Author: Rathna Murthy, rathni50@gmail.com
ಮುಂಜಾನೆಯ ವಾಕಿಂಗಿಗೆಂದು ಗೇಟು ದಾಟಿದರೆ ಇಂಥದೇ, ಪಾರ್ಕ್, ಮೈದಾನ, ರಸ್ತೆ ಎಂದೇನೂ ಇಲ್ಲ. ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡಾದಿಡ್ಡಿ ರಸ್ತೆ, ಅಡ್ಡಾಡ್ಡ ರಸ್ತೆ, ಕಿರು ರಸ್ತೆ, ಕಳ್ಳರು ಓಡಿ ತಪ್ಪಿಸಿಕೊಳ್ಳುವ ತಿರುವು ಮುರುವಿನ ಹಾದಿ, ಓಣಿ ಓಣಿ ಹಾದು, ಗಲ್ಲಿ ಗಲ್ಲಿ ಬಿದ್ದು, ವಠಾರದ ರಸ್ತೆ, ಕೊಳಚೆ...
ಅಂದು ಶಾಲೆಯಲ್ಲಿ ಬೆಳಗಿನ ಕಿರು ವಿರಾಮ ಮುಗಿಸಿ ಗಂಟೆ ಹೊಡೆದ ತಕ್ಷಣ ಮುಂದಿನ ತರಗತಿಗೆ ಹೋದೆ. ಹಿಂದಿನಿಂದಲೇ ಮಕ್ಕಳು ಕಲರವದೊಂದಿಗೆ ಒಳಪ್ರವೇಶಿಸಿ ತಮ್ಮ ತಮ್ಮ ಜಾಗ ಸೇರಿ ಒಕ್ಕೊರಲಿನಿಂದ ನಮಸ್ಕಾರ ಹೇಳಿ ಕುಳಿತರು. ಮಕ್ಕಳ ಹಾಜರಿ ತೆಗೆದುಕೊಂಡು ಕುರ್ಚಿಯಿಂದೆದ್ದು ಬೋರ್ಡಿನ ಬಳಿಗೆ ಹೋಗುವಷ್ಟರಲ್ಲಿ. *ಅಯ್ಯೋ! ತಡೀಲಾರೆ* ಎಂದು ಇಡೀ ತರಗತಿಯೇ ಬೆಚ್ಚಿಬಿದ್ದು,...
ನಮ್ಮ ಮನೆಯ ತಾರಸಿಯ ಮೇಲೆ ಹಲವಾರು ವರ್ಷಗಳ ಕಾಲದಿಂದ ದಿನಾ ಬೆಳಿಗ್ಗೆ ಹಾಕುವ ಜೋಳ, ಅಕ್ಕಿ, ಒಂದಿಷ್ಟು ಅನ್ನ ನೀರು ಇದಕ್ಕಾಗಿ ಒಂದೈವತ್ತು ಅರವತ್ತು ಪಾರಿವಾಳಗಳು, ಕೆಲವು ಕಾಗೆಗಳು, ಮತ್ಯಾವುದೋ ಒಂದೆರಡು ಹೆಸರರಿಯದ ಹಕ್ಕಿಗಳು, ಕೆಲವೊಮ್ಮೆ ಕೋಗಿಲೆ ಇವೆಲ್ಲ ಬರುತ್ತವೆ. ಅಳಿಲುಗಳು ಬಂದರೂ ಅವು ಉಣ್ಣುವುದು ಅನ್ನವನ್ನು ಮಾತ್ರ. ಬಿರು...
A teacher is a teacher, mother, guide, philosopher and a psychologist ಎಂಬ ಮಾತಿದೆ. ಹೌದು ಈ ಎಲ್ಲ ಪಾತ್ರಗಳನ್ನು ಉಪಾಧ್ಯಾಯ ವೃತ್ತಿಯಲ್ಲಿದ್ದವರು ಸಂದರ್ಭಕ್ಕೆ ತಕ್ಕಂತೆ ಧರಿಸಬೇಕಾಗುತ್ತದೆ. ಪ್ರಾಥಮಿಕ ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಕಿಯ ಮಾತೇ ವೇದ ವಾಕ್ಯ. ತಮ್ಮ ಶಿಕ್ಷಕಿ ಸರ್ವಜ್ಞಳು. ಅವಳೇ ಆದರ್ಶ, ಅನುಕರಣೀಯ. ಆಕೆ...
ನನ್ನ ಸಹೋದ್ಯೋಗಿ ಒಮ್ಮೆ ನಾಲ್ಕು ದಿನ ರಜದ ಮೇಲಿದ್ದಾಗ ಎರಡೂ ತರಗತಿಗಳನ್ನು ನಾನೇ ನೋಡಿಕೊಳ್ಳಬೇಕಾಗಿ ಬಂದಂತಹ ಸಮಯದಲ್ಲಿ ನಡೆದದ್ದು ಈ ಪ್ರಸಂಗ. ನಮ್ಮಿಬ್ಬರ ಕ್ಲಾಸ್ ರೂಮ್‌ಗಳು ದೂರ ಇದ್ದ ಕಾರಣ ಕಂಬೈಂಡ್ ಮಾಡಲು ನಿರ್ಧರಿಸಿ ಆ ಸೆಕ್ಷನ್‌ನ ಮಕ್ಕಳನ್ನು ಮೌನವಾಗಿ ಸಾಲಾಗಿ ಕರೆತರಲು ಆಯಾಗೆ ಹೇಳಿದೆ. ಒಂದು ತರಗತಿಯನ್ನು ಸಂಭಾಳಿಸುವುದೇ ಕಷ್ಟ....
ಅದೇನೋ ಚಿಕ್ಕವಯಸ್ಸಿನಿಂದಲೂ ನಾನು ಓದುವ ಶಾಲೆ ಮನೆಯಿಂದ ತುಂಬಾ ದೂರ. ಕಾಲೇಜು ಓದುವಾಗಲಂತೂ ಒಂದೂರಿಂದ ಮತ್ತೊಂದೂರಿಗೆ ಓಡಾಟ. ನಾವಿದ್ದ ಊರಿನ ಮನೆಯಿಂದ ರೈಲ್ವೇಸ್ಟೇಷನ್ ಸಾಕಷ್ಟು ದೂರ. ಮತ್ತು ಕಾಲೇಜಿದ್ದ ಊರಿನ ಸ್ಟೇಷನ್‌ನಿಂದಲಂತೂ ನಮ್ಮ ಕಾಲೇಜ್ ಸಿಕ್ಕಾಪಟ್ಟೆ ದೂರ. ಹಾಗಾಗಿ ಮೊದಲಿನಿಂದಲೂ ನನ್ನದು ಓಡು ನಡಿಗೆ. ನನ್ನ ನಡಿಗೆಯ ಅಪಾರ ವೇಗವನ್ನು...
ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮ ಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮ ಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆ ಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆ ಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆ ಧನ ಪದವಿ ಸ್ಥಾನ...
ಮನುಷ್ಯನಿಗೆ ಬಗೆಬಗೆಯ ಪಾಠ ಕಲಿಸಿ ಬದುಕನ್ನು ರೂಪಿಸುವುದರಲ್ಲಿ ಅನುಭವಗಳ ಪಾತ್ರ ಬಹಳ ದೊಡ್ಡದು. ಕೆಲವು ಅನುಭವಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದರೆ ಇನ್ನು ಕೆಲವನ್ನು ಮರೆಯಲು ಹರ ಸಾಹಸ ಮಾಡುತ್ತೇವೆ. ಕೆಲವು ಅನುಭವಗಳನ್ನು ಹಾದು ಬರುವಾಗ ಕಷ್ಟ ಎನಿಸಿದ್ದರೂ ನಂತರ ಅವನ್ನು ನೆನೆಸಿಕೊಂಡು ಮುದಗೊಳ್ಳವುದೂ ಉಂಟು. ಈ...
ಜಂತಿ ಮನೆಯ ಕಟ್ಟಿಸಿರುವೆ ಕಿಟಿಕಿ ದ್ವಾರ ತೆರೆದೆ ಇರುವೆ ಬಾ ಮನೆಗೆ ಬಾ ಹುಳದ ಅವರೆಯನ್ನೆ ತರುವೆ ಶಾಲಿ ಕಾಳು ಚೆಲ್ಲಿಬಿಡುವೆ ಬಾ ಮನೆಗೆ ಬಾ ನಾಲ್ಕೇ ಆದರೇನು ಸೆಳೆಯೆ ಹತ್ತಿ ಬಿತ್ತಿ ಕೊಯ್ಯದಿರುವೆ ಬಾ ಮನೆಗೆ ಬಾ ಹಿತ್ತಿಲಲ್ಲಿ ಒಣಗಿ ತೃಣವು ವಸತಿಯಾಗೆ ಕಾಯುತಿಹುದು ಬಾ...
ಕುರುಡ ಧೃತರಾಷ್ಟ್ರ ಪಾಂಡವರ ಪ್ರಗತಿಗೆ ಮತ್ಸರ ತಾಳಿ ಅರಗಿನ ಮನೆಯಲ್ಲಿ ಸುಡಿಸಲು ಯತ್ನಿಸಿದ್ದು ತಿಳಿದಿದೆ. ಪಾಂಡವರು ಅಲ್ಲಿಂದ ಹೇಗೋ ಪಾರಾಗಿ ಏಕಚಕ್ರನಗರಕ್ಕೆ ಬಂದು ಭಿಕ್ಷೆ ಬೇಡಿ ತಂದದ್ದನ್ನು ಅವರಮ್ಮನಿಗೆ ಕೊಟ್ಟರೆ ‘ಅರ್ಧಪಾಲು ವೃಕೋದರಂಗೆ’. ಆದರೆ ವೃಕೋದರನಿಗೋ ಅದು ಏನೇನೂ ಸಾಲದೆ ಸದಾ ಕಾಲ ಅವನಿಗೆ ಅರೆಹೊಟ್ಟೆಯೇ ಆಗಿದ್ದಾಗ ಬಕಾಸುರನಿಗಾಗಿ ಕಳಿಸಿದ್ದ ರಾಶಿ...
ನಿಮ್ಮ ಅನಿಸಿಕೆಗಳು…