Category: ಬೆಳಕು-ಬಳ್ಳಿ

12

ಗಜಲ್

Share Button

ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು ಮನುಜಉರಿದ ಬತ್ತಿಗಷ್ಟೆ ಗೊತ್ತು ಬೆಳಕಿನಲ್ಲಿಬಣ್ಣ ಹಚ್ಚಿದವರ ಗುರುತು ಮನುಜ. ಹರಿದ ನದಿಗಷ್ಟೆ ಗೊತ್ತು ಮಡಿಲಲ್ಲಿತಿಳಿನೀರ ಕದಡಿವರ ಗುರುತು ಮನುಜಬಿರಿದ ಭೂಮಿಗಷ್ಪೆ ಗೊತ್ತು ಒಡಲಲ್ಲಿಸಿಡಿ ಮದ್ದುಗಳನಿಟ್ಟವರ ಗುರುತು...

5

ಕಾಣದ ಕಥೆ – ವ್ಯಥೆ

Share Button

ಪಾಲಿಗೆ ಬಂದ ಅರ್ಧ ಎಕರೆ ಹೊಲದ ಒಡೆಯ ಎನ್ನಪ್ಪಬಾರದ ಮಳೆಗೆ ಮುಗಿಲ ಕಡೆ ಮುಖ ಮಾಡಿ‌ ಕಾಯುತ್ತಿದ್ದ ಈ ಮೂಕ ಬಸಪ್ಪ ನಾನು ಹುಟ್ಟಿದಾಗ ಹೆಣ್ಣೆಂದು ಹೀಗಳೆಯದೆಓಣೆಯಲೆಲ್ಲಾ ಸಿಹಿ ಹಂಚಿದ್ದ ಈ ಸುದ್ದಿ ಸೂರಪ್ಪ ಸಾಲ ಮಾಡಿ ತಂದ ಜೋಡಿ ಎತ್ತುಗಳಿಗೆ ರಾಮ ಲಕ್ಷ್ಮಣಎಂದು ಹೆಸರಿಟ್ಟು ಕುಣಿದಾಡಿದ್ದ...

8

ಕಲಿಯಬೇಕಿದೆ…

Share Button

ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ ಮರೆತುಬಾಳಿನ ರಸದೂಟ ಸವಿಯಬೇಕಿದೆ. ನಮ್ಮನ್ನು ಅರಿತವರೊಡನೆ ಕೂಡಿನಮ್ಮನ್ನು ದೂರಿದವರ ದೂಡಿಬದುಕಿನ ವ್ಯಾಪಾರವ ಮಾಡಬೇಕಿದೆ. ಒಳಿತರಲ್ಲಿ ಕೆಡುಕುಗಳ ಹುಡುಕದೇಕೆಡುಕುಗಳಲ್ಲಿ ಒಳಿತುಗಳ ನೋಡದೇಜೀವನ ಲೆಕ್ಕಾಚಾರ ಹಾಕಬೇಕಿದೆ. ಹಿರಿಯರ ಅನುಭವ...

7

ನುಡಿದಂತೆ ನಡೆದ ದೈವ……..

Share Button

ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ ಆಡಂಬರದ ಜೀವನ ತೊರೆದು ಸಂಚಾರಿ ಬದುಕ ಅಪ್ಪಿಕೊಂಡ ನಿಜ ವಿರಾಗಿಮೆಲುಧ್ವನಿಯಲ್ಲಿ ಬಾಳಿನ  ತತ್ವ ಸಾರಿದ ಸರಳ ಜೀವಿ ಪದವಿ ಪಟ್ಟ ಬಯಸದೆ ಜನ ಮಾನಸದಲಿ ನೆಲೆಯೂರಿದ ಸ್ವಾಮೀಜಿಬಹು...

5

ನಿವೇದನೆ….

Share Button

ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ ಮಕ್ಕಳಿಗೆ ಗುರುವಾಗುಆದರ್ಶವ ಕೊಂದುಕೊಳ್ಳಬೇಡ ಸಮಾಜಮುಖಿಯಾಗುಅಹಮಿಕೆಯ ದಾಸನಾಗಬೇಡ ಹೆಗಲಿಗೆ ನೊಗವಾಗುನಗುವವರ ಮುಂದೆ ಬೀಳಿಸಬೇಡ ಸ್ವಚ್ಚಂದ ಹಕ್ಕಿಯಾಗುಸ್ವಾತಂತ್ರ ಸಿಕ್ಕಿತೆಂದು ತುಳಿಯಬೇಡ ಆದರ್ಶ ಸತಿಪತಿಯಾಗಲುದಾರಿಯಾಗುದಾರಿಗೆ ಮುಳ್ಳಾಗಬೇಡ…… -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +4

4

ರಸ ಋಷಿಯೆಂಬ ‘ಕೃತ್ತಿಕೆ’

Share Button

‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ ನಾನಿರುವೆ‘ತಪೋನಂದನ’ಮಾಡು‘ನನ್ನಮನೆ’ಯ ….‘ಕಬ್ಬಿಗನ ಕೈಬುಟ್ಟಿ’ಯಲಿ‘ಕನ್ನಡದ ಡಿಂಡಿಮ’ವಬಾರಿಸುವ ‘ರಕ್ತಾಕ್ಷಿ’ಯಾಗಿ ‘ಚಂದ್ರಮಂಚಕೆ ಬಾ ಚಕೋರಿ’ಎಂದುಲಿದಾ‘ಪಾಂಚಜನ್ಯ’…… ‘ನೆನಪಿನ ದೋಣಿ’ಯಲಿ‘ಕೃತಿಕೆ’, ‘ಅಗ್ನಿಹಂಸ’ಗಳಜೀವಂತವಿರಿಸಿ‘ಚಂದ್ರಹಾಸ’, ‘ಬಲಿದಾನ’‘ಕಾನೀನ’ ,’ಜಲಗಾರ’ನ ಕೊಟ್ಟು‘ಯಮನಸೋಲಿ’ಸಿಕನ್ನಡಿಗರೆದೆಯಲಿ‘ನನ್ನ ದೇವರಾ’ಗಿ ನೆಲೆನಿಂತು‘ಶ್ರೀ ರಾಮಾಯಣ ದರ್ಶನ’ವಿತ್ತು‘ವಾಲ್ಮೀಕಿಯ ಭಾಗ್ಯ’...

4

ಜಗದ ಜೀವದಾತ

Share Button

ಜಗದ ಕಿರಣ ಸೂರ್ಯಬರದೆ ಭುವಿಯುಅರಳದುಜನರ ಕಿರಣ ರೈತಇರದೆ ಜನರಜೀವವುಳಿಯದು …. ಹಸನು ಮಾಡಿ ನೆಲವತಾನು ಉತ್ತು ಕಳೆಯಕಿತ್ತುವಕೆಸರು ಏನೇಯಿರಲಿಬಿಡದೆ ನಾಟಿಮಾಡಿಬಿತ್ತುವ…. ಜಾವ ನಾಲ್ಕರಲ್ಲಿ ಎದ್ದುಸೂರ್ಯನನ್ನುಬೇಡುವಬೆಳೆಗೆ ನೀರು ಉಣಿಸಲುವರುಣನನ್ನುಬೇಡುವ…. ಪಚ್ಚೆ ಬೆಳೆದು ಧಾನ್ಯಸಿಗಲು ಸುಗ್ಗಿಮಾಡಿಹಿಗ್ಗುವರಾಶಿಗಿಷ್ಟು ಪೂಜೆಗೈದುಲೋಕಕೆಲ್ಲಾಹಂಚುವ….. ಕಪಟವಿರದ ಮನಸಿನವನುಅನ್ನದಾತರೈತನುದೇವನಂತೆ ಸಲಹುತಿರುವನಮಿಸಿ ಬಂದುಎಲ್ಲರೂ………. -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +3

5

ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು

Share Button

ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/ ಕಾಣದ ರೂಪವ ಕಲ್ಪಿಸಿ ಕೆತ್ತುವೆವು ಶಿಲಾಮೂರ್ತಿಗಳ/ಸ್ಥಾಪಿಸುವೆವು ದೇಗುಲ ದೇವಾಲಯಗಳಲ್ಲಿ ವಿಗ್ರಹಗಳ/ಅಭಿಷೇಕ ಮಾಡಿ ಅರ್ಪಿಸುವೆವು ಹೂಹಣ್ಣು ಹಂಪಲುಗಳ/ಪ್ರಶಂಶಿಸುವೆವು ಮಹಿಮೆಗಳ ಸ್ತುತಿಸಿ ಮಂತ್ರಘೋಷಗಳ/ ಯಾವ ಕಾರಣಕೆ ಕಾಣದ ಕೈಗಳ ಪೂಜಿಸಿ ಭಜಿಸಿ ಅನುದಿನವು/ವಾಸ್ತವಿಕತೆಯಲ್ಲಿ ಬೆಂಬಲವಾಗಿರುವ...

5

ಗರಿಕೆಯಂಥಾ ಕನ್ನಡ

Share Button

ಅಮ್ಮಾ ಎಂದುಲಿದು ಪಾದ ತಬ್ಬಿದರೆ ಸಾಕುಎತ್ತಿ ಎದೆಗಪ್ಪಿಕೊಳ್ಳುವಳುಭುವನ ಸುಂದರಿ ಭಾವಸಾಗರಿಬಾರೆನ್ನ ಕಂದನೆಂದು ಭರಸೆಳೆವ ಕರುಣಜಲ ವಿಹಾರಿಲೋಕಲೋಕಗಳಲೂ ಬಹು ಮಾನ್ಯಳುನನ್ನಮ್ಮ ಕರುಣಾಳು ಕನ್ನಡಾಂಬೆ ಯಾವ ಜನ್ಮದ ಪುಣ್ಯ ಶೇಷವೋಯಾರ ಕರುಣೆಯ ಹಾರೈಕೆಯೋಹುಟ್ಟಿದೆನು ಬೆಳೆದೆನು ನಿನ್ನ ಮಡಿಲಲಿಬದುಕ ಕಟ್ಟಿಕೊಂಡೆನು ನಿನ್ನ ನಿಸರ್ಗಸಿರಿಯಲಿ ನಿನ್ನ ಭಾವವಿದೆ ರಸಿಕ ಕವಿಗಳೆದೆಯಲಿನಿನ್ನ ಜೀವವಿದೆ ಮುತ್ತಿನಕ್ಕರದ...

3

ಗಝಲ್

Share Button

ವಸಂತಮಯದಿ ಹಸಿರುಡುವ ಧರೆಯೇ ಮಮ್ಮಳಿದುಸಂತಸವಿಲ್ಲದೆ ಇಂಚಿಂಚು ಕರಗುತಿರುವೆ ಮಮಕರಿಸು ಮರತದಿಂದ ಮರಳಿ ಬಾ ಹಸಿರಾಗಿಸು ಉಸಿರಿಳಿದುಮರಗೂಳದೆ ಬೆಂದು ಬಸವಳಿಯುತಿರುವೆ ದಯೆಯಿರಿಸು ಮಧುರಿಮೆಯ ಭೂರಮೆಯೆ ನಂಬಿಕೆಯಿಡು ಮನಂಬಸದೆಆದರದಿ ಕಾಪಿಡುವೆ ಮನವರಿಕೆ ಮಾಡುವೆ ಸಹಕರಿಸು ಮದವಿಳಿಯುತಿಹುದು ಪುರಜನರಲ್ಲಿ ನೇಸರನತಾಪದಮದಿಪರಿತು ಹಸಿರ ಚಿಗುರಿಸುತಿಹರು ಒಲವಿರಿಸು ಹೂಳುತಿಹ ಹೆಣರಾಶಿಯ ಕಂಡೇಕೆ ಮೊಗವಳುತಿಹುದುಹಳುವು ಮುರುಟಿದ...

Follow

Get every new post on this blog delivered to your Inbox.

Join other followers: