Author: Shankari Sharma, putturmail@gmail.com

0

ಬಿದಿರು….ಬಾಳು…

Share Button

ಚೂಪು ಪರ್ಣಗಳ ಹೊತ್ತು ಪುಟ್ಟ ಗಿಡ ನಲಿದಿರಲು ವೇಗದಿಂದಲಿ ಬೆಳೆದು ನಭದೆಡೆಗೆ ಸಾಗಿರಲು ಹಿಂಡು ಹಿಂಡಾಗಿಯೆ ವನದಲ್ಲಿ ಕಾಣಿಸಲು ಸದುಪಯೋಗದ ಬಿದಿರು ಅಲ್ಲಲ್ಲಿ ಹರಡಿರಲು ಅಕ್ಕರೆಯ ಆರೈಕೆ ಇಲ್ಲದೆಯೆ ತಾ ಬೆಳಗಿ ಗೃಹಕುಪಯೋಗ ವಸ್ತು ತಾನೆ ತಾನಾಗಿ ಕೊಳಲ ರಾಗಕೆ ‌ಸೊಗದ ಮೊಗವೆ ತಾನಾಗಿ ಬಾನ್ಸುರಿಯ ಇಂಪು...

4

ಮನದೀಪ ಬೆಳಗಲಿ..

Share Button

ನಿರಾಸೆ ನಿಶೆಯದು ಓಡಿ ಬಂತು ಆಸೆಯ ಬೆಳಕು ಮನಕೆ ಮುದ ತಾ ನೀಡಿ ಸಂಭ್ರಮದ ಮೆಲುಕು ಅಭ್ಯಂಜನದ ಪರಿಯ ತಿಳಿಯೆ ಕೊಳೆ ನಿರ್ನಾಮ ಅಂತರಂಗದ ಕೊಳೆಯ ತೊಳೆಯೆ ದೇವರನಾಮ ಕೆಟ್ಟ ಆಸೆಗಳ ಅಸುರ ನರಕನನು ತಾ ಮೆಟ್ಟಿ ನಿಲ್ಲಬೇಕಿದೆ ಜನರ ಮನ ಕದವ ತಟ್ಟಿ ಸುತ್ತ ದೀಪಾಲಂಕಾರ...

14

ಸ್ವಾತಿ ಮುತ್ತು… ಮಳೆ ನೀರು ಮಹತ್ತು…!!!

Share Button

  ನಮ್ಮ ಹಿರಿಯರು ಸ್ವಾತಿ ನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಇತ್ತೀಚೆಗೆ ಒಂದು ದೈನಿಕ ಪತ್ರಿಕೆಯಲ್ಲಿ ಅದರ ಬಗ್ಗೆ ವಿವರವಾದ ಲೇಖನ ಪ್ರಕಟವಾಗಿದ್ದನ್ನು ಓದಿದಮೇಲೆ ನನ್ನ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆ ನೀರನ್ನು ಸಂಗ್ರಹಿಸಿ ಇಡುತ್ತಿದುದು ನೆನಪಾಯಿತು. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ...

2

ಶಾರದಾಂಬೆಗಿದೊ ಅಕ್ಷರಮಾಲೆ

Share Button

ಅಕ್ಷರಾಧಿದೇವತೆ ತಾಯೆ ಆರಾಧಿಸುವೆವು ನೀ ಕಾಯೆ ಇನಿತು ದಯೆಯನು ತೋರುತಲಿ ಈ ಮಕ್ಕಳನು ನೀ ಪೊರೆಯೆ ಉತ್ತಮ ವಿದ್ಯೆಯ ಕರುಣಿಸಿ ಸಲಹು ಊರ್ಜಿತವಾಗಲಿ ಸಂಪತ್ತು ಋಷಿ ಮುನಿಗಳ ಈ ಪುಣ್ಯದ ಬೀಡು ಎದುರಿಸದಿರಲಿ ಆಪತ್ತು ಏಳಿಗೆ ಹೊಂದಲಿ ಸುವಿಚಾರಗಳು ಐಸಿರಿ ಎಲ್ಲೆಡೆ ತುಳುಕುತಲಿ ಒಗ್ಗಟ್ಟಿನಿಂದಲಿ ಮುಂದೆ ನಡೆಯುವ...

1

ಕೇರಳದ ಕಥಕ್ಕಳಿ…!

Share Button

ತುಂಬು ವೈವಿಧ್ಯಮಯ ರಂಗಿನಾಲಂಕಾರ ಸಾಂಪ್ರದಾಯಿಕ ನೃತ್ಯ ಕಥಕ್ಕಳಿ ಸಾಕಾರ ಕೇರಳದ ಜನತೆಯಲಿ ಹಾಸುಹೊಕ್ಕಿರೆ ಸಾರ ನಟನೆಯ ಈ ನೋಟ ನಯನ ಮನೋಹರ ಚೆಂಡೆ,ತಾಳ ಲಯಬದ್ಧ ಹಾಡು ಚಂದ ಅಕ್ಷಿ,ಆಂಗಿಕಾಭಿನಯ ನೋಡಲಾನಂದ ಪೌರಾಣಿಕಾ ನೆಲೆಯ ಕಥನ ಕಥಕ್ಕಳಿಯು ಕರಾವಳಿ ಕೇರಳದ ಜಾನಪದ ಕಲೆಯು ದಿನ ದಿನದ ದುಡಿತಗಳಿಗೆ ಬೇಕು...

4

ನೊಂದವರ ನಡುವೆ..

Share Button

           ಹೌದು, ನಮ್ಮ ದಕ್ಷಿಣಕನ್ನಡ ಜಿಲ್ಲೆಯ ನೆರೆ ಜಿಲ್ಲೆಯೇ ನಮ್ಮೆಲ್ಲರ ಹೆಮ್ಮೆಯ ಕೊಡಗು. ಸವಿ ಕಿತ್ತಳೆಯ ನಾಡು,ದೇಶದ ಹೆಮ್ಮೆಯ ಯೋಧರ ಬೀಡು. ಕೊಡಗಿನ ಕಾಫಿಯ ಘಮಲು ದೇಶ,ಪರದೇಶಗಳಲ್ಲೆಲ್ಲಾ ಹರಡಿ ಜನಮನ ಗೆದ್ದಿರುವುದು ಹಳೆ ಕತೆ! ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವುದೂ ಅಲ್ಲದೆ ತನ್ನದೇ ಆದ ಭಾಷೆ,ಆಹಾರ ಸಂಸ್ಕೃತಿಯಿರುವ ಸಂಪದ್ಭರಿತ ...

11

ಭೂತ ಚೇಷ್ಟೆ…!!

Share Button

ನಮ್ಮ ಪಕ್ಕದೂರಿನ ರಾಮಣ್ಣನಿಗೆ ಅಲ್ಲೇ ಒಂದು ಪುಟ್ಟ ಅಂಗಡಿ. ಊರಿನಲ್ಲಿಯೇ ಬೆಳೆದ ತರಕಾರಿ, ಹಾಗೆಯೇ ಕೆಲವು ದೈನಂದಿನ ಅಗತ್ಯದ ಸಾಮಾನುಗಳು ಅಲ್ಲಿ ಲಭ್ಯವಿರುತ್ತಿದುದರಿಂದ ದಿನದ ವೈವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಅವನ ಅಂಗಡಿ ಇರುವುದು ಊರಿನ ಸ್ಮಶಾನದ ಸಮೀಪ. ಕಡಿಮೆ ಬಾಡಿಗೆಯ ಕಟ್ಟಡ ಮತ್ತೆಲ್ಲಿ ಸಿಗುತ್ತಿತ್ತು ಹೇಳಿ? ಮನೆಯಲ್ಲಿ...

0

ಎಂಜಿನಿಯರ್ ದಿನ…

Share Button

  ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ,ಈ ಶತಮಾನ ಕಂಡ  ಪ್ರಖಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15 ರಂದು ಜನಿಸಿದರು. ’ ನ ಭೂತೋ ನ ಭವಿಷ್ಯತಿ’ ಎಂಬಂತೆ, ಹಿಂದೆಯೂ ಹುಟ್ಟಿರದ, ಮುಂದೆಯೂ...

0

ಮಹಾಗಣಪತಿ ನಮೋಸ್ತುತೇ…

Share Button

ಮಾತೆ ಮೈಯಲಿನ ಮಲಿನದಿಂದಲೆ ರೂಪ ಪಡೆದೆ ನೀ ವಿನಾಯಕ ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ ಶಿರವ ಕಳೆದೆ ನೀ ನಿಯಾಮಕ ಸತಿಯ ಮಾತಿಗೆ ಒಲಿದು ಶಿವನು ತಾ ಗಜ ಮುಖ ಜೋಡಿಸಿ ಬದುಕಿಸಿದ ಗಣಗಳ ಅಧಿಪತಿಯಾಗಲು ಹರಸುತ “ಮೊದಲ ಪೂಜೆ” ದಯಪಾಲಿಸಿದ ಉದರದಿ ತುಂಬಿದ ಕಡುಬು...

4

ಶಿಕ್ಷಕರ ದಿನ…

Share Button

  ಮಾಜಿ ಪ್ರಥಮ ಪ್ರಜೆ ರಾಧಾಕೃಷ್ಣರು.. ಜನುಮ ದಿನವನು ಆಚರಿಸೆ ಶಿಕ್ಷಕರು ಉತ್ತಮ ಗುರು ಪಡೆದ ನಾವೇ ಧನ್ಯರು ಜೀವನವ ರೂಪಿಸಿದ ಅವರೇ ಮಾನ್ಯರು ಅಕ್ಕರೆಯಲಿ ಅಕ್ಷರವ ತಾವು ಕಲಿಸಿ ತಪ್ಪು ಒಪ್ಪುಗಳ ಆಗಾಗ ತಿಳಿಸಿ ತಿದ್ದಿ ತೀಡಿದ ಗುರುವು ದೇವ ಸಮಾನ ನಿಮಗಿದೋ ನಮ್ಮೆಲ್ಲರ ಸಾಷ್ಟಾಂಗ...

Follow

Get every new post on this blog delivered to your Inbox.

Join other followers: