Author: Padma Anand
ಬಾಲ್ಯದ ನೆನಪು
ಇದು ಸುಮಾರು 1968-69 ನೇ ಸಾಲಿನಲ್ಲಿ ನಡೆದ ಒಂದು ಘಟನೆ. ಪೇಟೆ ಬೀದಿಯಲ್ಲಿರುವ ಸರ್ಕಾರೀ ಅನುದಾನಿತ ವಿದ್ಯಾಸಂಸ್ಥೆಯೊಂದರ ವಿಶಾಲವಾದ ಅಂಗಳದಲ್ಲಿ ಮೂರು ವಾರಗಳ ಕಾಲ ಆಗ ಪ್ರಖ್ಯಾತರಾಗಿದ್ದ ಜನಾಕರ್ಷಕರಾಗಿದ್ದ, ದೇಶ ವಿದೇಶಗಳಲ್ಲಿ ಉತೃಷ್ಟ ರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಉಪನ್ಯಾಸ ಮಾಲಿಕೆಗಳನ್ನು ನೀಡುತ್ತಿದ್ದ ಶ್ರೀಯುತ...
ಇಂದು – ಅಂದು
ಮಾರ್ಚ್ ತಿಂಗಳು ಬಂದಿತೆಂದರೆ ಎಲ್ಲೆಲ್ಲೂ ಪರೀಕ್ಷೆಗಳ ವಿಚಾರಗಳೇ ಹರಿದಾಡುತ್ತಿರುತ್ತವೆ. ಮೊನ್ನೆ ನಮ್ಮವರು ಬೆಳಗಿನ ವಾಯು ವಿಹಾರ ಮುಗಿಸಿ ಬಂದಾಗ, ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತಂದು, ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದಾಗ ನೆರೆಮನೆಯವರಾಗಿದ್ದ ನಾರಾಯಣ್ ಅಂಕಲ್ ಅವರ ಮಗ, ನರಹರಿ ಎಂದೂ, ಈಗ ಈ ಊರಿನಲ್ಲೇ ಇದ್ದಾರೆಂದೂ, ಸಿಟಿಯಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ...
ಸಿ.ಎನ್.ಮುಕ್ತಾ ಅವರ “ಆಕಾಶಕ್ಕೊಂದು ಏಣಿ”
2017 ರಲ್ಲಿ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ.ಸಿ.ಎನ್. ಮುಕ್ತಾ ಅವರು ರಚಿಸಿರುವ “ಆಕಾಶಕ್ಕೊಂದು ಏಣಿ” ಎಂಬ ಹೆಸರಿನ ಪುಸ್ತಕದಲ್ಲಿ ಎರಡು ಮಿನಿ ಕಾದಂಬರಿಗಳು ಪ್ರಕಟಗೊಂಡಿವೆ. ಆ ವೇಳೆಗಾಗಲೇ 80 ಕ್ಕೂ ಮೀರಿ ಕಾದಂಬರಿಗಳನ್ನು ರಚಿಸಿ, ಇನ್ನೂ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿರುವ ನುರಿತ ಲೇಖಕಿಯಿಂದ ಒಂದು ಪ್ರೌಢ...
“ನೆರಳು” ಧಾರವಾಹಿ : ನನ್ನ ಅನಿಸಿಕೆ
“ನೆರಳು” ಧಾರವಾಹಿ ಸಂಪೂರ್ಣವಾಗಿ ಓದಿದೆ ಎನ್ನುವುದಕ್ಕಿಂತ, ಎಂದಿನಂತೆ ಲೇಖಕಿ ಶ್ರೀಮತಿ. ನಾಗರತ್ನ ಅವರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಬಿಟ್ಟಿತು. ಕಾದಂಬರಿ ಪೂರ್ತಿಯಾಗಿ ಲಕ್ಷ್ಮಿ ಮತ್ತು ಭಾಗ್ಯರ ಎರಡೂ ಪಾತ್ರಗಳೂ, 2-3 ತಲೆಮಾರುಗಳ ಹಿಂದಿನ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕುಟುಂಬ ಜೀವನಕ್ಕೆ ಕೊಡುತ್ತಿದ್ದ ಆದ್ಯತೆ ಹಾಗೂ ಅದನ್ನು...
ಮೌನದ ಧ್ವನಿ
ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ ಮನನಿನ್ನದಾದರೆ,ಮೌನದಲಿ, ನಿಶ್ಯಬ್ಧದಲಿಶಬ್ಧವ ಹುಡುಕುವವನೀನಾದರೆ,ಎಲ್ಲೆ ಎಲ್ಲಿದೆಈ ಜಗದ ಸೊಬಗಿಗೆ ನಾ ಬರೆದ ಕವನಗಳಓದುವವರುಇಲ್ಲದಿದ್ದರೇನು,ಹಾಡುವ ಗಾಯಕರಾಗವ ಹಾಕದಿದ್ದರೇನುನೀರವ ಮೌನದಲಿಕೇಳುವುದುಸುಶ್ರಾವ್ಯ ಗಾನ ನನ್ನ ಕವನದ ಸಾಲುಗಳುಅಂಗಳದಲಿ ಬಿದ್ದತುಂತುರು ಮಳೆಹನಿಯ ಶಬ್ಧದಲಿಪ್ರತಿಧ್ವನಿಸುವ...
ಮುಗುದೆಯ ತಲ್ಲಣ
ರೈಲು ಸಾಗರದಿಂದ ಶಿವಮೊಗ್ಗೆಯ ಕಡೆ ವೇಗವಾಗಿ ಓಡುತಿತ್ತು. ಕೈಯಲ್ಲಿ ಕಡಲೇಕಾಯಿ ಪೊಟ್ಟಣ್ಣಗಳನ್ನು ಇಟ್ಟುಕೊಂಡು ಮಾರಲು ಚೀಲದೊಂದಿಗೆ ಬಂದಿದ್ದ ಮಾದೇವಿಗೆ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಅವಳ ತಮ್ಮ ಎಂಟು ವರುಷದ ಪೋರ ನಂಜುಂಡ ಮಾರಲು ತಂದಿದ್ದ ಪೊಟ್ಟಣ್ಣಗಳನ್ನೆಲ್ಲ ಮಾರಿ ಜೋಬಿನ ತುಂಬ ದುಡ್ಡನಿಟ್ಟುಕೊಂಡು ಅಪ್ಪನ ಮುಂದೆ ಸುರಿದಾಗ, ಅಮ್ಮ...
ಜಾಗತಿಕ ದೀಪಾವಳಿ
ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು,...
ಅಂತರ ರಾಷ್ಟ್ರೀಯ ಯೋಗ ದಿನಾಚರಣೆ
ನಮ್ಮ ಭಾರತ ದೇಶ ವಿಶ್ವಕ್ಕೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಯೋಗಾಭ್ಯಾಸವೂ ಒಂದು. ಯೋಗಾಸನಗಳಿಗೆ ಭಾರತ ತವರೂರಾದರೂ ಅದಕ್ಕೆ ವಿಶ್ವ ಮಾನ್ಯತೆ ಲಭಿಸಿದ್ದು ಎಂಟು ವರುಷಗಳ ಹಿಂದೆ ಮಾತ್ರ. ಭಾರತೀಯ ಪುರಾಣ ಪುರುಷರು ಯೋಗಾಭ್ಯಾಸದಿಂದ ಮನಸ್ಸು ಮತ್ತು ದೇಹಗಳ ಮೇಲೆ ನಿಗ್ರಹವನ್ನು ಸಾಧಿಸಿದ್ದರು ಎಂಬುದು ಪುರಾಣದ ಮಾತಾಯಿತು. ಆಧುನಿಕ...
ಚಟ ಎಂಬ ವಿಷ
ನಾಲ್ಕಾರು ವರುಷಗಳ ನಂತರ ಭೇಟಿಯಾದ ಗೆಳತಿಯರಾದ ವೈದೇಹಿ ಮತ್ತು ಶಾರದೆಯರು ಊಟ ಮುಗಿಸಿ ಉಂಡ ಬಾಯಿಗೆ ಒಗ್ಗರಣೆ ಎಂಬಂತೆ ಖಾರದ ಕಡ್ಲೇಕಾಯಿ ಬೀಜವನ್ನು ಬಾಯಿಗೆಸೆದುಕೊಳ್ಳುತ್ತಾ ಟಿವಿಯ ಮುಂದೆ ಕುಳಿತಿದ್ದಾಗ, ಟಿವಿಯ ನ್ಯೂಸ್ ಚಾನ್ನೆಲ್ಲಿನಲ್ಲಿ ಸುದ್ದಿ ಬಿತ್ತರಗೊಳ್ಳುತಿತ್ತು. –“ಮೇ ತಿಂಗಳ 31ನೇ ತಾರೀಳು ವಿಶ್ವ ತಂಬಾಕು ನಿಷೇಧದ ದಿನವಾದ...
ನಿಮ್ಮ ಅನಿಸಿಕೆಗಳು…