ರತ್ನದ ಹರಳು

Spread the love
Share Button

Chandragouda Kulakrani1                 ಸವಿನುಡಿ ಕನ್ನಡ ಬೆಡಗಿನ ಸಾಗರ

ಪದಗಳ ರತ್ನದ ಹರಳು  !

ಮನಸು ಮನಸನು ಬೆಸೆದು ಕಟ್ಟಿದ

ತಾಯಿಯ ಹೊಕ್ಕಳ.  ಕರಳು!

 .

ಜೀವಜೀವದ ಲಯದಲಿ ಹಬ್ಬಿದ

ಅಮೃತ ಬಳ್ಳಿಯ ಅರಳು  !

ಭಾವದ ಬಿತ್ತರ ಛೇದಿಸಿ ಸಾಗುವ

ಹರಿತ ಅಂಚಿನ ಸರಳು  !

 ,

ಸ್ವರಗಳ ಒಡಲಲಿ ಹರಿಯುವ ತೇಜದ

ಬೆಳ್ಳಂಬೆಳಕಿನ ನೆರಳು  !

ಉಸಿರು ಉಸಿರಲಿ ಕಲರವ ಸೂಸುವ

ಸಾರ್ಥಕ ಸುಮಧುರ ಕೊರಳು   !

 .

ಗಣಕ ಮೊಬೈಲಲಿ   ಮೆರೆದಾಡುವುದು

ಆಡಿಸುತಿದ್ದರೆ ಬೆರಳು  !

ಹೊಸತನ ತಂದಿದೆ   ಕನ್ನಡ.  ಮಾತಿಗೆ

ತಂತ್ರಜ್ಞಾನದ ಹೊರಳು   !

 

kannada keyboard

 

 

 

 – ಚಂದ್ರಗೌಡ ಕುಲಕರ್ಣಿ , ಕಡದಳ್ಳಿ

 

 

1 Response

  1. Shankari Sharma says:

    ಕವಿತೆ ತುಂಬಾ ಸೊಗಸಾಗಿದೆ….ಧನ್ಯವಾದಗಳು….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: