Author: Dr.Krishnaprabha M
(ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು ನನ್ನೊಡಲು “ಮಾಮರ ಹೂಬಿಟ್ಟಿದೆ” ಅನ್ನುವ ಉದ್ಗಾರಬೀಳದಿರಲಿ ಇಬ್ಬನಿ ಅನ್ನುವ ಮಮಕಾರಕಾಡದಿರೆ ಬಿಸಿಲು ಮೂಡದಿರೆ ಮೇಘಹೂಗಳುದುರದೆ ಮೂಡೀತು ಮಿಡಿ ಬೇಗಹುಸಿಯಾಗದಿರಲಿ ಕಾಯುವಿಕೆ ಕಾಡಿದರೂ ಮೋಡ ನಾ ಗೆದ್ದೆನಿರೀಕ್ಷೆ...
ವಾಟ್ಸಾಪ್ ಸಂದೇಶಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ನಮ್ಮ ಆತ್ಮೀಯರೊಬ್ಬರ ಸಂದೇಶ “ಗೇರು ಹಣ್ಣು ಬೇಕಾ?”. ಅವರ ಮನೆಗೂ ನಮ್ಮ ಮನೆಗೂ ಜಾಸ್ತಿ ದೂರವೇನಿಲ್ಲ. ಸಂದೇಶ ಓದಿದ ಕೂಡಲೇ ಮನದಲ್ಲೇನೋ ಪುಳಕ. ಅವಿತು ಕುಳಿತಿದ್ದ ನೆನಪುಗಳೆಲ್ಲಾ ಧಿಗ್ಗನೆದ್ದು ನಿಂತ ಅನುಭವ. ಗೇರು ಹಣ್ಣು ತಿನ್ನದೆ ಸುಮಾರು 25 ವರ್ಷಗಳ ಮೇಲಂತೂ...
ಮಾನವ ಬದುಕಬೇಕಾದರೆ ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ತುತ್ತಿನ ಚೀಲ ತುಂಬಿಸುವಾಗ ನಾಲಗೆಯ ರಸಗ್ರಂಥಿಗಳಿಗೂ ತೃಪ್ತಿಯಾಯಿತೆಂದರೆ ಮನಸ್ಸಿಗೇನೋ ಖುಷಿ. ಅದರಲ್ಲೂ ಮನೆಯಲ್ಲೇ ತಯಾರಿಸಿದ ಊಟ, ತಿಂಡಿ ತಿನಸುಗಳ ಸೇವನೆ ಹೊಟ್ಟೆಗೂ ಹಿತ, ದೇಹಕ್ಕೂ ಒಳ್ಳೆಯದು. ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಸಹಾಯಕಾರಿಯೂ ಹೌದು. ಶುಚಿ, ರುಚಿ, ಬಣ್ಣ, ಘಮ...
ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ! ಅಂದ ಹಾಗೆ ನಾನೀಗ ರೇಡಿಯೋ ಅಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ಬರೆಯುವುದಿಲ್ಲ. ವಿಶ್ವ ರೇಡಿಯೋ ದಿನಾಚರಣೆ ಬಗ್ಗೆಯೂ ಬರೆಯುವುದಿಲ್ಲ. ಯಾಕೆಂದರೆ ಈಗ ಮೊಬೈಲ್ ಒಂದು ಕೈಯಲ್ಲಿ ಇದ್ದರೆ ಮುಗಿಯಿತು. ಅಲ್ಲಿ...
“ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ. ಆ ಸೊಪ್ಪು ಹಾಕಿ ಕಾಯಿಸಿದ ಎಣ್ಣೆ ತಲೆಗೆ ಹಚ್ಚಿ ತಿಕ್ಕಿದರೆ ತಲೆಯಲ್ಲಿ ಕೂದಲು ಬೆಳೆಯುತ್ತದೆ” ಇತ್ತೀಚೆಗೆ ತೆರೆಕಂಡು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಕಾಂತಾರ ಚಲನಚಿತ್ರದಲ್ಲಿ ಈ ದೃಶ್ಯ ಎಲ್ಲರೂ ನೋಡಿಯೇ ಇರುತ್ತೀರಿ. ಕಾಂತಾರ ಚಲನಚಿತ್ರದಲ್ಲಿ ವಿವರಿಸಿರುವ ಕಥೆಯ ಕಾಲಘಟ್ಟ ವರ್ತಮಾನಕ್ಕೆ ಸಂಬಂಧಿಸಿದ್ದು...
ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಗಬೇಕೆಂದು ಸಂಜೆಯ ಹೊತ್ತು ಒಂದರ್ಧ ಘಂಟೆ ನಡೆಯುವುದನ್ನು ರೂಢಿಸಿಕೊಳ್ಳುವ ಮನಸ್ಸು ಮಾಡಿ ಅದನ್ನು ಕಾರ್ಯಗತಗೊಳಿಸಲು ಹೊರಟ ದಿನವೇ ಈ ಹಳದಿ ಸುಂದರಿಯರ ದಂಡು ನನ್ನನ್ನು ಸೆಳೆದಿತ್ತು. ಆ ಹೂಗಳನ್ನು ಕಂಡಾಗಲೇ, ಮನೋಭಿತ್ತಿಯಲ್ಲಿ ಅವಿತಿದ್ದ ಬಾಲ್ಯಕಾಲದ ನೆನಪೊಂದು ಧುತ್ತನೆ ಮೇಲೇರಿ ಬಂತು. ನಮ್ಮ ಮನೆಗೆ,...
ಕೆಲವೊಂದು ವಿಷಯಗಳು ಹಾಗೆಯೇ. ಕಾರಣವಿಲ್ಲದೇ ಕಾರಣವಿದೆಯೆಂದು ತೋರುವ ವಿಷಯಗಳು. ಯಾಕಾಗಿ ಆ ರೀತಿ ಸಂಭವಿಸುತ್ತವೆ ಅನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಅವುಗಳು ಸಂಭವಿಸುವುದಂತೂ ಸತ್ಯ. ಸಿಕ್ಕಾಪಟ್ಟೆ ಬೆರಗು ಹುಟ್ಟಿಸುವ ಸತ್ಯಗಳಿವು. ಹಲವಾರು ಸಂಗತಿಗಳು ಎಲ್ಲರ ಅನುಭವಕ್ಕೂ ಬಂದಿರುತ್ತವೆ. ಇದಕ್ಕೆ ಇಂತಹವುಗಳ ಹಿಂದೆ ಕಾಣದ ಭಗವಂತನ ಕೈವಾಡವಿದೆಯೆನ್ನುವರು....
ಧನ್ಯವಾದ ಸುರಹೊನ್ನೆ! ಹೌದು…ಸುರಹೊನ್ನೆಗೆ ಧನ್ಯವಾದ ತಿಳಿಸಲೆಂದೇ ನಾನೀ ಲೇಖನವನ್ನು ಬರೆಯ ಹೊರಟಿರುವುದು. ಕಳೆದ ಮೂರು ವರ್ಷಗಳಿಂದ ಸುಮಾರು ಐವತ್ತೆರಡು ಲೇಖನಗಳನ್ನು ಬರೆದು ಸುರಹೊನ್ನೆಯ ಓದುಗರೆದುರು ಇಟ್ಟಿದ್ದೇನೆ. ಸುರಹೊನ್ನೆಯ ಓದುಗರು ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಅನ್ನಲು ನಿಜವಾಗಿಯೂ ಖುಷಿಯಾಗುತ್ತಿದೆ. ಧನ್ಯವಾದ ತಿಳಿಸಲು ಕೆಲವು ಕಾರಣಗಳು ನನ್ನ ಮುಂದಿವೆ. ಕೆಲವನ್ನು...
ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು ಬಂದಾಗ ನಮಗೆ ನೆನಪಾಗುವುದು ಜೋಕಿಮ್ ಅವರು. ಜೋಕಿಮ್ ಅವರಿಗೆ ಕರೆ ಮಾಡಬೇಕೆಂದುಕೊಂಡರೆ ಅವರ ಹೆಸರೇ ನೆನಪಿಗೆ ಬರಲೊಲ್ಲದು. ಅವರನ್ನು ಮನೆಗೆ ಕರೆಯದೇ ವರ್ಷಗಳ ಮೇಲಾಗಿತ್ತು. ಐದು ನಿಮಿಷ ಏಕಾಗ್ರತೆಯಿಂದ...
ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ ಜೊತೆ ಕಾರಿಗೂ ಇಂಧನ ತುಂಬಿಸಿ “ಚಲ್ ಮೇರೀ ಗಾಡಿ” ಅನ್ನುತ್ತಾ ಪಯಣಿಸುವ ಅಭ್ಯಾಸ ರೂಢಿಯಾಗಿದೆ. ಹಾಗಂತ ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಕಾರೇ ಆಗಬೇಕೆಂದಿಲ್ಲ. ಆಗಾಗ ನಡೆದು...
ನಿಮ್ಮ ಅನಿಸಿಕೆಗಳು…