ದೀಪಾವಳಿ…

Share Button

 

Chandragouda Kulakrani1

ಬೆಳಕಿನ ಹಕ್ಕಿ 

ಬಣ್ಣ ಬಣ್ಣದ ಹಾಳೆಯ ಅಂಟಿಸಿ 

ಮಾಡಿ ಆಕಾಶ ಪುಟ್ಟಿ |

ಹಾರಿಸಲೆಂದು ತುಂಟರು ಕಲೆತರು

ಗೆಳೆಯರ ಗುಂಪು ಕಟ್ಟಿ |

ನಿಗಿ ನಿಗಿ ಬೆಂಕಿಯ ಕೆಂಡದ ಮೇಲೆ 

ಬೇವಿನ ತಪ್ಪಲ ಹಾಕಿ |

ಹೊಗೆಯನು ತುಂಬಿ ದೀಪ ಹಚ್ಚಿ 

ತೇಲಿ ಬಿಟ್ಟರು ನೂಕಿ |

                                                            .

ಕ್ಷಿಪಣಿಯಂತೆ ಚಂಗನೆ ನೆಗೆಯಿತು 

ಬೆಳ್ಳಮ್  ಬೆಳಕಿನ ನೌಕೆ |

ಮಕ್ಕಳ ಬಳಗ ಚಪ್ಪಾಳೆ  ತಟ್ಟಿ

ಚೀರಿ ಹಾಕಿತು ಕೇಕೆ |

ದೀಪಾವಳಿ ದಿನ ಆಗಸ ತುಂಬ 

ಬಣ್ಣದ ರೆಕ್ಕೆಯ ಹಕ್ಕಿ |

ನೋಡಿ ನೋಡಿ ಮಂಕಾಗಿ ಬಿಟ್ವು 

ಬನಲ್ಲಿರುವ ಚುಕ್ಕಿ |

 ‘

ಹಳ್ಳಿ ಹೈದರ ಸಹಜ ಜಾಣ್ಮೆಗೆ 

ಬೇರೆ ಸಾಕ್ಷಿ ಬೇಕೆ |

ಇಂಥಾ ಚಂದದ ದೇಸಿ ಆಟವ

ಮರೆತಿದ್ದೇವೆ ಏಕೆ  |

aakasha butti

 

 –  ಚಂದ್ರಗೌಡ  ಕುಲಕರ್ಣಿ,  ತಾಳಿಕೋಟಿ

2 Responses

  1. ತುಂಬಾ ಉತ್ತಮವಾದ ಕವಿತೆ. ಒಳ್ಳೆಯ ಅರ್ಥವನ್ನು ಕೊಟ್ಟಿದ್ದೀರಿ. ಅಭಿನಂದನೆಗಳು.

Leave a Reply to krishnaveni.m Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: