Author: C N Bhagya Lakshmi
ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ ಮಕ್ಕಳಿಗೆ ಗುರುವಾಗುಆದರ್ಶವ ಕೊಂದುಕೊಳ್ಳಬೇಡ ಸಮಾಜಮುಖಿಯಾಗುಅಹಮಿಕೆಯ ದಾಸನಾಗಬೇಡ ಹೆಗಲಿಗೆ ನೊಗವಾಗುನಗುವವರ ಮುಂದೆ ಬೀಳಿಸಬೇಡ ಸ್ವಚ್ಚಂದ ಹಕ್ಕಿಯಾಗುಸ್ವಾತಂತ್ರ ಸಿಕ್ಕಿತೆಂದು ತುಳಿಯಬೇಡ ಆದರ್ಶ ಸತಿಪತಿಯಾಗಲುದಾರಿಯಾಗುದಾರಿಗೆ ಮುಳ್ಳಾಗಬೇಡ…… -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +4
‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ ನಾನಿರುವೆ‘ತಪೋನಂದನ’ಮಾಡು‘ನನ್ನಮನೆ’ಯ ….‘ಕಬ್ಬಿಗನ ಕೈಬುಟ್ಟಿ’ಯಲಿ‘ಕನ್ನಡದ ಡಿಂಡಿಮ’ವಬಾರಿಸುವ ‘ರಕ್ತಾಕ್ಷಿ’ಯಾಗಿ ‘ಚಂದ್ರಮಂಚಕೆ ಬಾ ಚಕೋರಿ’ಎಂದುಲಿದಾ‘ಪಾಂಚಜನ್ಯ’…… ‘ನೆನಪಿನ ದೋಣಿ’ಯಲಿ‘ಕೃತಿಕೆ’, ‘ಅಗ್ನಿಹಂಸ’ಗಳಜೀವಂತವಿರಿಸಿ‘ಚಂದ್ರಹಾಸ’, ‘ಬಲಿದಾನ’‘ಕಾನೀನ’ ,’ಜಲಗಾರ’ನ ಕೊಟ್ಟು‘ಯಮನಸೋಲಿ’ಸಿಕನ್ನಡಿಗರೆದೆಯಲಿ‘ನನ್ನ ದೇವರಾ’ಗಿ ನೆಲೆನಿಂತು‘ಶ್ರೀ ರಾಮಾಯಣ ದರ್ಶನ’ವಿತ್ತು‘ವಾಲ್ಮೀಕಿಯ ಭಾಗ್ಯ’...
ಜಗದ ಕಿರಣ ಸೂರ್ಯಬರದೆ ಭುವಿಯುಅರಳದುಜನರ ಕಿರಣ ರೈತಇರದೆ ಜನರಜೀವವುಳಿಯದು …. ಹಸನು ಮಾಡಿ ನೆಲವತಾನು ಉತ್ತು ಕಳೆಯಕಿತ್ತುವಕೆಸರು ಏನೇಯಿರಲಿಬಿಡದೆ ನಾಟಿಮಾಡಿಬಿತ್ತುವ…. ಜಾವ ನಾಲ್ಕರಲ್ಲಿ ಎದ್ದುಸೂರ್ಯನನ್ನುಬೇಡುವಬೆಳೆಗೆ ನೀರು ಉಣಿಸಲುವರುಣನನ್ನುಬೇಡುವ…. ಪಚ್ಚೆ ಬೆಳೆದು ಧಾನ್ಯಸಿಗಲು ಸುಗ್ಗಿಮಾಡಿಹಿಗ್ಗುವರಾಶಿಗಿಷ್ಟು ಪೂಜೆಗೈದುಲೋಕಕೆಲ್ಲಾಹಂಚುವ….. ಕಪಟವಿರದ ಮನಸಿನವನುಅನ್ನದಾತರೈತನುದೇವನಂತೆ ಸಲಹುತಿರುವನಮಿಸಿ ಬಂದುಎಲ್ಲರೂ………. -ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ +3
“ಅಮ್ಮಾ “….ಎಂದು ಕಿಟಾರನೆ ಕಿರುಚಿದ ಶಬ್ಧಕ್ಕೆ ಬೆಚ್ಚಿದ ಸುಗುಣ, ಟಿ ವಿ ನೋಡುತ್ತಾ, ಸೊಗಡಿನ ಅವರೆಕಾಯಿ ಸಿಪ್ಪೆ ಬಿಡಿಸುತ್ತಿದ್ದವಳು ಬೆಚ್ಚಿ ಹಿಂದಿರುಗಿ ನೋಡಿದಳು. ನಾಲ್ಕು ವರ್ಷದ ಮಗಳು ಧನ್ವಿತ ಭಯದಿಂದ ನಡುಗುತ್ತಾ ನಿಂತಿದ್ದಳು. “ಏನಾಯಿತು ಪುಟ್ಟ “ಸುಗುಣ ಕೂಡಾ ಗಾಬರಿಯಿಂದ ಅವಳ ಮುಖ ನೋಡಿದಳು. ...
ವಸಂತಮಯದಿ ಹಸಿರುಡುವ ಧರೆಯೇ ಮಮ್ಮಳಿದುಸಂತಸವಿಲ್ಲದೆ ಇಂಚಿಂಚು ಕರಗುತಿರುವೆ ಮಮಕರಿಸು ಮರತದಿಂದ ಮರಳಿ ಬಾ ಹಸಿರಾಗಿಸು ಉಸಿರಿಳಿದುಮರಗೂಳದೆ ಬೆಂದು ಬಸವಳಿಯುತಿರುವೆ ದಯೆಯಿರಿಸು ಮಧುರಿಮೆಯ ಭೂರಮೆಯೆ ನಂಬಿಕೆಯಿಡು ಮನಂಬಸದೆಆದರದಿ ಕಾಪಿಡುವೆ ಮನವರಿಕೆ ಮಾಡುವೆ ಸಹಕರಿಸು ಮದವಿಳಿಯುತಿಹುದು ಪುರಜನರಲ್ಲಿ ನೇಸರನತಾಪದಮದಿಪರಿತು ಹಸಿರ ಚಿಗುರಿಸುತಿಹರು ಒಲವಿರಿಸು ಹೂಳುತಿಹ ಹೆಣರಾಶಿಯ ಕಂಡೇಕೆ ಮೊಗವಳುತಿಹುದುಹಳುವು ಮುರುಟಿದ...
ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಆರಂಭವಾಯಿತೆಂದರೆ ಮೊದಲ ಆರನೆಯದಿನ ಆಚರಿಸುವ ಹಬ್ಬವೇ ಚಂಪಾ ಷಷ್ಠಿ. “ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//”. ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ….ಹಾಗೇ ತಾರಕಾಸುರನನ್ನು ಸಂಹಾರ...
ಕಾಲ ಎಷ್ಟೇ ಬದಲಾದರೂ, ಜನ ಎಷ್ಟೇ ವಿವೇಚನೆಯುಳ್ಳವರಾದರೂ, ಬುದ್ಧಿವಂತರಾದರೂ, ವಿವೇಕಿಗಳಾದರೂ, ವಿದ್ಯಾವಂತರಾದರೂ ಹಳೆಯ ನಂಬಿಕೆ, ಹಿರಿಯರ ಮಾತುಗಳ ಜೊತೆ ಬದುಕಬೇಕಾಗುತ್ತದೆ.ಕೆಲವು ಮೂಢನಂಬಿಕೆಯಾದರೂ ಸಹಾ ಶೇಕಡ ತೊಂಭತ್ತು ಭಾಗ ನಾವು ಹಳೆಯ ಪದ್ಧತಿಯನ್ನು ಬಿಡುವುದಿಲ್ಲ ಅಲ್ಲವೇ. ವಾಸ್ತವವಾಗಿ ಬಿಡು ಎಂದು ಹೇಳುವವರೇ ನಮಗಿಂತ ಹೆಚ್ಚು ಹೆಚ್ಚು ಅಂತಹ ನಂಬಿಕೆಗಳೊಡನೆ...
ನಮ್ಮ ದೇಶವು ಪ್ರಪಂಚದಲ್ಲಿಯೇ ಧರ್ಮವನ್ನು ವಿಶ್ವಕ್ಕೆ ಸಾರಿದ ದೇಶಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್, ಭಗವದ್ಗೀತೆ, ರಾಮಾಯಣ,ಮಹಾಭಾರತದ ಮೂಲಕ ಭಕ್ತಿಪಂಥವನ್ನು ಮುನ್ನೆಡೆಸಿ, ಅವುಗಳ ಮೂಲಕ ಅನೇಕ ನೀತಿಕಥೆಗಳನ್ನು, ಧಾರ್ಮಿಕ ಸಂಗತಿಗಳನ್ನು, ಸಂಸ್ಕೃತಿಯನ್ನು ಸಾರಿದಂತಹ ನಮ್ಮ ದೇಶವೆಂದರೆ ನಮಗೆ ಹೆಮ್ಮೆ. ಅನೇಕ ಧರ್ಮಗುರುಗಳನ್ನು ,ಸಾಧು ಸಂತರನ್ನು, ಯೋಗಿಗಳನ್ನು,ವಿವೇಕಿಗಳನ್ನು, ಜ್ಯೋತಿಷಿಗಳನ್ನು,ಮುಖಂಡರನ್ನು,...
ಚಟ ಪಟ, ಢಾಂ ಢೂಂ,ಡಸ್ ಪುಸ್ ಬಾಲಂಗೋಚಿಯ , ಸರ್ ಪುರ್ ಲಕ್ಷಿ ಪಟಾಕಿಯ, ಬೆಂಕಿಯ ಹೂಗಳ ಕುಂಡದ, ವಿಷ್ಣು ಚಕ್ರವ, ಸುರು ಸುರು ಬತ್ತಿಯ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ದೀಪಾವಳಿ ಇನ್ನೇನು ಬಂದೇ ಬಿಟ್ಟಿತು. ದಸರ ಹಬ್ಬದ ಸಡಗರ ಮರೆಯುವ ಮೊದಲೇ ದೀಪಾವಳಿಯ ಸಡಗರಕೆ ಎಲ್ಲರ...
ಶರತ್ಕಾಲದಲ್ಲಿ ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’. ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು. ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು, ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ...
ನಿಮ್ಮ ಅನಿಸಿಕೆಗಳು…