Category: ಲಹರಿ

4

ಮಳೆಯೆಂಬ ಮಧುರ ಆಲಾಪ

Share Button

ಈ ದಾಹ,ಉರಿ ಧಗೆ,ರಣ ಬಿಸಿಲು ಇವುಗಳಿಂದ ಬಸವಳಿದು ದೇಹ ಮನಸು ಸೋತು ಬಸವಳಿದು ತೊಪ್ಪೆಯಾಗಿ ಬಿದ್ದಿರುವಾಗ, ನೆನಪುಗಳೆಲ್ಲಾ ಮರೆವಿಗೆ ಸಂದು ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮನಸಿಗೆ ಮಂಕು ಕವಿದಿರುವಾಗ, ಏಕ್ ದಂ ಅಬ್ಭಾ! ಒಮ್ಮಿಂದೊಮ್ಮೆಗೇ ಅದೆಂಥಾ ಶಬ್ದ. ಆಕಾಶ ಸೀಳಿ ಎರಡು ಹೋಳಾಗಿ ದೇವಲೋಕದ...

6

ಅಪ್ಪನೆಂಬ ಮೇರುಪರ್ವತ…

Share Button

ಮದುವೆಯಾಗಿ ಎರಡು ದಶಕಗಳು ಕಳೆದಿವೆ. ಈಗಲೂ ಸಹ ತವರಿನಿಂದ ವಾಪಾಸಾಗುವಾಗ ಅಪ್ಪನ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಅಪ್ಪನ ಕಣ್ಣಂಚು ಒದ್ದೆಯಾಗುತ್ತದೆ. ಕಾರಿನಲ್ಲಿ ಕುಳಿತು ಮೊಮ್ಮಕ್ಕಳು ಟಾಟಾ ಹೇಳುವಾಗ ಅಪ್ಪನ ಕಣ್ತುಂಬಾ ನೀರು ತುಂಬಿ ಮಂಜಾಗಿರುವ ದೃಷ್ಟಿಯಿಂದ ಕೈಯಾಡಿಸಿ ತಕ್ಷಣ ಬೇರೆ ಕಡೆ ಮುಖ ತಿರುಗಿಸುವಾಗ ಆ...

0

ಹಲಸು ಮತ್ತು ಕರಡಿ

Share Button

ಮತ್ತೆ ಬಂದಿದೆ ಹಲಸಿನ ಹಣ್ಣಿನ ಕಾಲ.ಮರೆಯಾದ ಹಳೆಯ ನೆನಪೊಂದು ಮೇಲೆದ್ದು ಬಂದಿದೆ. ಸುಮಾರು 77-78 ನೇ ಇಸವಿಯಲ್ಲಿರಬೇಕು ನಾವಾಗ ಕಾಡಿನಂಚಿನ ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದೆವು. ದೊಡ್ಡ ತೋಟ, ಕೂಗಳತೆಯ ದೂರದಲ್ಲೆಲ್ಲೂ ಇನ್ನೊಂದು ಮನೆ ಇಲ್ಲ. ರಾಜಾರೋಷವಾಗಿ ಮನೆಯ ತುಂಬೆಲ್ಲಾ ಓಡಾಡಿಕೊಂಡಿದ್ದ ಹಾವು ಚೇಳುಗಳು, ಆಗಾಗ ತನಿಖೆಗೆ ಬರುತ್ತಿದ್ದ...

1

ಬೇಸಾಯಗಾರ ಬೇಗ ಸಾಯ -ಭಾಗ 3

Share Button

ಕೃಷಿಯ ಬದುಕಿಗೆ ಹಳ್ಳಿಗರು ವಿದಾಯ ಕೋರಿದರೋ ಎಂಬ ಚಿಂತೆ ಮನಸ್ಸಿನಲ್ಲಿದೆ. ಮೊದಲು ನಿಲ್ಲಿಸಿದಲ್ಲಿಂದ ಪ್ರಾರಂಭಿಸುತ್ತೇನೆ. ಆ ಕೊಕ್ಕರೆಗಳ ಸಾಲು .. ಆ ಭತ್ತದ ಸಸಿ ನೆಡುವ ಮಹಿಳೆಯರ ವೇಷ ಗೊತ್ತಲ್ಲಾ … ಕೈಯ್ಯಲ್ಲೊಂದು ಕೊರಂಬೆ (ತುಳು ) .. (ತಾಳೆ ಮರದ ಎಲೆಯಿಂದ ಮಾಡಿದ ಈ ಕೊರಂಬೆಯನ್ನು...

12

ನನ್ನ ಪ್ರಥಮ ವಿಮಾನ ಯಾನ…

Share Button

ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ...

1

ಅಮ್ಮನೆಂಬ ದೇವತೆ ಇರಲು

Share Button

  ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು   ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂಹವಳು ತನ್ನ ಹಸಿವ ತೋರಗೊಡದೆ ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು  . ಏನೇ ಕಷ್ಟ ಬಂದರೂ ಮೊದಲು...

1

ಬೇಸಾಯಗಾರ ಬೇಗ ಸಾಯ -ಭಾಗ 2

Share Button

ನನ್ನ ಅಪ್ಪ ಒಬ್ಬ ಕೃಷಿಕ ಆಗಿಲ್ಲದಿದ್ದರೂ ಕೃಷಿಯ ಬಗ್ಗೆ ಅದೇನೋ ನಂಟು ನನಗೆ. ಮಳೆಗಾಲದ ನಂತರ ನಮ್ಮ ಗದ್ದೆಯಲ್ಲಿ ಮೆಣಸು, ಗೆಣಸು, ಹಾಗಲಕಾಯಿ, ಬದನೆ, ದಂಟಿನ ಸೊಪ್ಪು. ಇವೆಲ್ಲಾ ಬೆಳೆದಿದ್ದೆ ಕೂಡಾ.  ಅಪ್ಪ ನನ್ನ ಗೋಜಿಗೆ ಬರದಿದ್ದರೂ ಅಮ್ಮ ಮಾತ್ರ ಈ ವಿಚಾರದಲ್ಲಿ ಅಂದರೆ ತರಕಾರಿ ಬೆಳೆಯುವುದರಲ್ಲಿ ನನಗೆ...

2

ಬಸ್ಸು ಬಂತು ಚುನಾವಣೆ ಬಸ್ಸು

Share Button

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು.  ಚುನಾವಣೆಯೆಂದಾಗ  ಎಲ್ಲರ  ಮನಸ್ಸಲ್ಲೂ ಏನಾದರೊಂದು  ನೆನಪು  ಇಣುಕಬಹುದು.   ನಾನು ಸಣ್ಣವಳಿದ್ದಾಗ ಚುನಾವಣೆ ಬರಲೆಂದು ಹಂಬಲಿಸುತ್ತಿದ್ದೆ. ನಾನಷ್ಟೇ ಅಲ್ಲ ನನ್ನ ಒಡಹುಟ್ಟಿದವರಿಗೂ ಇದೇ ಆಸೆ ಇದ್ದಿರಬೇಕು. ಆಗ ನಮಗೆ ಚುನಾವಣೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.ನಾವು ವಯಸ್ಕರೂ ಆಗಿರಲಿಲ್ಲ. ಹಾಗಾಗಿ  ಮತದಾರರೂ ಆಗಿರಲಿಲ್ಲ. ಚುನಾವಣೆಯಿಂದಾಗುವ ಪರಿಣಾಮದ ಅರಿವೂ ಇರಲಿಲ್ಲ. ಚುನಾವಣೆಗಾಗಿ ನಾವು ಹಂಬಲಿಸಲು...

2

ನಾವು ಆಲೋಚನೆ ಏಕೆ ಮಾಡುತ್ತಿಲ್ಲ?

Share Button

ಆಲೋಚನೆ ಎಂಬ ಬುದ್ಧಿ ಶಕ್ತಿ ಮನುಷ್ಯನಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಸರಿ ಯಾವುದು?ತಪ್ಪು ಯಾವುದು? ಒಳಿತು, ಕೆಡುಕುಗಳ ಬಗ್ಗೆ ಸಾರಾಸಾರ ವಿವೇಚನೆ ಅಂತೆಯೇ ಬದುಕಲ್ಲಿ ಬರುವ ಕಷ್ಟಗಳನ್ನು ದೂರೀಕರಿಸಿ ಸುಖದ ನೆಲೆಯನ್ನು ತಂದು ಕೊಳ್ಳುವುದು, ಇವೆಲ್ಲವನ್ನೂ ಆತ ತನ್ನ ಆಲೋಚನಾ ಶಕ್ತಿಯಿಂದ ನಿರ್ಧಾರ ತಳೆದು ಅದರಂತೆ ಕಾರ್ಯೋನ್ಮುಖನಾಗುತ್ತಾನೆ. ಎಲ್ಲರೂ...

1

ಬೇಸಾಯಗಾರ ಬೇಗ ಸಾಯ… ಭಾಗ 1 

Share Button

  *ಬೇಸಾಯಗಾರ ಬೇಗ ಸಾಯ* ನೀವೆಲ್ಲರೂ ಈ ಮಾತು ಕೇಳಿರಬಹುದು . ಬಹುಶಃ ಬೇಸಾಯ ಈಗ ಕಡಿಮೆಯಾದ ಕಾರಣ ನಮ್ಮ ಕಡೆ ಎಲ್ಲರೂ ಬೇಗನೇ ಗೊಟಕ್ ಆಗ್ತಾರೋ ಏನೋ . ಅದ್ಸರಿ , ಬೇಸಾಯವೇನೋ ಒಳ್ಳೆಯದೇ ಅದನ್ನು ಮುನ್ನಡೆಸುವುದು ಹೇಗೆ ಎನ್ನುವುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ. ಮೊದಲೆಲ್ಲಾ...

Follow

Get every new post on this blog delivered to your Inbox.

Join other followers: