Monthly Archive: August 2017

6

ಇಡ್ಲಿಯ ದಶಾವತಾರ…

Share Button

  ನಾಳೆಯ ತಿಂಡಿಗೆಂದು ಇಡ್ಲಿ ಹಿಟ್ಟು ರುಬ್ಬುವಾಗ, ಇಡ್ಲಿ ತನ್ನ ದಶಾವತಾರದ ಕಥೆಯನ್ನು ಹೀಗೆ ಹಾಡಿತು:   ಓಲೆಯ ಗರಿಯಲಿ ಸುತ್ತಿಟ್ಟ ಹಲಸಿನ ಮೂಡೆಲಿ ಎರೆದಿಟ್ಟ ಬಾಳೆಯ ಕೊಟ್ಟೆಲಿ ಕಟ್ಟಿಟ್ಟ ಇಡ್ಲಿಯ ಸವಿಯಿರಿ ಕರುನಾಡಿನಲಿ ಕಾಂಚೀಪುರದ ಹಸಿರು ಇಡ್ಲಿ ಹೈದರಬಾದಿನ ಪುಡಿ ಇಡ್ಲಿ ಮೈಸೂರಿನಲಿ ಮಲ್ಲಿಗೆ ಇಡ್ಲಿ...

0

ಗರಡಿ ಮನೆಯಿಂದ ಮೋರ್ಚರಿ ವರೆಗೆ ..

Share Button

ಸುಮಾರು ಹತ್ತು ಹದಿನಾಲ್ಕು ವರುಷದ ಹಿಂದಿನ ಕಥೆ .. ಆತನ ಹೆಸರು ಶಿಹಾಬ್. ಮೂಲತಃ ಸುಳ್ಯ ದವನು. ಊರಿನಲ್ಲೇ ಪದವಿ ಮುಗಿಸಿ ಬೆಂಗಳೂರಿಗೆ ಬಂದು NIIT ಯಲ್ಲಿ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುತ್ತಿದ್ದ. ನನಗೆ ಈತ ಪರಿಚಯವಾದದ್ದು ಒಂದು ಗರಡಿ ಮನೆಯಲ್ಲಿ. ನಗರದಲ್ಲಿ ಒಂದು ಕೇರಳ ಜಮಾತ್ ಮಸೀದಿ...

1

ನಮ್ಮ ಕಡಲೂರಿನವಳು

Share Button

ಬೆಂದಕಾಳೂರಿನಲಿ ಬೆಚ್ಚಗಿರಲಿಲ್ಲವಳು ಬೇನೆಯ ಬದುಕಿನವಳು ನಮ್ಮ ಕಡಲೂರಿನವಳು ಬಿಸಿಲು ಎಂದೇನಲ್ಲ ಬಿರುಮಾತಿನಲ್ಲವಳು ಬಾಯಾರಿದ ಬೆಡಗಿ ನಮ್ಮ ಕಡಲೂರಿನವಳು ಬದುಕು ಕಟ್ಟಲೆಂದು ಬಂದಿದ್ದಳಿಲ್ಲಿಗವಳು ಬಾಣಲೆಬಿಸಿಗೆ ಬೆದರಿದಳು ನಮ್ಮ ಕಡಲೂರಿನವಳು ಬಾಗಿಲನು ತೆರೆಯುತ ಬಾಗುತ ಮುಗಿವವಳು ಭಾಗ್ಯವನರಸುವ ಹೆಣ್ಣು ನಮ್ಮ ಕಡಲೂರಿನವಳು ಬೇಗೆಗೆ ಬೆಚ್ಚೇಳುತ ಬಸವಳಿದಳವಳು ಭರವಸೆಗೆ ಸಾಕ್ಷಿ ಕಂಗಳು...

ಎಲ್ಲರ ಕಣ್ಣಾದ ಕನ್ನಡ- ನಮ್ಮ ನಲ್ಗನ್ನಡ

Share Button

  ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ. ಒಬ್ಬರನ್ನೊಬ್ಬರನ್ನು ಆಕರ್ಷಿಸುವಂತಹ ಚುಂಬಕ ಶಕ್ತಿ ಅದಕ್ಕಿದೆ.ಜೀವವು ದೇವರ ವರದಾನವಾದರೆ ಭಾಷೆಯು ತಾಯಿದೇವರ ವರದಾನ. ಮನುಷ್ಯ ಉಪಯೋಗಿಸುವ ಭಾಷೆ...

8

ಮಳೆ, ಇಳೆ, ಪ್ರಕೃತಿ

Share Button

‘ಧೋ’ ಎಂದು ಜಡಿಮಳೆ ಸುರಿದು ಭೂಮಿ ತಾಂಪಾಗಿರುವ ಈ ಕಾಲದಲ್ಲಿ, ವರ್ಷ ಧಾರೆಯಲ್ಲಿ ಮಿಂದು ಮೈ ಮನಸ್ಸು ಮಿದುವಾಗಿರುವ ಈ ಸುಂದರ ಪರಿಸರದಲ್ಲಿ, ಮಳೆ, ಇಳೆ, ಪ್ರಕೃತಿ .. ಹೀಗೊಂದು ಪುಟ್ಟ ಲಹರಿ. ಮಳೆಗೂ ಮನಸ್ಸಿಗೂ ಅವಿನಾ ಭಾವ ಸಂಬಂಧ. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಹದಿಹರಯದಲ್ಲಿ...

1

ಪ್ರವಹಿಸು ಭಾವನದಿ

Share Button

  ನನ್ನೊಳಗೆ ಸೆರೆಯಾಗಿ ಅವಿತಿರುವೆ ಏಕೆ ಹೊರಬಂದು ವಿಹರಿಸು ಸ್ವಚ್ಛಂದವಾಗಿ ಸ್ವತಂತ್ರನಲ್ಲವೆಂಬ ಭಯವೇಕೆ ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ ನನ್ನ ನಿನ್ನ ನಡುವೆ ಭೇದವೆನೆಣಿಸದಿರು ಕಡಿದು ಹೋದೀತು ಸ್ನೇಹದ ಕೊಂಡಿ ವಿಧಿವಿಲಾಸಕೆ ಸುಮ್ಮನೆ ಬಲಿಯಾಗದಿರು ತೋಡದಿರು ಕಂದಾಚಾರದ ಗುಂಡಿ ಲೋಕಮಾನ್ಯವಾಗುವ ಆಸೆಯಿಲ್ಲವೆ ನಿನಗೆ ಈಜಿ ದಡಸೇರು ಕೈ...

0

ಕೈ ಹಿಡಿದು ನಡೆಸು(ಪ್ರಾರ್ಥನೆ) 

Share Button

ಪರಂಜ್ಯೋತಿ ಪರಮಾತ್ಮ ನಡೆಸು ಕೈ ಹಿಡಿದು ಕಷ್ಟಗಳ ಮೆಟ್ಟಿನಿಲೆ ಧೈರ್ಯ ತುಂಬುವುದು II ಸದ್ಗುಣಗಳೇ ಬರಲಿ ಎಲ್ಲೆಡೆಯು ಹರಿದು ಸತ್ಕರ್ಮ ಸಂಪ್ರೀತಿ ವೈಮನಸು ಮುರಿದುII ನಾವೆಲ್ಲ ಬಂಧುಗಳು ಪ್ರೀತಿಯೇ ಬದುಕು ಕರುಣಾಳು ಈ ಪಥದಿ ನೀ ನೀಡು ಬೆಳಕುII . -ಶಂಕರಿ ಶರ್ಮ ಪುತ್ತೂರು. +4

4

ಜೈಸಲ್ಮೇರಿನಲ್ಲಿ ‘ರಾಜ’ ಭೋಜನ

Share Button

ಜೈಸಲ್ಮೇರ್ ನಗರವು ರಾಜಸ್ಥಾನ ರಾಜ್ಯದ  ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ  ಹಳದಿ ಬಣ್ಣದ ಕಲ್ಲಿನಿಂದ ಕಟ್ಟಲಾದ ಹವೇಲಿಗಳು ಹಾಗೂ  ಥಾರ್ ಮರುಭೂಮಿಯ ಮರಳುದಿಬ್ಬಗಳು ಮುಖ್ಯ ಪ್ರವಾಸಿ ಆಕರ್ಷಣೆ....

0

‘ಅಜ್ಞಾತ’- (ಹಿರಿತಲೆಯೊಂದರ ಅನುಭವ ಕಥನ)

Share Button

1969 ನೇ ಇಸ್ವಿ ಬಹುಶಃ ನವಂಬರ್,ಡಿಸೆಂಬರ್ ತಿಂಗಳಿರಬಹುದು.ಆಗ ನಾನು ಹಿಮಾಚಲ ಪ್ರದೇಶದ ಖನೇಟಿಯ ಹೈಸ್ಕೂಲೊಂದರಲ್ಲಿ ಹೆಡ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಜೆರೊಲ್ ಎಂಬ ದೊಡ್ಡ ಊರು ..ಅಲ್ಲಿಂದ 3000 ಅಡಿ ಕೆಳಗಿಳಿದರೆ ಖನೇಟಿ. ಅಲ್ಲಿದ್ದ ಎಂಟು – ಹತ್ತು ಜನ ‘ಹಾಟು ಶಿಖರದ’ ಚಾರಣಕ್ಕೆ ಹೋಗುವದೆಂದು...

5

ಮನೆವಾಳ್ತೆಯ ಮಹಿಳೆಗ್ಯಾಕೆ ಯಾವ ಪ್ರಶಸ್ತಿ ಇಲ್ಲ!?

Share Button

ನಾವು ಹುಟ್ಟಿ ಬೆಳೆದ ಮನೆ ಪರಿಸರದಲ್ಲಿ ನಮಗೆ ಬೇಕಾದಂತೆ ಹಾಯಾಗಿ ದಿನಗಳೆದು ಚಿಗರೆಯಂತೆ ಓಡಾಡುವ ಹುಡುಗಿಯರು ಮದುವೆಯ ನಂತರದ ಜೀವನದ ಬಗ್ಗೆ ಆಲೋಚನೆಯು ಮಾಡಲು ಹೋಗುವುದಿಲ್ಲ. ಇಲ್ಲಿ ಇದ್ದಂತಲ್ಲ ಅಲ್ಲಿ. ಏನಾದರು ಸ್ಪಲ್ಪ ಮನೆಕೆಲಸ ಕಲಿ ಎಂಬ ಅಮ್ಮಂದಿರ ಸಹಸ್ರ ನಾಮಾರ್ಚನೆಯನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು...

Follow

Get every new post on this blog delivered to your Inbox.

Join other followers: