ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 3

Share Button

Ranganna Nadagir

ಯಥಾ ಪ್ರಕಾರ  ಮೂರನೆಯ  ದಿನವೂ ನಾಷ್ಟಾ  ಮುಗಿದ ನಂತರ  ಸಂಭ್ರಮದ 12 ನೆಯ ಗೋಷ್ಠಿ ಗೆ ಸಾಕ್ಷಿ  ಆದೆವು ,

ಗೋಷ್ಠಿ 12. ಸತ್ಯದೊಂದಿಗೆ  ಪ್ರಯೋಗ  (ಆತ್ಮಕಥೆಗಳು )

ಶ್ರೀ ಜಿ .ಎಸ್  ಅಮೂರ ಅವರ  ಅನುಪಸ್ಥಿತಿಯಲ್ಲಿ ಶ್ರೀ ಗಿರಡ್ಡಿ  ಗೋವಿಂದರಾಜರು ಭಾಗವಹಿಸಿ , ಶ್ರೀ ಅನಂತಮೂರ್ತಿ ,ಮತ್ತು ಶ್ರೀ ಪಿ.ಲಂಕೇಶ ಅವರ ಆತ್ಮಕಥೆಗಳು ಜನರಿಗೆ ನಿರಾಸೆ ಉಂಟು ಮಾಡಿದವು. ಅಂದುಕೊಂಡಂತೆ ಆತ್ಮಕಥೆಗಳಲ್ಲಿ ಸಂಗತಿಗಳ ಕೊರತೆ ಕಂಡು ಬಂತು. ಆತ್ಮಕಥೆ ಸಾಹಿತ್ಯದಲ್ಲಿ ವಿಭಿನ್ನ ವಾಗಿದ್ದು,ಇದನ್ನು ಬರೆಯುವಾಗ ತಮ್ಮ ಬಾಲ್ಯದ,ತಾರುಣ್ಯದ, ಮದುವೆಯ ನಂತರದ ಜೀವನ ಕುರಿತಾಗಿ ಬರೆಯುವದು ಕಂಡು ಬರುತ್ತದೆ, ಇವನ್ನು ಅಳವಡಿಸುವ ಬಗ್ಗೆ ನಿರ್ಧಾರ  ಲೇಖಕನಿಗೆ  ಬಿಟ್ಟಿದ್ದು,ನಮ್ಮಲ್ಲಿ ಭ್ರಷ್ಟಾಚಾರ ಕುರಿತಾಗಿ ಯಾರೂ ಆತ್ಮಕಥೆ ಬರೆದಿಲ್ಲ ಅಥವಾ  ಬರೆದಿರುವ ಆತ್ಮಕಥೆಗಳಲ್ಲಿ ಇದನ್ನು ನಮೂದಿಸಿಲ್ಲ ಎಂದು  ವ್ಯಂಗ ಭರಿತ ಅನಿಸಿಕೆ ತಿಳಿಸಿದರು, ದಲಿತ ಲೇಖಕ   ಲಕ್ಷ್ಮಣ ತಮ್ಮ ಕಥೆ ಕಥೆ ಹಾಗು ದಲಿತರ ಸಂಕಟಗಳ ಬಗ್ಗೆ ಹೇಳುತ್ತಾ  ಭಾವನಾಪೂರ್ಣರಾದರು. ನಂತರ  ಲೇಖಕಿ ಶಶಿಕಲಾ ವೀರಯ್ಯಸ್ವಾಮಿ  ತಮ್ಮ ಆತ್ಮಕತೆ ಕುರಿತಾಗಿ ಬರೆದ ಕಾದಂಬರಿ ಕುರಿತು ದೀರ್ಘ ವಿವರಣೆ ನೀಡಿದರು.
 .
ಗೋಷ್ಠಿ 13. ಕನ್ನಡದಲ್ಲಿ ಇಷ್ಟು ಮಹಾ ಕಾವ್ಯಗಳು  ಏಕೆ ?
ಗೋಷ್ಠಿಯ ವಿಷಯವೇ  ಗೊಂದಲದ್ದಾಗಿತ್ತು, ಮಹಾಕಾವ್ಯದ ಜನನ ಸಾವಿನ ಚರ್ಚೆ ನಡೆದು . ನಿರ್ದೇಶಕ  ಹೆಚ್. ಎಸ್. ವೆಂಕಟೇಶ ಮೂರ್ತಿ ಯವರ ಅನಿಸಿಕೆ   ತೋರ್ಪಡಿಸಿದ್ದು  ಈ  ರೀತಿ ಇತ್ತು.“ಮಹಾಕಾವ್ಯ ಇಂದು ಸತ್ತು ಹೋಗಿದ್ದು ಇದಕ್ಕೆ ಪುರಸ್ಕರಣೆ ಇಲ್ಲ, ಓದುವವರೂ ಇಲ್ಲ” ಎಂದು ನುಡಿದು ಮಹಾಕಾವ್ಯ ರಚಿಸುವವರ ಆಕ್ರೋಶಕ್ಕೆ ಗುರಿಯಾದರು, ಇದಕ್ಕುತ್ತರವಾಗಿ, ತಮ್ಮ ಮಾತಿನಲ್ಲಿ ಶ್ರೀ  ಸಿ .ಎನ್ ,ರಾಮಚಂದ್ರನ್ ಖಾರವಾಗಿ ಪ್ರತಿಕ್ರಿಯಿಸುತ್ತ, ಮಹಾಕಾವ್ಯ ಓದುವದಿಲ್ಲ ಎಂಬ ಸರ್ವೇ ಆಗಿಲ್ಲ ,ಶ್ರಿಮತಿ ಲತಾ ರಾಜಶೆಖರರ ಕಾವ್ಯ ಮರು ಮುದ್ರಣ ಆಗಿದೆ, ಕಾರಣ ಇದಕ್ಕೆ ಸಾವು ಇಲ್ಲ, ಹಾಗು ಮಹಾಕಾವ್ಯದ ಪರಂಪರೆ ಇನ್ನೂ  ನೂರು  ವರ್ಷ ಗತಿಸಿದರೂ ಸಾಯುವದಿಲ್ಲ ಎಂದು ಅಭಿಪ್ರಾಯ ನೀಡಿದರು . ನಂತರ ಕವಯತ್ರಿ  ಲತಾ ರಾಜಶೇಖರಮಹಾಕಾವ್ಯದ ಹರವು ವಿಶಾಲವಾಗಿದ್ದು ,ಇದು ಪ್ರತಿಭಾನ್ವಿತ ಮತ್ತು  ಗಂಭೀರ ಇದ್ದು, ಇದನ್ನು  ತಿಳಿದುಕೊಳ್ಳಬೇಕಾದವರು  ಓದಬೇಕಾದ ಸಮಗ್ರ ವಿಷಯ ಎಂದು ಪ್ರತಿಪಾದಿಸಿದರು.
 .
ಗೋಷ್ಠಿ  14. ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು.
ಕವಿ ದಿನಕರ ದೇಸಾಯಿಯವರ ನೆನಪು ಮಾಡುತ್ತ ,ಗೋಷ್ಠಿಯ ನಿರ್ದೇಶಕ ಶ್ರೀ ವಿಷ್ಣು ನಾಯಕ , ದಿನಕರ ಐವರು  400 ಕವಿತೆ, 8000  ಚುಟುಕು ಬರೆದಿದ್ದರೂ ಬರೆದಿದ್ದು ನಾವು ಅವರನ್ನು ಕವಿಯಾಗಿ ಸ್ವೀಕರಿಸಲಿಲ್ಲ, ಅವರು ಚುಟುಕು ಕವಿ ಎಂದೇ ಪ್ರಸಿದ್ಧರಾದರು. ಸಭೆಯಲ್ಲಿ ಭಾಗವಹಿಸಿದ ಬಹುತೇಕ  ಕವಿಗಳು   ದೇಸಾಯಿಯವರ ಚುಟುಕುಗಳನ್ನುವಾಚಿಸಿದರು ಹಿರಿಯ ಕವಿ ನಾಡೋಜ ಚನ್ನವೀರ ಕಣವಿಯವರು ಹೊಸಕಾಲದ ವೈಚಾರಿಕತೆ ಹೊಂದಿದ 1931ರಲ್ಲಿ  ಶ್ರೀ ವಿ. ಸೀ, ವಿರಚಿತ “ತಸ್ಮೈ  ದೇವಾಯ” ಎಂಬ ಕವಿತೆಗೆ ನುಡಿಯಾದರು , ಸ್ವತಃ ಗಮಕಿ. ಮತ್ತು ಗಾಯಕರಾದ  ಶ್ರೀ ಚಂದ್ರಶೇಖರ  ಕೆದಲಾಯ ಅವರು ಶ್ರೀ ವಿ.ಸೀ ಯವರ ಸುಪ್ರಸಿದ್ಧ ಕವಿತೆ “ ಎಮ್ಮ  ಮನೆ ಅಂಗಳದಿ ಬೆಳೆದೊಂದ ಹೂವನ್ನ–“ ಹಾಡುವ ಮೂಲಕ ಸಭಿಕರನ್ನು ಆಕರ್ಷಿಸಿದರು, ಹಾಡು  ಮುಕ್ತಾಯದ ಹಂತದಲ್ಲಿದ್ದಾಗ  ಹೆಣ್ಣು  ಹೆತ್ತವರ  ಕಣ್ಣಲ್ಲಿ  ಅಶ್ರುಗಳು ಕಂಡು ಬಂದವು , ರಾಜಕಾರಣಿ ಶ್ರೀ ಸನದಿಯವರ ನನ್ನ ಬಂಗಾರು ಹಾಗು ಇನ್ನಿತರ   ಚುಟುಕುಗಳು  ಸಮಯೋಚಿತವೆನಿಸಿದವು. ಸದರ  ಗೋಷ್ಠಿಯು ಕಾವ್ಯ ಲೋಕವನ್ನೇ   ಸೃಷ್ಟಿ  ಮಾಡಿತು
 ,
ಗೋಷ್ಠಿ 15. ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು
ಗೋಷ್ಠಿಯ ನಿರ್ದೇಶಕರಾದ ಶ್ರೀ ಪ್ರಕಾಶ ಭಟ್  ಈಗ  ಕೃಷಿ ಅಳವಿನ ಅಂಚಿನಲ್ಲಿದ್ದು ಸುತ್ತಲೂ ಕತ್ತಲೆ ಆವರಿಸಿದಂತಾಗಿದೆ. ಇನ್ನಿತರ ಕೃಷಿ ಪಂಡಿತರಾದ  ಶ್ರೀ ಚಂದ್ರಶೇಖರ್ ಮತ್ತು ಶ್ರೀ ಶಿವಾನಂದ ಅವರು ತಮ್ಮ ಅನುಭವಗಳನ್ನು ವಿದಿತಪಡಿಸುತ್ತಾ ರೈತ ಕಾರ್ಮಿಕರ ಕೊರತೆ, ಕೀಟದ ಭಾಧೆ, ನೀರಿನ ಅಭಾವ , ವಿದ್ಯುತ್ತ ಸಮಸ್ಯೆ , ಮಧ್ಯವರ್ತಿಗಳ ಹಾವಳಿ, ಕಾನೂನು ಮುಂತಾದ  ಸಮಸ್ಯೆಗಳತ್ತ ಗಮನ ಸೆಳೆದರು, ರೈತ ಅತ್ಮಹತ್ತೆ ಮಾಡಿಕೊಂಡದ್ದನ್ನು ಮಾಧ್ಯಮಗಳು ವೈಭವೀಕರಿಸಿ ಅಂಕಿ ಸಂಖ್ಯೆ ಮಾತ್ರ ನೀಡಿದವು, ಅಂತ ರೈತನ ಕುಟುಂಬ  ಅನುಭವಿಸುತ್ತಿರುವ  ದಾರುಣ  ಚಿತ್ರ  ತೋರಿಸುವಲ್ಲಿ  ಕ್ರಮ ಕೈಗೊಳ್ಳಲಿಲ್ಲ, ಆಧುನಿಕ ಸುಧಾರಿತ ಪದ್ಧತಿಯನ್ನು ಅನುಸರಿಸಿ ಹೊಲಗಳಿಂದ ಹೆಚ್ಚಿನ ಪ್ರತಿಫಲ ಪಡೆಯಬಹುದಾಗಿದೆ ಎಂದು ಮೂವರು ತಜ್ಞರು ಅಭಿಪ್ರಾಯ ಕೊಟ್ಟರು. ಶ್ರೀ ಶಿವಕುಮಾರರು, ಡಾಕ್ಟರ, ಎಂಜಿನಿಯರ ವರಗಳಿಗೆ ಪ್ರತಿಯೊಬ್ಬರೂ ಮಗಳನ್ನು ಕೊಡುವದನ್ನು ಬಿಟ್ಟು ರೈತರ ಮಕ್ಕಳಿಗೆ ಕನ್ಯಾ  ಕೊಡಲು  ಮುಂದೆ ಬಂದಲ್ಲಿ ಕೃಷಿಯ ಬಹುಪಾಲು  ಸಮಸ್ಯೆ ಬಗೆಹರಿದಂತೆ ಎಂದು ಹೇಳಿದಾಗ  ಸಭೆಯಲ್ಲಿ ಚಪ್ಪಾಳೆಗಳ  ಸುರಿಮಳೆ  ಆಯಿತು,
Jayant Kaykini-Satyu-Anantanag
ಗೋಷ್ಠಿ 16 ಸಂವಾದ- ಚಲನ ಚಿತ್ರ ಮಾಧ್ಯಮದ ಚಲನಶೀಲತೆ

ಎಲ್ಲರೂ ಕಾತರದಿಂದ  ಕಾಯ್ದು ಕುಳಿತ ಗೋಷ್ಠಿ ಇದಾಗಿತ್ತು, ಕಾರಣ  ಭಾಗವಹಿಸಿದವರು, ಅತ್ಯುತ್ತಮ ನಿರ್ದೇಶಕ ಶ್ರೀ ಎಂ ಎಸ್. ಸತ್ತ್ಯು . ಮೇರು ನಟ ಶ್ರೀ ಅನಂತ ನಾಗ ,ಹಾಗು ಇವರಿಬ್ಬರನ್ನು ನಿರ್ದೇಶಿಸಲು ಮತ್ತೊಬ್ಬ ಧೀಮಂತ ಕವಿ , ಕಥೆಗಾರ ಶ್ರೀ ಜಯಂತ  ಕಾಯ್ಕಿಣಿ . ಮೂವರು ಸಭಾಸೀನರಾಗುತ್ತಿದ್ದಂತೆ  ಸಭಿಕರು ಅವರ ಮಾತುಗಳನ್ನು ಕೇಳಲು ನಿಶ್ಶಬ್ದರಾಗಿ  ಕುಳಿತರು. ಸಿನಿಮಾ ಎಂದರೆ ಮಾಯಗಾರನ ಜಾದೂ ಎನ್ನುತ್ತಾ ಶ್ರೀ ಜಯಂತ ಅವರು ತಮ್ಮ ಎಂದಿನ ಮುಗುಳ್ನಗೆಯಿಂದ ಗೋಷ್ಠಿ ಪ್ರಾರಂಭಿಸಿದರು.

ಶ್ರೀ ಸತ್ಯು ಅವರು ಚಲನಚಿತ್ರದ  ನಿರ್ದೇಶನ ಮಾಡುವಾಗ ಪಡಬೇಕಾದ ಕಷ್ಟ, ಪ್ರತಿ ಸೀನುಗಳಿಗಾಗಿ  ಹುಡುಕಬೇಕಾದ  ಚಿತ್ರೀಕರಣ ಸ್ಥಳಗಳ ಬಗ್ಗೆ ವಿವರಿಸುತ್ತ, ಚಿತ್ರಕ್ಕೆ ಸಂಭಂಧ  ಪಟ್ಟ ವ್ಯಕ್ತಿಗಳಿಗೆ ಆಯಾ ಪ್ರದೇಶದ ಮಾಹಿತಿ, ಸ್ಥಳೀಯ ಭಾಷೆಗಳ ಅರಿವು  ಇರಲೇಬೇಕು, ಎನ್ನುತ್ತಾ ತಾವೆ ನಿರ್ದೇಶನ ಮಾಡಿದ “ಬರ” ಚಿತ್ರಕ್ಕಾಗಿ  ಬೀದರದಲ್ಲಿ  ಚಿತ್ರೀಕರಣ ಮಾಡುವಾಗಿನ ಸಂದರ್ಭ, ಅಲ್ಲಿ ಮರಾಠಿ , ಉರ್ದು, ಹಾಗು ದೇಶೀ ಭಾಷೆಗಳ ಕುರಿತಾಗಿ ವಿಶ್ಲೇಷಣ ಮಾಡಿದರು.  ಚಿತ್ರದಲ್ಲಿ ಜಿಲ್ಲಾಧಿಕಾರಿಯ  ಪಾತ್ರ  ವಹಿಸಿದ ಶ್ರೀ ಅನಂತನಾಗವರು  ತಮ್ಮ ನಟನ ಕಲೆಯ  ಬಗ್ಗೆ ತಿಳಿಸುತ್ತ ತಮಗೆ ಅತೀ ಇಷ್ಟವಾದ ಚಿತ್ರ “ಬೆಂಕಿಯ ಬಲೆ ‘..ಹಾಗೂ ತಾವು ರಾಜಕೀಯಕ್ಕೆ ಹೋದರು ಅಲ್ಲಿ ನಟನೆ ಮಾಡಲಿಲ್ಲ . . ಏಕೆಂದರೆ ಅಲ್ಲಿ ನನಗಿಂತ ಹೆಚ್ಚಿನ ನಟನಾ ಪ್ರವೀಣರು   ಇದ್ದರು   ಎಂದಾಗ  ಸಭೆಯಲ್ಲಿ ನಗೆಯ ಬುಗ್ಗೆ.

 .
ಶ್ರೀ ಸತ್ಯು ಅವರು ಮುಂದುವರೆಯುತ್ತ , ಕಾದಂಬರಿಗಳ ಚಿತ್ರೀಕರಣ  ಅಷ್ಟು ಸುಲಭವಲ್ಲ, ಪ್ರದರ್ಶಕರು, ವಿತರಕರು ಸಿಗುವದಿಲ್ಲ,ಶ್ರೀ ರಾವ್ ಬಹದ್ದೂರರ “ಗ್ರಾಮಾಯಣ ‘ ಚಿತ್ರಕ್ಕೆ ಅಳವಡಿಸಲು ಯೋಗ್ಯ ಕಾದಂಬರಿ ಎಂದು ತಿಳಿಸಿದರು ಶ್ರೀ ಜಯಂತ ಅವರು ಅನಂತನಾಗ ಅವರಿಗೆ ಅವರ ಪತ್ನಿ ನಟಿ ಗಾಯತ್ರಿ ಬಗ್ಗೆ ಕೇಳಿದಾಗ, ಲಗ್ನವಾದ ನಂತರ  ನಟನೆ ಬಿಡಲು ನಾನು ಹೇಳಲು ಹೋದಾಗ, ಅವಳೇ ನಾನಿನ್ನು ನಟಿಸುವದಿಲ್ಲ , ಬದಲಾಗಿ ನಿರ್ದೇಶನ  ಮಾಡುತ್ತೇನೆ, ಹಾಗೂ ಪ್ರತಿ ಹಂತದಲ್ಲೂ ನನ್ನನ್ನು ಡೈರೆಕ್ಟ್ ಮಾಡುತ್ತ ಇದ್ದಾಳೆ ಎಂದು ಹಾಸ್ಯ  ಮಿಶ್ರಿತ ಸ್ವರದಲ್ಲಿ ಹೇಳಿಕೆ ನೀಡಿದರು. ಇಂದೇ 60 ನೆಯ ವಸಂತಕ್ಕೆ  ಕಾಲಿಟ್ಟ ಶ್ರೀ ಜಯಂತ, ಅವರ ಜವಾಬ್ದಾರಿಯುತ , ಗಂಭೀರ ಹಾಗು ನಗೆ ಬರುವಂತ ಪ್ರಶ್ನೆಗಳು  ಹಾಗು ಮೇಧಾವಿ ಉತ್ತರಗಳು, ಮತ್ತೆ ಮತ್ತೆ ಗೋಷ್ಠಿಯನ್ನು ನೆನಪಿನಲ್ಲಿ ಇಡುವoತೆ ಮಾಡಿದವು.
 .
ರವಿವಾರ, ಸಂಜೆ ಸಾಹಿತ್ಯ ಸಂಭ್ರಮದ  ಮೂರು ದಿನಗಳ  ಮುಕ್ತಾಯ ಸಮಾರಂಭ ವಿಮರ್ಶಕ  ಗಿರಡ್ಡಿ ಗೋವಿಂದರಾಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸಾಕಷ್ಟು ಕಷ್ಟಗಳನ್ನು  ಎದುರಿಸಿ, ಆರಂಭಿಸಿದ  “ಸಾಹಿತ್ಯ ಸಂಭ್ರಮದ” ಈ  4 ನೆಯ  ವರ್ಷ ಸಂಪೂರ್ಣ ಯಶಸ್ವಿ ಆದ ಬಗ್ಗೆ ಎಲ್ಲರಲ್ಲೂ  ಸಂತ್ರಪ್ತ ಭಾವನೆ  ತುಂಬುವಲ್ಲಿ ಯಶಸ್ವೀ ಆಯಿತು , ಸಾಹಿತಿ ಸಂಶೋಧಕ  ದಿವಂಗತ  ಎಂ,ಎಂ, ಕಲಬುರ್ಗಿ ಅವರ ಹಂತಕನನ್ನು ಸರಕಾರ ಆದಷ್ಟು  ಬೇಗನೆ  ಪತ್ತೆ ಹಚ್ಚಬೇಕೆಂಬ ಒತ್ತಾಯದ ನಿರ್ಣಯಕ್ಕೆ ಸಭಿಕರೆಲ್ಲರೂ ಬೆಂಬಲ ಸೂಚಿಸಿದರು. ಲೇಖಕ ಕೆ .ಚಿದಾನಂದ ಗೌಡ ಸಂಭ್ರಮದ ಸಾರ್ಥಕತೆಯನ್ನು ತಿಳಿಸಿದರು, ಲೋಹಿತ ನಾಯಕರರಿಂದ ಸಮಾರಂಭದ  ಯಶಸ್ಸಿಗೆ ಕಾರಣರಾದ ಎಲ್ಲರಿಗೂ ವಂದನಾರ್ಪಣೆ  ಸಲ್ಲಿಸಿಸಲ್ಲಿಸಲಯಿತು. ಅಂದು ರಾತ್ರಿ  ಶ್ರೀ ಎಂ ಎಸ್  ಸತ್ಯು ನಿರ್ದೇಶನದ , ಶ್ರೀ ಅನಂತ ನಾಗರು  ನಟಿಸಿದ ಚಿತ್ರ  ಆರ್ಟ್  ಫಿಲಂ”ಬರ” ಪ್ರದರ್ಶನ  ಏರ್ಪಡಿಸಲಾಗಿತ್ತು,
 .
ಇವೆಲ್ಲ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿ  ಧನ್ಯತಾ ಭಾವಗಳೊಂದಿಗೆ, ಇನ್ನೆರಡು ದಿನಾ ಕಾರ್ಯಕ್ರಮಗಳು ಇರಬೇಕಾಗಿತ್ತು, ಮುಂದಿನ ವರ್ಷದ ಸಂಭ್ರಮಕ್ಕೆ ಆಗಮಿಸುವ ಇರಾದೆಯಿಂದ, ನಾವೆಲ್ಲಾ ನಮ್ಮ ಗೂಡುಗಳಿಗೆ ಮರಳಿದೆವು.
 .
ಮರೆಯಲಾರದ    ವ್ಯಕ್ತಿಗಳು
Dr.Ha.Vem.Kaakhamdiki
 ಡಾ.ಹ.ವೆಂ.ಕಾಖಂಡಿಕಿ
.
  1. ಎಲ್ಲ ಗೋಷ್ಠಿಗಳನ್ನು ವೇಳೆಗೆ ಸರಿಯಾಗಿ ನಡೆಸಿ, ಗೋಷ್ಠಿಗಳ   ನಿರ್ದೇಶಕರನ್ನು ಎಚ್ಚರಿಸುತ್ತ,  ಪ್ರಾರಂಭದ ದಿನದಿಂದ ಮುಕ್ತಾಯದ  ದಿನದ ವರೆಗೂ   ಕಾರ್ಯಕ್ರಮಕ್ಕೆ ಬೆನ್ನೆಲುಬು  ಆಗಿ ನಿಂತ  ಡಾ.ಹ.ವೆಂ.ಕಾಖಂಡಿಕಿ  ಅವರು ಮರೆಯಲಾರದ ವ್ಯಕ್ತಿ .
  2. ಹೊತ್ತೊತ್ತಿಗೆ ಸರಿಯಾಗಿ  ರುಚಿ ರುಚಿ ಯಾದ  ಭಕ್ಷ ಭೋಜ್ಯ  ಮಾಡಿ  ಸಂತೃಪ್ತ ಪಡಿಸಿದ  ಬಾಣಸಿಗರ  ಸಮೂಹ,. ಸಮವಸ್ತ್ರ  ಧರಿಸಿ ಮುಗುಳ್ನಗೆಯಿಂದ ಊಟ ಬಡಿಸಿದ ಸ್ತ್ರೀ ಸಮೂಹ.ಭಿಸಿ ಬಿಸಿ ಸಕ್ಕರೆ ಸಹಿತ ಹಾಗು ಸಕ್ಕರೆ ರಹಿತ ವಿತರಣೆ ಮಾಡುತ್ತಿದ್ದ ಸ್ತ್ರೀ ವರ್ಗ, ಊಟದ  ನಂತರ ನಮಗೆ  ಮತ್ತು ಶುದ್ಧೀಕರಿಸಿದ ನೀರು ಹಾಗು  ಮಜ್ಜಿಗೆ  ವಿತರಿಸಿದವರು.
  3. ಅಚ್ಚುಕಟ್ಟಾಗಿ ಸಭೆಗೆ ಕಾವಲಾಗಿ ನಿಂತು ಯಾವುದೇ ಗಲಾಟೆಗೆ ಅವಕಾಶ ನೀಡದೇ  ಕರ್ತವ್ಯ ನಿರ್ವಹಿಸಿದ ಪೋಲಿಸ್ ಸಿಬ್ಬಂದಿ  ವರ್ಗ
  4. ಆವರಣದಲ್ಲಿ  ಸುವ್ಯವಸ್ಥಿತ  ರೀತಿಯಲ್ಲಿ ಅಳವಡಿಸಿದ ಪುಸ್ತಕ ಮಳಿಗೆಗಳು ಹಾಗು ಮಾರಾಟಗಾರರ  ಸುವರ್ತನೆ
  5.  ಗೋಷ್ಠಿಗಳಿಗೆ  ತಕ್ಕಂತೆ, ಆಸನ . ಸ್ಟೇಜ್ ಪರಿವರ್ತನೆ, ಮೈಕ್ , ಧ್ವನಿ ವರ್ಧಕಗಳ ಸುವ್ಯವಸ್ಥೆ  ಮಾಡಿದ ಸಿಬ್ಬಂದಿ ವರ್ಗಗಳ ನಿಸ್ವಾರ್ಥ ಸೇವೆ
(ಮುಗಿಯಿತು) 
– ರಂಗಣ್ಣ ಕೆ. ನಾಡಗೀರ್ , ಹುಬ್ಬಳ್ಳಿ
 .
 ಹಿಂದಿನ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ  :  ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 2
                                                   ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1   
.

9 Responses

  1. ಭಾಗ್ಯಲಕ್ಷ್ಮಿ says:

    ಅಸಹಿಷ್ಣುತೆಯ ಸಂವಾದದಲ್ಲಿ ವಿಧನಸೌಧದ ಕಲಾಪ ,”ಅಷ್ಟು ದೂರದಿಂದ ರಾಂಪ್ ವಾಕಿಂಗ್ ಗೆ ಬಂದ್ದಿದ್ದೆವೆಯೇ ?” ಅಂದ ಟಿ .ಯಮ್ ಸೀತಾರಾಮ್ ರವರ ಚುರುಕು ಮುಟ್ಟಿಸಿವ ಮಾತು,ಹೆಣ್ಣು ಮತ್ತು ಗಂಡು ಒಬ್ಬರಿಗೊಬ್ಬರು ಪೂರಕ ಎಂದು ಸಾರುವ ಮಾತು , ಬೀಚಿ ಯವರ ಗೋವಾ ಬ್ರಾ ಹ್ಮಣರು , ನಟ ಅನಂತ ನಾಗ್ ರವರು ರಾಜಕೀಯ ನಟನಾ ಪ್ರವೀಣರ ಮುಂದೆ ಕುಬ್ಜರಾದದ್ದು ಎಲ್ಲವೂ ಅವರವರ ಮಾತುಗಳಲ್ಲಿಯೇ ಓದುವುದರೊಂದಿಗೆ ಸಾಹಿತ್ಯ ಸಂಭ್ರಮದ ರಸದೌತಣ ಸವಿದಂತೆ ಭಾಸವಾಯಿತು . ಉತ್ತಮವಾದ ನಿರೂಪಣಾ ಶೈಲಿಯ ವರದಿಗೆ ಧನ್ಯವಾದಗಳು .

    • Ranganath Nadgir says:

      ಸಾಹಿತ್ಯ ,ಸಂಬ್ರಮದ ವಿವರವಾದ ೩ ದಿನಗಳ ವರದಿ , ನಿಮ್ಮ ಒಂದೇ ಪ್ಯಾರಾದಲ್ಲಿ
      ಮೂಡಿ ಬಂದಿದೆ, ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ,

  2. Hema says:

    ಸಾಹಿತ್ಯ ಸಂಭ್ರಮದ ಎಲ್ಲಾ ಗೋಷ್ಠಿಗಳನ್ನು ಬಹಳ ಉತ್ತಮವಾಗಿ, ಸ್ವಾರಸ್ಯಕರವಾಗಿ ನಿರೂಪಿಸಿದ್ದೀರಿ. ಎಲ್ಲಾ ಗೋಷ್ಠಿಗಳನ್ನು ಪುನ: ಮೆಲುಕು ಹಾಕಿದಂತಾಯಿತು.

  3. Ranganath Nadgir says:

    ಶ್ರೀಮತಿ ಹೇಮಕ್ಕ, ಲೇಖನ ಬರೆಯಲು ಸೂಕ್ತ ಮಾರ್ಗ ದರ್ಶನ ,ಹಾಗು ನಿರ್ದಿಷ್ಟ ಜಾಗೆಗಳಲ್ಲಿ
    ಫೋಟೋ ಅಳವಡಿಸಲು ನೀಡಿದ ನಿಮ್ಮ ನೆರವನ್ನು ನೆನಪಿಸಿಗೊಳ್ಳುತ್ತ. ತಮಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ,

    • M.Y.Kotrannavar. says:

      Sahitya Sambramad Ella Mooru dinagal ell gooshti gal bagge kannige kattidante vivarisi ananukooldida Sahitya smbram kayak ram tappisikondavari tuba anukul madikottiruttare Sri. Ranganna Badger. Danyavadagalu .

  4. ನಿರೂಪಣೆ ಕಣ್ಣೆದುರಿಗೆ ನೋಡಿದಂತೆ ಇದೆ. ಹೀಗೆ ಬರೆಯಲು ಸುಲಭವಲ್ಲ. ಕೊನೆಯ ಪ್ಯಾರಾ “ಮರೆಯಲಾರದ ವ್ಯಕ್ತಿಗಳು” ಉಲ್ಲೇಖಿಸಿದ್ದು ಅತ್ತ್ಯುತ್ತಮ .

  5. Shrinivas. Huddar says:

    ನಾಡಿಗೇರ್ ಸರ್
    ಈ ಬಾರಿ ನನಗೆ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಆಗಲಿಲ್ಲ.ನಿಮ್ಮ ಲೇಖನ ಓದಿ ಸಾಹಿತ್ಯ ಸಂಭ್ರಮದಲ್ಲಿ ಭಾಗವಸಿದಂತೆ ಭಾಸವಾಯಿತು. ನಿಮ್ಮೊಳಗಿರುವ ಹಾಸ್ಯ ಪ್ರವೃತ್ತಿ ಮೂಲಕ ಇನ್ನಷ್ಟು ಲೇಖನಗಳು ಬರಲಿ.ಸುಂದರ ಬರಹ ವಂದನೆಗಳು.

    • ಹಿರಿಯರಾದ ರಂಗಣ್ಣ,
      ನಮಸ್ಕಾರ.
      ನನ್ನ ಬಗ್ಗೆ ಕೂಡ ಬರೆದಿರುವಿರಿ.
      ಧನ್ಯವಾದಗಳು ನಿಮ್ಮ ಪ್ರೀತಿಗೆ.
      ಯಶಸ್ಸಿನ ನಿಜವಾದ ಕಾರಣರು ಗುರುಗಳಾದ ಗಿರಡ್ಡಿ ಗೋವಿಂದರಾಜರು,ಹಿರಿಯರಾದ ರಮಾಕಾಂತ ಜೋಶಿ,ಕಿರಿಯ ಗೆಳೆಯ, ಅಸಾಧಾರಣ ವ್ಯಕ್ತಿತ್ವದ ಸಮೀರ ಜೋಶಿ,ಮತ್ತು ಹಲವಾರು ಹಿರಿಯರು,ಸ್ನೇಹಿತರು, ಮತ್ತು ಬಂದು ವೀಕ್ಷಿಸಿ ಆನಂದಪಟ್ಟ ನಿಮ್ಮಂಥ ಕನ್ನಡದ ಆತ್ಮೀಯರು.
      ನಿಮ್ಮೊಳಗೆ ನಾನೂ ಒಬ್ಬ.

  6. Krishna,Joshi. says:

    Ranganna navare. Mooru dinada varadiyannu yathavattagi niroopisadañtide. Karyakramakke barde iddavatge santasa taruvantide. Tegedukonda shramakke dhanyava dagalu

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: