Author: Vidyashree Adoor, suvishree.adoor@gmail.com

6

ಕನವರಿಕೆ

Share Button

  ಖಾಲಿಯಾಗಿದೆ ಜೋಲಿಹೊಡೆದಿದೆ ಮನದ ಒಳಗಿನ ಮಂಥನ ನಿನ್ನೆ ನೆನಪಲಿ ನಾಳೆ ಭ್ರಮೆಯಲಿ ಬದುಕು ಸತ್ತಿದೆ ಇಂದಿನ ಸುತ್ತ ಸಾಗುವ ಜಾತ್ರೆ ದಿಬ್ಬಣ ಮುಸುಕ ಮಸುಕನು ಕಳೆಯದೇ ಭಾವ ತಬ್ಬಲಿ ಮರುಗುತಿರುವುದು ಬೆಳ್ಳಿ ಕಿರಣವು ಹೊಳೆಯದೆ ನೋವಿನಾಸರೆ ಬೇಕು ಬದುಕಲಿ ನಲಿವ ಮಹಡಿಯ ಕಟ್ಟಲು ಆಸೆ ಇಟ್ಟಿಗೆ...

6

ಮನದೊಳಗೊಂದು ಮಲ್ಲಯುದ್ಧ

Share Button

ಮುದವಿಲ್ಲ ಮನಕೆನ್ನ ಹದವಿಲ್ಲ ನಡೆಯೆನ್ನ ವದನದಲಿ ಸೂಸುವ ಹುಸಿಯಾದ ನಗೆಯನ್ನ ಹೇಗೆ ಬಚ್ಚಿಡಲಿ… ಎಲ್ಲಿ ಬಿಚ್ಚಿಡಲಿ…. ಜತನದೊಳು ಕಾಯ್ದಂತ ಕಥನಗಳು ಬಹಳಿಹುದು ಮಥನಮಾಡಲು ಮನದ ಮಡಿಕೆಯೊಳು ತೇಲಿ ಹೇಗೆ ಬಚ್ಚಿಡಲಿ…. ಎಲ್ಲಿ ಬಿಚ್ಚಿಡಲಿ….. ಮುಸುಕೊಳಗಿನಾ ಗುದ್ದು ರೇಶಿಮೆಯ ಹೊರಹೊದ್ದು ಸರಿತಪ್ಪು ಸೀಮೆಗಳು ಮಸುಕಿನಲಿ ಬಿದ್ದು ಹೇಗೆ ಬಚ್ಚಿಡಲಿ…....

5

ಬೆನ್ನು ಬಿಡದ ಅಮ್ಮ

Share Button

          ಕಳ್ಳಹೆಜ್ಜೆ ಇಟ್ಟುಬಂದು ಮಳ್ಳನಗೆಯ ಬೀರಿಕೊಂಡು ಪೋಪುದಿಲ್ಲ ಶಾಲೆಗೆಂದು ಮಗಳು ಮೆಲ್ಲನುಡಿದಳು ಸುಳ್ಳುಸುಳ್ಳು ಕಾರಣಗಳ ಗುಳ್ಳೆಯಂತೆ ತೇಲಿಬಿಡಲು ಮೂಲೆಲಿದ್ದ ಕೋಲನೆತ್ತಿ ಅಮ್ಮ ಬೆನ್ನು ಬಿದ್ದಳು ತನ್ನ ಕಣ್ಣ ಕನಸನೆಲ್ಲ ಮಗಳ ಮುಖದಿ ನೋಡುತವಳು ಭವದ ಭಾರವನ್ನು ಹೊತ್ತು ಸುಣ್ಣವಾಗಿರೇ ಸಣ್ಣ ಸಣ್ಣ...

4

ಹೆಣ್ಣೆಂದರೆ…

Share Button

  ಅಬ್ಬರದ ಐಸಿರವು ಹೆಣ್ಣಿನ ಜನ್ಮ ಸದ್ದಿರದೆ ಸಹಿಸುವಳು ಕಷ್ಟಗಳ ಗುಮ್ಮ ಹೆಣ್ಣನ್ನು ಅರಿಯುವುದು ಬಹು ಕಷ್ಟ ನಮಗೆ ಅರಿತಷ್ಟು ಒಗಟವಳ ಮುಖದಲಿಹ ನಗೆ ಮಗಳಾಗಿ ಮನತುಂಬಿ ಸತಿಯಾಗಿ ಮನೆತುಂಬಿ ಮತಿಯಾಗಿ ಜಗತುಂಬಿ ಗತಿಗಾಗಿ ತೇಯುವಳು ದುಃಖದಲಿ ನಗುವಾಗಿ ಸುಖದಲ್ಲಿ ನಲಿವಾಗಿ ನಲಿವಲ್ಲಿ ಗೆಲುವಾಗಿ ಚೆಲುವ ಸೂಸುವಳು...

6

ನಿದಿರೆಯ ಹಾಡು

Share Button

ಜೀಕಿ ನಿದಿರೆಯು ಕಣ್ಣಕೊಳದಲಿ ತಾಕಿ ಕಣ್ಣೆವೆ ಎದುರುಬದುರಲಿ ಹಾಕಿ ತಾಳವ ನವಿಲ ರೀತಿಯೆ ಮೂಕ ನರ್ತನ ಮಾಡಿದೆ… ಇರುಳ ಶಾಂತ ನಿದಿರೆ ಚಂದ ಸವಿಯ ಕನಸು ಮತ್ತೂ ಅಂದ ಕನಸು ತುಟಿಯ ಮೇಲೆ ಬರೆದ ಮುಗುಳು ನಗೆಯ ಸೂಸಿದೆ.. ಹಚ್ಚಿ ಮನದ ಒಳಗೆ ಸೊಡರು ಬಿಚ್ಚಿ ಗತದ...

3

ಗುರುವಂದನಾ..

Share Button

ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು… ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು ಒಬ್ಬ ಗುರುವು ಬೇಕು ತಂದೆ ತಾಯಿಯೆ ಮೊದಲ ಗುರುವೆಮ್ಮ ಬದುಕಿನಲಿ ಅರುಹೇ ಹೊಸ ವಿಷಯ ಯಾರ್ ಅವರು ಗುರುವೇ .. ಗೆಳೆಯಗೆಳತಿ, ಪತಿ ಪತ್ನಿ, ಅಣ್ತಮ್ಮರಲು...

3

ಮೌನ ಗೀತೆ

Share Button

ಒತ್ತಿ ಉಕ್ಕುವ  ಮನಕೆ ತಂಪೆರೆವ ಬಿಸುಪಿಲ್ಲ ಎಲ್ಲಿಂದ ಬರಬೇಕು, ನಾನು ಬಡವಿ….. ಬಿಸುಪಿಲ್ಲದಾ  ಭಯಕೆ ತೆರೆಯದಾತನ ತೋಳು ಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತು ಒಲವಿತ್ತು ನಾ -ನೀನು ಬೇಧವಿರದೇ ನಿನ್ನೊಳಗೆ  ನಾನು, ನನ್ನೊಳಗೆ ನೀನೆಂಬುವುದು ಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ...

4

ಭಾವಗಳ ಹಕ್ಕಿ…

Share Button

ಭಾವಗಳ ಹಕ್ಕಿಗೆ ಹಾರುವುದೇ ಕೆಲಸ ಒಮ್ಮೆ ಆ ಮರ..ಒಮ್ಮೆ ಈ ಮರ.. ಮಗದೊಮ್ಮೆ…..ಮತ್ತೊಂದು. ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳ ಸಂಜೆ ಹೊತ್ತು ನನ್ನ ಕೈತೋಟದಲ್ಲಿ ಭಿನ್ನ…ಭಿನ್ನ…ಒಂದೊಂದೂ. ಕೆಲವು ಗುಂಪು ಗುಂಪುಗಳವಾದರೆ ಕೆಲವದೋ….ಬರೀ ಗದ್ದಲ, ಇನ್ನು ಕೆಲವು ಮೌನವಾಗಿದ್ದರೆ.. ಮತ್ತೂ ಕೆಲವು ಬರೀ…ಒಂಟಿ. ಬಣ್ಣ ಬಣ್ಣದ ರಂಗೋಲಿಯಂತೆ...

5

ಹಳ್ಳಿ ಪಟ್ಟಣದ ನಡುವೆ ಕಳಚಿದ ಕೊಂಡಿ…

Share Button

ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ.ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ,ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ  ನನ್ನೆಲ್ಲ  ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ  ನನಗೆ ಮಜಬೂತು ಖಾತಿರ್ ದಾರಿಯ ಪ್ಲಾನ್ ಮಾಡಿಕೊಂಡಿದ್ದಳು. ಆತ್ಮೀಯತೆಯಿಂದ ನನ್ನನ್ನು...

10

ನದಿಯ ಬೇಗುದಿ

Share Button

ಭಾವದ ಭಾರ ಹೊತ್ತ ಕಾರ್ಮುಗಿಲು ಪಳ್ ಪಳಾರೆಂದು ಸಿಡಿಮಿಡಿಯುತ್ತಾ ಇನ್ನು ಹೊರಲಾರೆನೆಂದು ಗುಡುಗುಡಿಸುತ್ತಾ ಒಮ್ಮೆಲೇ ಸುರಿಸಿತ್ತು ಧೋ..ಧೋ..ಮಳೆ ಭಾವದ ಬರ ಹೊತ್ತ ಇಳೆ ಹನಿ ನೀರಿಗಾಗಿ ಪರಿತಪಿಸುತ್ತಾ ಬಿಡುಸುಯ್ವ ಬೇಗೆಯಲಿ ಬೇಯುತ್ತಾ ಕಾಯುತ್ತಿತ್ತು ತೊಳೆದುಕೊಳ್ಳಲು ತನ್ನ ಕೊಳೆ. ಒಮ್ಮೆಲೇ ಸುರಿದ ಕುಂಭದ್ರೋಣ ಮಳೆಗೆ ಇಳೆ ಕೊಚ್ಚಿ,….ಕೋಡಿ ಕವಲುಗಳೊಡೆದು...

Follow

Get every new post on this blog delivered to your Inbox.

Join other followers: