ನಿನ್ನನು ಗೆಲ್ಲಬಹುದು!

Share Button

Nagaraj Bhadra

 

ಈ ಕಥೆಯ ಮುಖ್ಯ ಪಾತ್ರ ರಾಮಾಚಾರಿ ಎಂಬ ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ಥಾನದಲ್ಲಿ  ಕೆಲಸ ಮಾಡುತ್ತಿದ್ದನು. ಆದರೆ ಅವನ ಸ್ನೇಹತರಿಗಿಂತಲೂ ಸ್ವಲ್ಪ ಕಡಿಮೆಯದ್ದಾಗಿತ್ತು.ಕಮಾಲಪುರದಲ್ಲಿ ಒಬ್ಬನೇ ಒಂದು ಕೊಠಡಿಯನ್ನು ಬಾಡಿಗಿಗೆ ತೆಗೆದುಕೊಂಡು ಮಾಡಿಕೊಂಡು ವಾಸವಾಗಿದ್ದನು.  ರಾಮಾಚಾರಿಯು ಸ್ವಭಾವದಲ್ಲಿ ದಲ್ಲಿ  ಸ್ವಲ್ಪ  ಒರಟು, ಆದರೆ ಮನಸ್ಸು ಮಾತ್ರ  ತುಂಬಾ ಮೃದುವಾಗಿತ್ತು. ಜೀವನದಲ್ಲಿ ಅವನು ಆಸೆ ಪಟ್ಟಿರೋದು ಯಾವುದು  ಈಡೇರಲಿಲ್ಲ ಎಂದು ಕೊರಗುತ್ತಿದ್ದನು.

ತನ್ನ ಸ್ನೇಹಿತರು ಅವನಿಗಿಂತ ಒಳ್ಳೆಯ ರೀತಿಯಲ್ಲಿ ಜೀವಿಸುತ್ತಿರುವದನ್ನು ಕಂಡು ಮನಸ್ಸಿನಲ್ಲಿ ಯೋಚಿಸಿ ನರಳುತ್ತಿದ್ದನು.ತನ್ನ ಜೀವನದಲ್ಲಿ ಅದೃಷ್ಟವೆ ಇಲ್ಲವೆಂದು ಮನಸ್ಸಿನಲ್ಲಿಯೇ ನೋವು ಪಡುತ್ತಿದ್ದನು,ನನ್ನ ಜೊತೆಗೆನೆ ಯಾಕೆ ಹೀಗೆ ಮಾಡುತ್ತಿಯಂಥ,ಪ್ರತಿ ದಿನವೂ ದೇವರ ಜೊತೆ ಜಗಳವಾಡುತ್ತಿದ್ದನು.  ಅವನು ಪ್ರತಿ ಕ್ಷಣವು ಅದನ್ನೇ ಯೋಚಿಸುತ್ತಾ ತನ್ನ ವರ್ತಮಾನ ಕಾಲದ ಜೀವನವದ ಸಂತೋಷವನ್ನು ಅನುಭವಿಸದೆ ನೋವಿನಲ್ಲಿ ಬದುಕುತ್ತಿದ್ದನು.

ರಾಮಾಚಾರಿಯು ತನ್ನ ನೋವು,ಅನಿಸಿಕೆಗಳನ್ನು, ಯೋಚನೆಗಳನ್ನು ಯಾರ ಹತ್ತಿರವು  ಹಂಚಿಕೊಳ್ಳುತ್ತಿರಲ್ಲಿಲ್ಲ. ಆದ್ದರಿಂದಲೇ ಅವನ ನೋವು,ಸಮಸ್ಯೆಗಳಿಗೆ ಇಲ್ಲಿವರೆಗೂ ಪರಿಹಾರ  ಸಿಕ್ಕಿರೋದಿಲ್ಲ. ಹೀಗೆ ಕೆಲವು ತಿಂಗಳಗಳು ಕಳೆದವು ,ಒಂದು ದಿನ ರಾಮಾಚಾರಿಯು ಜೀವನದಿಂದ  ತುಂಬಾ ಜಿಗುಪ್ಸೆ ಹೊಂದಿ ಹಾಳಾದ ಮನಸ್ಸಿನಲ್ಲಿ  ಆತ್ಮಹತ್ಯೆ ಮಾಡಿಕೊಳ್ಳಬೇಕಂತ  ಕೆಟ್ಟ ನಿರ್ಣಯವನ್ನು  ತೆಗೆದುಕೊಂಡನು.

ಬೆಳಗಿನ ಜಾವ ಬೇಗನೆಯೇ ಎದ್ದು ರೂಮಿನಿಂದ ಹೊರಟನು, ದೇವಸ್ಥಾನಕ್ಕೆ ಹೋಗಿ ದೇವರ ಹತ್ತಿರ  ತಂದೆ ತಾಯಿ ತಮ್ಮನನ್ನು ಕಾಪಾಡು ,ಹಾಗೆ ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿಕೊಂಡನು.ನಂತರ ಒಂದು ಚಲನಚಿತ್ರವನ್ನು ನೋಡಲು ಥೇಟರ್ ಗೆ ಹೋದನು. ಮಧ್ಯಾಹ್ನ ಚಲನಚಿತ್ರ ಬಿಟ್ಟಮೇಲೆ  ಒಳ್ಳೆಯ ಊಟವನ್ನು ಮಾಡಿಕೊಂಡು, ಗಾರ್ಡನ್ ಒಂದರಲ್ಲಿ ಒಬ್ಬನೇ ತನ್ನ  ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು   ಕಣ್ಣೀರು ಹಾಕುತ್ತಾ ಕುಳಿತ್ತುಕೊಂಡನು, ನೋಡ ನೋಡುತ್ತಲೇ ಸಾಯಂಕಾಲವಾ ಗಿ ಹೋಗಿತ್ತು.

ಅವನು ಚಲಿಸುತ್ತಿರುವ ರೈಲುಗಾಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕಂತ ಮೊದಲೆ ಯೋಚಿಸಿದ್ದ.ಆದ್ದರಿಂದ  ನಗರದ ರೈಲ್ವೆ ನಿಲ್ದಾಣದಕ್ಕೆ ಕಡೆಗೆ ನಡೆದುಕೊಂಡು ಹೊರಟನು .

ಸುಮಾರು 1 ಗಂಟೆಯ ಪ್ರಯಾಣದ ನಂತರ ನಿಲ್ದಾಣವನ್ನು ತಲುಪಿದನು.ಕಡೆ ಸಾರಿ ತಂದೆ,ತಾಯಿ,ಸ್ನೇಹಿತರ ಜೊತೆ ಮಾತಾಡಬೇಕೆಂದು ಕರೆಯನ್ನು ಮಾಡಿದನು. ಅವರ ಯೋಗಕ್ಷೇಮವನ್ನು ವಿಚಾರಿಸಿ, ತನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳಿದನು. ಅವರು ಯಾಕೆ ಹೀಗೆ ಮಾತಾಡುತ್ತಿರುವನೆಂದು ಗಾಬರಿಯಿಂದ ಏನಾಗಿದೆ? ಅಂತ ಕೇಳಿದರು. ಅದಕ್ಕೆ ರಾಮಾಚಾರಿಯು ಸ್ವಲ್ಪ ಮನಸ್ಸಿಗೆ ಬೇಜಾರಾಗಿದೆ ಅದಕ್ಕೆ ಹಾಗೆ ಮಾತಾಡಿದೆ,ನೀವು ಯೋಚಿಸಬೇಡಿ ಎಂದು ಹೇಳಿದನು.ಮನೆಯವರು ಏನು ಯೋಚನೆ ಮಾಡಬೇಡ, ಎಲ್ಲವೂ ಸರಿಯಾಗುತ್ತದೆಂದು ಹೇಳಿದರು. ರಾಮಾಚಾರಿಯು ಆಯಿತೆಂದು ಹೇಳಿ ಕರೆಯನ್ನು ಕಟ್ ಮಾಡಿದ್ದನು.

ಹಾಗೆ ರೈಲು ನಿಲ್ದಾಣದಲ್ಲಿನ ಕುರ್ಚಿ ಮೇಲೆ ಕುಳಿತುಕೊಂಡು ಮತ್ತೆ ತನ್ನ ಹಳೆಯ ನೆನಪುಗಳ ಅಂಗಳಕ್ಕೆ ಜಾರಿದನು.ರಾತ್ರಿ ಸುಮಾರು ೧೧ ಗಂಟೆಗೆ  ನಿಲ್ದಾಣದಿಂದ ೧೦೦ ಮೀಟರ್ ದೂರದಲ್ಲಿ  ನಿರ್ಜನವಾದ ಸ್ಥಳದ ಕಡೆಗೆ ಹೊರಟನು. ಆ ಸ್ಥಳವನ್ನು ತಲುಪಿದ ಮೇಲೆ ರೈಲು ಕಂಬಿಗಳ ಹತ್ತಿರವೇ ಕುಳಿತುಕೊಂಡನು.

ಸ್ವಲ್ಪ ಸಮಯದ ನಂತರ ದೂರದಲ್ಲಿ ಒಂದು ಪ್ರಕಾಶಮಾನವಾದ ಬೆಳಕಿನ ಜೊತೆಗೆ ರೈಲು ಚಲಿಸುವ ಶಬ್ದ ಕೇಳಿಸಿತು. ರೈಲು ಅವನ ಕಡೆಗೆ ವೇಗವಾಗಿ ಬರುತ್ತಿದಂತೆ ರಾಮಾಚಾರಿಯ ಮನಸ್ಸು ಒಂದು ಗಳಿಗೆಯಲ್ಲಿ ತಂದೆ,ತಾಯಿ ಸ್ನೇಹಿತರನ್ನು ,ಮುಂದಿನ ಸುಂದರವಾದ ಜೀವನವನ್ನು ಬಿಟ್ಟು ಯಾಕೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆಂದು ಹೇಳುತ್ತಾಯಿತ್ತು. ಇನೊಂದು ಗಳಿಗೆಯಲ್ಲಿ ನೋವುಗಳಿಂದ ಮುಕ್ತಿ ಹೊಂದಬೇಕೆಂದು ಹೇಳುತಾಯಿತ್ತು.ರಾಮಾಚಾರಿಯ ಮನಸ್ಸಿನಲ್ಲಿನ ಈ ದ್ವಂದ್ವದಿಂದ, ಧೈರ್ಯಸಾಲದೆ ರೈಲು ಕಂಬಿಗಳಿಂದ ದೂರ ಸರಿದನು.

ಕೆಲವೇ ನಿಮಿಷಗಳಲ್ಲಿ ರೈಲು ಹೊರಡಿತು.ರಾಮಾಚಾರಿಯು ಮತ್ತೆ ರೈಲು ಕಂಬಿಗಳಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಂಡನು. ಅವನ ಮನಸ್ಸಿನಲ್ಲಿ ನೂರಾರು ಯೋಚನೆಗಳನ್ನು ಹರಿದಾಡತೊಡಗಿದ್ದವು. ಅವನಿಗೆ ಏನೂ ಮಾಡಬೇಕೆಂದು ತಿಳಿಯಲಿಲ್ಲ.ಸುಮಾರು ೩೦ ನಿಮಿಷಗಳ  ನಂತರ ಮತ್ತೆ ಬೆಳಕಿನ ಜೊತೆಗೆ ರೈಲು ಚಲಿಸುವ ಶಬ್ದವು ಕೇಳಿಸಿತು. ರಾಮಾಚಾರಿಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾಗದೆ ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲೆಬೇಕೆಂದ ನಿರ್ಧಾರದಿಂದ ದೂರ ಸರಿದನು. ಸುಮಾರು ೧ ಗಂಟೆಯ ನಂತರ ಅವನು ಆತ್ಮಹತ್ಯೆ ಮಾಡಿಕೊಳ್ಳಲೆಬೇಕೆಂದು ದೃಢ ನಿರ್ಧಾರ ಮಾಡಿದನು.ಸುಮಾರು ರಾತ್ರಿ ೧೨ ಗಂಟೆಗೆ  ಮತ್ತೆ ರೈಲು ಬರುವ ಶಬ್ದ ಕೇಳಿಸಿತು.

ರಾಮಾಚಾರಿಯು ಗಟ್ಟಿ ಮನಸ್ಸಿನಿಂದ ರೈಲು ಕಂಬಿಗಳ ಕಡೆಗೆ ಹೆಜ್ಜೆ ಹಾಕಬೇಕೆನುವಾಗಲೆ, ಅವನಿಗೆ ಯಾರೋ ಕೂಗಿದ ಹಾಗಾಯಿತ್ತು.ಹಿಂದೆ ತಿರುಗಿ ನೋಡಿದ,ಸ್ವಲ್ಪ ದೂರದಲ್ಲಿ ಯಾರೋ ನಿಂತಿರುವಾಗೆ ಕಾಣಿಸಿತ್ತು. ತಕ್ಷಣವೇ ಅಲ್ಲಿಂದ ಇಷ್ಟು ರಾತ್ರಿಯಲ್ಲಿ ರೈಲು ಕಂಬಿಗಳ ಹತ್ತಿರ ಏನಮಾಡುತ್ತಿದ್ದಿಯಾ ಎಂದು ಯಾರೋ ಪ್ರಶ್ನೆಯನ್ನು ಕೇಳಿದರು.  ರಾಮಾಚಾರಿಯು ಗಾಬರಿಯಿಂದ ಏನಿಲ್ಲ,  ನೀವು ಯಾರು ಇಷ್ಟು ರಾತ್ರಿಯಲ್ಲಿ ನೀನು ಏನೂ ಮಾಡುತ್ತಿರುವೆ ಎಂದು ಕೇಳಿದನು. ಅದಕ್ಕೆ ಅವನು ನನ್ನ ಜಾಗದಲ್ಲಿಯೆ ಬಂದು ನಿಂತುಕೊಂಡು ನನಗೆನೆ ಯಾರು ನೀನಂತ ಕೇಳುತ್ತಿಯಲ್ಲ ಅಂತ ಗದರಿಸಿದನು.

ರಾಮಾಚಾರಿ: ನಿನ್ನದು ಈ ಜಾಗ ಹೇಗೆ ?, ಇದು ರೈಲ್ವೆ ಇಲಾಖೆಯವರದಲ್ಲ.
ಅವನು: ನಾನು ಈ ಜಾಗದಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿದಿನಿ,ನನ್ನ ಆತ್ಮ ಇನ್ನೂ ಈ ಶರೀರದಿಂದ ಮುಕ್ತಿಗೊಂಡಿಲ್ಲ ಅದಕ್ಕೆ ಇಲ್ಲಿಯೇ ವಾಸವಾಗಿದ್ದಿನಿ.
ರಾಮಾಚಾರಿಯ: ತಮಾಷೆ ಮಾಡಬೇಡ ನೀನು
ಅವನು : ಸಂಶಯವಿದರೆ ಹತ್ತಿರ ಬಂದು ನನ್ನ ಸ್ಪರ್ಶಿಸಿ ಪರೀಕ್ಷಿಸು
ರಾಮಾಚಾರಿ : ಗಾಬರಿಯಿಂದ ನಡುಗುತ್ತಾ ಅವನ ಹತ್ತಿರಕ್ಕೆ ಹೋಗಿ ಕೈಯಿಂದ ಅವನನ್ನು ಮುಟ್ಟಿದ ಆದರೆ ರಾಮಚಾರಿಗೆ ಯಾವ ಸ್ಪರ್ಶದ ಅನುಭವವಾಗಲಿಲ್ಲ.ಭಯದಿಂದ ಹಿಂದೆ ಸರಿದನು.
ಭೂತನಾಥ: ಭಯ ಪಡಬೇಡಾ,ನಾನು ನಿನಗೆ ಏನೂ ಹಾನಿಮಾಡೊದಿಲ್ಲ. ನಾನು ಈ ಸ್ಥಳದಲ್ಲಿಯೇ ಒಂದು  ವರ್ಷದ ಹಿಂದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ರೈಲು ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದಿನಿ. ನನಗೆ ಸಂಶಯ ಬರುತ್ತಿದೆ ನೀನು ಅದಕ್ಕೆ ಬಂದಿರುವೆ ಎಂದು?
ರಾಮಾಚಾರಿ: ಹೌದು ನೀನು ಹೇಳಿದು ನಿಜ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದೀನಿ. ನಾನು ಸಿನಿಮಾಗಳಲ್ಲಿ ನೋಡಿದೆ ಭೂತ,ದೆವ್ವಗಳು ಬಿಳಿ ಬಟ್ಟೆಗಳಲ್ಲಿ,ವಿಕಾರವಾಗಿರುತ್ತವೆಂದು.
ಭೂತನಾಥ:  ಮನುಷ್ಯನು ಸತ್ತಮೇಲೆ, ಅವನ  ಆತ್ಮವು ಶರೀರದಿಂದ  ಮುಕ್ತಿಹೊಂದುತ್ತದೆ. ಆದರೆ ಕೆಲವು ಮನುಷ್ಯರರ ತುಂಬಾ ಮುಖ್ಯವಾದ ಆಸೆ ಹಾಗೆ ಉಳಿದಿದ್ದರೆ ಅವರ ಆತ್ಮಗಳು ಆ ಶರೀರದಿಂದ ಮುಕ್ತಿಯನ್ನು ಹೊಂದದ್ದೆ,ಹಾಗೆ ತೀರುಗಾಡುತ್ತಾ ಇರುತ್ತವೆ. ಆತ್ಮಗಳಿಗೆ ಯಾವದೇ ರೀತಿಯ ಆಕಾರವಿರುವುದಿಲ್ಲ. ಅವುಗಳು ಯಾವ ಪ್ರಾಣಿಯ ದೇಹವನ್ನು ಸೇರಿಕೊಳ್ಳುತ್ತವೆ ಆ ರೀತಿಯ ಆಕಾರವನ್ನು ಪಡೆದುಕೊಳ್ಳುತ್ತವೆ.ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಬಂದೆ?

depressed

ರಾಮಾಚಾರಿ : ನನ್ನ ಜೀವನದಲ್ಲಿ ಅದೃಷ್ಟವೆವಿಲ್ಲ. ಕಾಲೇಜಿನಲ್ಲಿ ನನ್ನ ಸ್ನೇಹಿತರು ಓದಿನಲ್ಲಿ  ನನಗಿಂತ ಕಡಿಮೆಯಿದ್ದಿದವರು ಇವತ್ತು ನನ್ನಗಿಂತ ಒಳ್ಳೆಯ ಉದೋಗ್ಯದಲ್ಲಿರಿದ್ದಾರೆ ಮತ್ತು ತುಂಬಾ ಸುಖಕರ ಜೀವನವನ್ನು ನಡೆಸುತ್ತಿದ್ದಾರೆ.ನಾನು ತುಂಬಾ ಪ್ರಯತ್ನ ಪಟ್ಟಿದ್ದಿನಿ .ಆದರೆ ಅವರಗಿಂದ ಅದೃಷ್ಟ ನನಗಿಲ್ಲ.
ಭೂತನಾಥ: ನೀನು ಮೊದಲು ನಿನ್ನ ಜೀವನವನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಿಕೊಳ್ಳುವದನ್ನು ಬಿಡು.ದೇವರು ಯಾರ  ಜೀವನದಲ್ಲಿ ಏನ್ನನೂ  ನೀಡಬೇಕೆಂದು ಮೊದಲೆ ಯೋಚಿಸಿರುತ್ತಾನೆ.ಅದ್ದರಂತಲೆ ನಮ್ಮ ಜೀವನಗಳು ನಡೆಯುತ್ತಿರುತ್ತವೆ.ಈ ಭೂಮಿಮೇಲೆ ಪ್ರತಿಯೊಬ್ಬರ ಜೀವನವು ಬೇರೆ ಬೇರೆ ರೀತಿಯಲ್ಲಿ ಸಾಗುತ್ತವೆ.ನಿನಗೆ ಹೋಲಿಕೆ ಮಾಡಬೇಕೆಂದು ಅನಿಸಿದರೆ  ನಿನಗಿಂತ ಕಡಿಮೆಯಿರುವರ ಜೊತೆಗೆ ಮಾಡಿಕೊಳ್ಳು. ಅವಾಗ ನಿನಗೆ ಅರಿವಾಗುತ್ತದೆ ನೀನು ಎಷ್ಟು ಒಳ್ಳೆಯ ಸ್ಥಿತಿಯಲ್ಲಿವಿರುವೆ ಎಂದು.ಜೀವನದಲ್ಲಿ ಸಂತೋಷವಾಗಿ  ಬದುಕಬೇಕೆಂದರೆ ಹೋಲಿಕೆ ಮಾಡಿಕೊಳ್ಳುವದ್ದನು ಬಿಡಬೇಕು.
ರಾಮಾಚಾರಿ: ಹೌದಾ ಸರಿ. ನನಗೆ  ಪ್ರೀತಿಯಲ್ಲಿಯು ಮೋಸವಾಗಿದೆ.ನಾನು ತುಂಬಾ ನಂಬಿಕೆಯಿಟ್ಟಿದ್ದವರೆ ನನಗೆ ಮೋಸ ಮಾಡಿದ್ದಾರೆ  ,ಮನಸ್ಸಿಗೆ ತುಂಬಾ ನೋವಾಗಿದೆ. ಪ್ರತಿ ಕ್ಷಣವು ಅವಳದೆ ನೆನಪು, ಈ ನೆನಪು  ನನ್ನನ್ನು ಬದುಕಲು ಬಿಡದೇ ಸಾಯಲು ಬಿಡದೇ ಪ್ರತಿ ಕ್ಷಣವು  ಕೊಲುತ್ತಿದೆ, ಅವಳು ನನಗೆ ಯಾಕೆ ಮೋಸ ಮಾಡಿದಾಳೆಂದು ನನಗೆ ಇಲ್ಲಿವರೆಗೂ ಗೊತ್ತಾಗಿಲ್ಲ. ನನ್ನಿಂದ ಏನು ತಪ್ಪಾಗಿದೆ ಎಂದು ಗೊತ್ತಾಗಿಲ್ಲ.
ಭೂತನಾಥ:  ಸಂಬಂಧಗಳು ನಂಬಿಕೆ,ವಿಶ್ವಾಸದಿಂದಲೇ ಗಾಢವಾಗಿ ಬೆಳೆಯುತ್ತವೆ ಹಾಗೂ ಅದರ ಮೇಲೆಯೇ  ನಿಂತಿರುತ್ತವೆ.ನಿಜವಾದ ಪ್ರೀತಿಯೆಂದರೆ ಎರಡು  ಮನಸ್ಸುಗಳ ಬೆಸೆಯುವ ಒಂದು ಗಾಢವಾದ ಸಂಬಂಧ .ದೇಹದ ಮತ್ತು ಹಣದ  ಆರ್ಕಷಣೆಯಿಂದ ಹುಟ್ಟಿದ ಸಂಬಂಧಗಳು ತುಂಬಾ ಬೇಗನೆ ಕೊನೆಗಾಣುತ್ತವೆ.ಯಾಕೆಂದರೆ ಇಂತಹ ಸಂಬಂಧಗಳು ಆರ್ಕಷಣೆಯ ಮೇಲೆಯೇ ನಿಂತಿರುತ್ತವೆ.ಆರ್ಕಷಣೆಯು  ಕಡಿಮೆಯಾದಂತೆಯೆ ಇವುಗಳ ಮೌಲ್ಯವು ಕಡಿಮೆಯಾಗುತ್ತದೆ.
ನೀನು ಏನಾದ್ದಾರು ಮೋಸ ಮಾಡಿದ್ದಿಯಾ?,ಇಲ್ಲತಾನೆ
ಇನೊಬ್ಬರು ಮಾಡಿದ ಮೋಸದ ಬಗ್ಗೆ ಯೋಚಿಸಿ ನೀನೇಕೆ ನೋವು ಪಡುತ್ತಿದ್ದಿಯಾ. ಯಾವುದನ್ನು ನಿನ್ನ ಕೈಯಿಂದ ಸರಿಪಡಿಸಲು ಸಾಧ್ಯವಿಲ್ಲವೊ,ಅದರ ಬಗ್ಗೆ ಯೋಚಿಸಿ ಯೋಚಿಸಿ ಯಾಕೆ ನರಳುತ್ತಿರುವೆ.
ಎಂತಹ ವಿಪರ್ಯಾಸ ನೋಡು ನಾವುಗಳು ಪರೀಕ್ಷೆ ಬರೆಯುವಾಗ ಓದಿರೊದು ಯಾವುದು ನೆನಪಿಗೆ ಬರೋದಿಲ್ಲವೆಂದು ಗೋಳಾಡುತಿವಿ.ಇಂದು ನೆನಪಿನಿಂದ ಹೋಗುತ್ತಿಲ್ಲವೆಂದು ನರಳಾಡುತ್ತಿವೆ.ಇದೇ ಆ ದೇವರ ಆಡುವ  ಆಟ ಅದನ್ನು ಬಲವರುಯಾರು.

ನೀನು ಚಿಕ್ಕವನಿಂದಾಗಿನ,ಕಾಲೇಜಿನಲ್ಲಿನ ಸಂಗತಿಗಳು ನೆನಪಿನಲ್ಲಿಯಿದ್ದಾವೆನು ನಿನಗೆ.ಏನೋ ಕೆಲವಂದು ಮಾತ್ರ ನಿನಪಿನಲ್ಲಿಯಿರುತ್ತವೆ, ಅವುಗಳು ಕೂಡ ತುಂಬಾ ನಿಖರವಾಗಿರುವುದಿಲ್ಲ.ಹಾಗೆಯೇ ಈ ನೆನಪುಗಳು ಕೂಡ  ಕಾಲ ಕಳೆದಾಗೆ ಮಾಯಾಗುತ್ತವೆ.ನೀನು ಮನಸ್ಸನಲ್ಲಿ ಜೀವನದ ಭೂತಕಾಲದಲ್ಲಿ ನಡೆದಹೋದ್ದ ಕೆಟ್ಟ ಸಂಗತಿಗಳನ್ನು ಯೋಚಿಸುವುದ್ದನು ಬಿಟ್ಟು, ಅದ್ದರಿಂದ ಕಲಿತ ಪಾಠವನ್ನು ನೆನಪಿನಲ್ಲಿ ಇಟ್ಟಿಕೊಂಡು, ಭವಿಷ್ಯದ ಕಾಲದ ಬಗ್ಗೆ ತುಂಬಾ  ಯೋಚಿಸದೆ ,ವರ್ತಮಾನ ಕಾಲದಲ್ಲಿ ಬದುಕು.ನಿನ್ನ ನೋವು ತಾನೇ ಮಾಯವಾಗುತ್ತದೆ.
ರಾಮಾಚಾರಿ : ಸರಿ,ಆ ರೀತಿಯಲ್ಲಿ ಕೆಲವು ದಿನಗಳು ಬದುಕಿ ಪರೀಕ್ಷಿಸುತ್ತೀನಿ.ಆದರೆ ನನ್ನದು ಇನ್ನೊಂದು ಪ್ರಶ್ನೆಯಿದೆ.
ಭೂತನಾಥ : ಕೇಳು ಇವತ್ತು ನಿನ್ನ ಎಲ್ಲಾ ಗೊಂದಲಗಳನ್ನು ಬಗೆಹರಿಸುವೆ.

ರಾಮಾಚಾರಿ : ಯಾರೇ ನನಗೆ ಸಹಾಯವನ್ನು ಕೇಳಿದರೆ  ನನ್ನಿಂದಾಗುವುದನ್ನು  ಮಾಡುತ್ತೇನೆ. ಆದರೆ ನನಗೆ ಸಹಾಯದ ಅವಶ್ಯಕತೆ ಇದ್ದಾಗ ಯಾರು ಮಾಡೋದಿಲ್ಲ ಯಾಕೆ?.
ಭೂತನಾಥ: ಸಹಾಯವನ್ನು ಕೇಳಿಕೊಂಡು ಬಂದವರಿಗೆ ನನ್ನಿಂದಾಗುವ ಸಹಾಯ ಮಾಡುತಿನಿ ಎನ್ನಂದಲ್ಲ ತುಂಬಾ ಒಳ್ಳೆಯ ಗುಣ.ಅದನ್ನು ಯಾವತ್ತು ನಿಲ್ಲಿಸಬೇಡ.ಆದರೆ ಅವರಿಂದಲ್ಲು ಅದೇ ರೀತಿಯ ಸಹಾಯದ  ಪ್ರವೃತ್ತಿಯನ್ನು  ನೀರಿಕ್ಷಿಸೋದು ತಪ್ಪು.
ನಿರೀಕ್ಷೆ ಎನ್ನೊಂದು ಮನುಷ್ಯನ ಜೀವನದಲ್ಲಿನ ಸುಮಾರು ೭೦% ನೋವುಗಳಿಗೆ ಅದೇ ಕಾರಣ.
ಜೀವನದಲ್ಲಿ ಸಂತೋಷವಾಗಿ ಬಾಳಬೇಕೆಂದರೆ ನೀರಿಕ್ಷೆಯನ್ನೊಂದನು ತ್ಯಜಿಸಬೇಕು.
ರಾಮಾಚಾರಿ : ಹಾ! ನಾನು ಅವರಿಂದ ನಿರೀಕ್ಷಿಸಿದೆ ನನ್ನ ನೋವಿಗೆ ಕಾರಣವಾಯಿತು. ನಾನು ನೋಡಲು ನನ್ನ ಸ್ನೇಹಿತರಿಗಿಂತ ಚೆನ್ನಾಗಿಲ್ಲ ಯಾಕೆ?.ನಾನು ಏನು ತಪ್ಪು ಮಾಡಿದೀನಿ? ಅವರನ್ನು ನೋಡಿದಾಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಭೂತನಾಥ: ದೇವರು ಈ ಭೂಮಿಯಮೇಲೆ ಪ್ರತಿಯೊಬ್ಬರನ್ನು ವಿಭಿನ್ನವಾದ ರೀತಿಯಲ್ಲಿ ಹುಟ್ಟಿಸಿದ್ದಾನೆ.
ಈ ನಿನ್ನ ದೇಹವು ಭೂಮಿಮೇಲೆ ಕೋಟ್ಯಾಂತರ ಮನುಷ್ಯರಗಳ ಮಧ್ಯೆ ಇವನೇ ರಾಮಾಚಾರಿ ಎಂದು ಗುರುತಿಸಲು ದೇವರ ನಿರ್ಮಿಸಿದ ಮೂಳೆ,ಮಾಂಸದ ಹೊದಿಕೆ ಅಷ್ಟೇ.
ಈ ದೇಹವು ಶಾಶ್ವತವಾದುದಲ್ಲ,ಇದರ ಮೇಲೆ ವ್ಯಾಮೋಹವನ್ನು ಇಟ್ಟು ಕೊಳ್ಳಬೇಡ,.ಇದ್ದರ ಬಗ್ಗೆ ತುಂಬಾ ತೆಲೆಕೆಡಿಸಿಕೊಳ್ಳಬೇಡ.ಇದ್ದು ಒಂದು ದಿನ ನಶಿಸಿ ಹೋಗುವದು. ನಿನ್ನ  ಆತ್ಮವು ಕೆಲವು ವರ್ಷಗಳಿಗೊಸ್ಕರ ಈ ದೇಹವನ್ನು ಬಾಡಿಗೆಗೆ ಪಡೆದಿದೆ. ಜೀವನದ ಅಮೂಲ್ಯವಾದ ಸಮಯವನ್ನು  ಈ ದೇಹದ ಸೌಂದರ್ಯದ ಬಗ್ಗೆ  ಯೋಚಿಸುವದರಲ್ಲಿ ಕಳೆಯಬೇಡ.
ರಾಮಾಚಾರಿ : ಹಾ! ಸರಿ ಈ ಸಂಬಂಧಗಳು,ನಾನು,ನನ್ನದು ಇವುಗಳ ಬಗ್ಗೆ ಹೇಳು,ಮನುಷ್ಯನು ತನ್ನ  ಜೀವನವನ್ನು ಇದರಲ್ಲಿಯೆ ಕಳೆದು ಬಿಡುತ್ತಾನೆ.
ಭೂತನಾಥ: ಒಂದಿಷ್ಟು ಸಂಬಂಧಗಳು ಮನುಷ್ಯನ ಹುಟ್ಟಿನೊಂದಿಗೆ ಹುಟ್ಟಿಕೊಳ್ಳುತ್ತವೆ.ಇನೊಂದಿಷ್ಟು ಮನುಷ್ಯನು ಜೀವನವನ್ನು ಸಾಗಿಸುತ್ತಾ  ಬೆಳೆಸುತ್ತಾನೆ. ಮನುಷ್ಯನು ಸಂಘಜೀವಿ ಒಂಟಿಯಾಗಿ ಬದುಕಲಾರನು ಹಾಗಾಗಿಯೇ ಈ ಸಂಬಂಧಗಳನ್ನು  ಬೆಳೆಸುತ್ತಾನೆ. ಆದರೆ ಯಾವುದು

ಶಾಶ್ವತವಾದುದಲ್ಲ. ಅವುಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಹಾಗೂ ನಿಭಾಯಿಸುವ ಪ್ರಯತ್ನದಲ್ಲಿ  ಮನುಷ್ಯನು ತನ್ನ ಇಡೀ ಜೀವನವನ್ನು ಕಳೆಯುತ್ತಾನೆ.
ನಾನು ಮತ್ತು ನನ್ನದು ಎನ್ನುವುದು ಈ ಭೂಮಿ ಮೇಲೆ ಏನಿಲ್ಲ.ಮನುಷ್ಯನು ತನ್ನ ಸ್ವಾರ್ಥಕಾಗಿ ಇವುಗಳನ್ನು ಹುಟ್ಟಿಹಾಕಿದ್ದಾನೆ.ನಿನ್ನ ದೇಹದ ಜೊತೆಯಲ್ಲಿ ಈ ನಾನು,ನನ್ನದು ಎನ್ನುವುದು

ಹುಟ್ಟಿಕೊಂಡು , ಇದರ ಜೊತೆಯಲ್ಲಿಯೆ ಕೊನೆಗೊಳ್ಳುತ್ತವೆ.ಯಾವುದು ನಿನ್ನದಂತ ಒಂದು  ಸಾರಿ ಯೋಚಿಸು?.

ನಿನ್ನ ಹೆಂಡತಿ, ಮಕ್ಕಳು, ಮನೆ,ಹೊಲ,ಕಾರು,ಬೈಕು,ಹಣ,ಆಸ್ತಿ  ಯಾವದು ನಿನ್ನದಲ್ಲ,ಅವುಗಳು ಮನುಷ್ಯನು ಬದುಕಲು ಮಾಡಿಕೊಂಡ ಏರ್ಪಾಡುಗಳಷ್ಷೆ.ನಿನ್ನದು ಎನ್ನುವುದು ಇರುವುದು ನಿನ್ನ ಆತ್ಮ ಮಾತ್ರ,ಅದನ್ನು ದುರಾಸೆ, ವಂಚನೆ, ಕೋಪ, ವ್ಯಾಮೋಹ,ನಾನು,ನನ್ನದು ಮುಂತಾದವುಗಳಿಂದ  ದೂರವಿಡು.ನಿನ್ನ ಆತ್ಮವನ್ನು ಶುದ್ಡವಾಗಿಟ್ಟುಕೊಂಡು ಬಾಳು.ಜೀವನದಲ್ಲಿ ನೋವು ಎನ್ನುವುದು ನಿನ್ನ ಹತ್ತಿರಕ್ಕೂ ಬರುವುದಿಲ್ಲ.
ರಾಮಾಚಾರಿ : ಹೀಗು ಬದುಕಬಹುವುದೆ! ತುಂಬಾ ಕಷ್ಟವೆನಿಸುತ್ತದೆ.
ಭೂತನಾಥ: ಹಾ! ಅವುಗಳನ್ನು ಗೆಲ್ಲುವುದು ತುಂಬಾ ಕಷ್ಟ ,ಆದರೆ ಅವುಗಳನ್ನು ಹಿಡಿತದಲ್ಲಿಟ್ಟು ಕೊಂಡರೂ ಸಾಕು ಜೀವನದಲ್ಲಿ ತುಂಬಾ ಸಂತೋಷದಿಂದ ಬದುಕಬಹುವುದು. ನಾನು ಅವುಗಳು ನೀಡಿದ್ದ ನೋವುಗಳನ್ನು ತಾಳಲಾರದೆ, ಜೀವನದಿಂದ ಮುಕ್ತಿ ಹೊಂದಲು ಆತ್ಮಹತ್ಯೆಯನ್ನು ಮಾಡಿಕೊಂಡೆ.
ಆದರೂ ನಾನು ಸಾವಿನ ನಂತರವು ಅವುಗಳನ್ನು ಗೆಲ್ಲಲಾಗಲಿಲ್ಲ.
ಉದಾಹರಣೆಗೆ :- ನೀನು ಮೊದಲು ನನಗೆ ಯಾರೆಂದು ಕೇಳಿದಳಲ್ಲಾ,ನಾನು ಏನು  ಉತ್ತರ ನೀಡಿದೆಂದು ಒಂದು ಸಾರಿ ಯೋಚಿಸಿ?.ನನ್ನ ಜಾಗದಲ್ಲಿಯೇ ಬಂದು ನಿಂತುಕೊಂಡು ನನಗೆ ಯಾರೆಂದು ಕೇಳುತ್ತಿಯಾ ಎಂದು ಉತ್ತರಿಸಿದೆ  ನೆನಪಿಗೆ ಬಂತಾ.
ರಾಮಾಚಾರಿ : ಹಾ! ನೆನಪು ಬಂತು.
ಭೂತನಾಥ: ನೋಡು ನಾನು ಸತ್ತ ಮೇಲು ಅವುಗಳನ್ನು ನನ್ನಿಂದ ಗೆಲ್ಲಲಾಗಲಿಲ್ಲ.ನೀನು ಗೆಲ್ಲಲು ಪ್ರಯತ್ನ ಮಾಡು , ನನ್ನಿಂದಾಗಲಿಲ್ಲ ಎಂದರೆ ನಿನ್ನಿಂದಲೂ ಆಗೋದಿಲ್ಲ ಅಂತೆನಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನು ನಿನ್ನ  ನಿರ್ಧಾರವನ್ನು ಮನಸ್ಸಿನಿಂದ ತೆಗೆದು ಹಾಕಿದಿಯಾ ತಾನೇ.
ರಾಮಾಚಾರಿ : ಹಾ! ನೀನು  ಮನುಷ್ಯನ ಬದುಕಿನ ಬಗ್ಗೆ  ಹೇಳಿದೆಲ್ಲಾ ಕೇಳಿದ ಮೇಲೆಯೂ  ಆತ್ಮಹತ್ಯೆ ಮಾಡಿಕೊಂಡರೆ ನನ್ನಂಥ ಮೂರ್ಖರಾರಿಲ್ಲ.ಕೆಲವು ವರ್ಷಗಳಲ್ಲಿ ತಾನಾಗಿಯೇ ನಶಿಸಿ ಹೋಗುವ ,ಶಾಶ್ವತವಲ್ಲದ ಈ ದೇಹವನ್ನು ನಾನೇಕೆ  ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ  ಕೊನೆಗೊಳಿಸಲಿ. ಬದುಕುತ್ತಾ ನನ್ನಲ್ಲಿನ ಆಸೆ,ನಿರೀಕ್ಷೆ,  ವ್ಯಾಮೋಹ,ಕೋಪ, ಹೋಲಿಕೆ, ದುರಾಸೆ, ನಾನು,ನನ್ನದು ಇವುಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ.ಜೀವನದಲ್ಲಿ ಬದುಕಿ  ಏನಾದರೂ ಸಾಧಿಸುತ್ತೇನೆ. ನನಗೆ ಜೀವನದಲ್ಲಿನ ಸತ್ಯ,ನಿತ್ಯದ ಬಗ್ಗೆ  ತಿಳಿ ಹೇಳಿ  ಸರಿಯಾದ ರೀತಿಯಲ್ಲಿ ಬದುಕಲು  ದಾರಿ ತೋರಿಸಿದಕೆ  ಧನ್ಯವಾದಗಳು ಭೂತನಾಥ.ನಾನು ಬರುತ್ತೀನಿ.

success
ಭೂತನಾಥ:  ನೀನು ಜೀವನದ ಬಗ್ಗೆ ಕೊಂಡಿರುವುದನ್ನು ಈ ಭೂಮಿಮೇಲೆ ಬದುಕಿನ ಬಗ್ಗೆ ನಿನ್ನ ಹಾಗೆ  ಗೊಂದಲದಲ್ಲಿರುವರಿಗೆ  ಸಾಧ್ಯವಾದಷ್ಟು ತಿಳಿಹೇಳು .ಸರಿ ಹೋಗು ಶುಭವಾಗಲಿ.

 

 

– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

 

 

2 Responses

  1. Shankari Sharma says:

    ಲೇಖನ ಚೆನ್ನಾಗಿದೆ…ಅಮಿತಾಬ್ ಬಚ್ಚನ್ ಅವರೇ (ಭೂತನಾಥ್) ರೈಲ್ವೆ ಹಳಿಯಲ್ಲಿ ಬಂದು ನಿಂತಂತೆನಿಸಿತು. 🙂

    • Nagaraj .Bhadra says:

      ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿರುವದಕ್ಕೆ ವಂದನೆಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: