ಹಿಟ್ಟು ತೆಳುವಾಗದಂತೆ ಜಾಗರೂಕತೆ ವಹಿಸಬೇಕು.ತರಕಾರಿಯ ನೀರನ್ನು ಸೇರಿಸಬಾರದು. ಹೆಚ್ಚಿದ ಕರಿಬೇವಿನ ಸೊಪ್ಪನ್ನೂ ಸೇರಿಸಬಹುದು.

 

– ಚಂದ್ರಾವತಿ.ಬಿ

3 Responses

  1. Avatar Rajalakshmi Rao says:

    Good information. Thanks a lot.

  2. Avatar Jayananda Kumar says:

    good information

  3. Avatar Shruthi Sharma says:

    ಬೇಸಿಗೆಯ ಬಿಸಿಲಿನ ಸದುಪಯೋಗದಿಂದ ತಯಾರಿಸಿದ ಘಮಗುಟ್ಟುವ ಸಂಡಿಗೆ ಮಳೆಗಾಲದಲ್ಲಿ ಆಪ್ತಮಿತ್ರ.. ಒಳ್ಳೆಯ ಬರಹ .. 🙂

Leave a Reply to Rajalakshmi Rao Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: