ಚೈತನ್ಯದ ಪಾಠ
ಹಸಿರೆಲೆ ಒಡಲಲಿ ಚೈತನ್ಯದ ಹುಡುಗಾಟ.. ನೆಲಕ್ಕುದುರಿದ ಒಣತರಗೆಲೆಯದು ಚರಪರ ನರಳಾಟ ಒಂದೇ ಬೇರು ಒಂದೇ ಬಳ್ಳಿಗೆ ಉಸಿರಾಗಿತ್ತು ಒಂದೇ ರವಿಯ ಅದೇ ಕಿರಣಕೆ ಹಸಿರಾಗಿತ್ತು ಚಿಗಿತ ಚಿಗುರು ತೊಟ್ಟು ಕಳಚಿ ಹಣ್ಣೆಲೆಯಾಯ್ತು ಬಿಗಿತ ಮರೆತು ನೆಲಕೆ ಉದುರಿ ಗೊಬ್ಬರವಾಯ್ತು ಉದುರಿ ಬಿದ್ದ ಎಲೆಯ ರಸವನು ಬೇರು ಹೀರಿತು...
ನಿಮ್ಮ ಅನಿಸಿಕೆಗಳು…