Author: Jessy PV, jessypv77@gmail.com

4

ಜಲ ಎಂದರೆ ಬರಿ ನೀರಲ್ಲ ಅಮೂಲ್ಯ ನಿಧಿ

Share Button

“ಅಬ್ಬಬ್ಬಾ, ಏನು ಸೆಕೆ! ಕೆರೆಯೋ, ನದಿಯೋ ಇದ್ದಿದ್ದರೆ ಹಾರಿ ಬಿಡಬಹುದಿತ್ತು ಅನಿಸ್ತದೆ.” ನನ್ನ ಬಾಯಿಂದ ಹೊರಬಂದ ಈ ಮಾತುಗಳು ಸುಮ್ಮನೇ ಅಲಂಕಾರಿಕವಾಗಿ ಹೇಳಿದ್ದಲ್ಲ. ಬೇಸಿಗೆಯಲ್ಲಿ ನೀರಾಟದಲ್ಲಿ ಕಾಲ ಕಳೆಯುವ ಬಾಲ್ಯ ನನಗಿತ್ತು. ಬಾಳೆದಿಂಡನ್ನು ಹಿಡಿದು ಈಜು ಕಲಿತು,ಮೊದಮೊದಲು  ಸಾಕಷ್ಟು ನೀರು ಕುಡಿದು, ಮುಳುಗಿ ಎದ್ದು ತಕ್ಕಮಟ್ಟಿಗೆ ಈಜು...

3

ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!

Share Button

“ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!” ಹಲವು ವಿವಾಹಿತ ಮಹಿಳೆಯರ ಹೃದಯ ಈ ರೀತಿ ಆರ್ದ್ರವಾಗಿ ಬೇಡುತ್ತಿರುತ್ತದೆ. ಆ ಕೂಗು ಬಹುಶಃ ಅರಣ್ಯ ರೋದನವಾಗುವುದೇ ಹೆಚ್ಚು. ಮದುವೆಯಾಗಿ, ಮಕ್ಕಳಾದರೆ ಮಹಿಳೆಗೆ ಮತ್ತೆ ಇನ್ನೇನೂ ಬೇಡ. ತನ್ನ ಬೇಕು-ಬೇಡಗಳ ಕುರಿತು ಚಿಂತಿಸಲು ಆಕೆಗೆ ಸಮಯವಿದ್ದರೆ ತಾನೇ? ಅವಳಿಗೆ ಬೇಕಾದದ್ದು ಒಂದಿಷ್ಟು ಸಮಯ...

5

ಅಡುಗೆ ಎಂಬ ಆಟವೂ, ಕೆಲಸವೂ..

Share Button

ನನ್ನ ಅಕ್ಕ ಫೋನ್ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್ ವೆರೈಟಿಗಳ ಬದಲು ಇಂಟರ್ನೆಟ್ಟಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ,...

3

ತೂಕದೊಂದಿಗೆ ಪ್ರಯೋಗಗಳು..

Share Button

ಇದು ಬಹುಶಃ ನನ್ನೊಬ್ಬಳ ಕತೆಯಲ್ಲ. ಬಹುತೇಕ ಹೆಣ್ಣುಮಕ್ಕಳ ವ್ಯಥೆ ( ಕತೆ) ಇದೇ. ಈ  ವ್ಯಥೆ ಭಾರ ಅಥವಾ ಶರೀರ ತೂಕಕ್ಕೆ ಸಂಬಂಧಿಸಿದ್ದು. ನನ್ನ ಬಾಲ್ಯಕಾಲದಲ್ಲಿ ಅದೂ ಇದೂ ಅಂತ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ಮನೆ ವಠಾರದಲ್ಲಿ ಸಿಗುವ ಹಣ್ಣುಗಳಲ್ಲದೇ ಕಾಡಿಗೂ ಲಗ್ಗೆಯಿಟ್ಟು ಅದನ್ನೂ ಕಬಳಿಸಿ ಸ್ವಾಹಾ ಮಾಡುವ ಮಕ್ಕಳ...

3

ನೀವೂ ಕಲಿಯಿರಿ, “ವಾಟ್ಸಾಪ್ ಮನಶ್ಶಾಸ್ತ್ರ”

Share Button

“ಹೀಗೂ ಒಂದು ಮನಃಶ್ಶಾಸ್ತ್ರ ಇದೆಯೇ?ನಮಗೆ ಗೊತ್ತೇ ಇರಲಿಲ್ಲ” ಅನ್ನಬೇಡಿ. ಇಂಥದ್ದೊಂದು ಮನಶ್ಶಾಸ್ತ್ರದ ಶಾಖೆ ಇನ್ನೂ ಶುರುವಾಗಿಲ್ಲ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಹೊಸ ಮನಶ್ಶಾಸ್ತ್ರ ಶಾಖೆಯಾಗಿ ಇದು ಸೇರ್ಪಡೆಯಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಅಂಗೈಯಲ್ಲಿರುವ ಈ ವಾಟ್ಸಾಪ್ ಬ್ರಹ್ಮಾಂಡದ ಮುಂದೆ ಯಾವ ಪ್ರಪಂಚವೂ ಲೆಕ್ಕಕ್ಕಿಲ್ಲದಂತಾಗಿದೆ. ವಾಟ್ಸಾಪ್ ನಲ್ಲಿ ಏನುಂಟು?ಏನಿಲ್ಲ? ಅದರ...

2

ಬಸ್ಸು ಬಂತು ಚುನಾವಣೆ ಬಸ್ಸು

Share Button

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು.  ಚುನಾವಣೆಯೆಂದಾಗ  ಎಲ್ಲರ  ಮನಸ್ಸಲ್ಲೂ ಏನಾದರೊಂದು  ನೆನಪು  ಇಣುಕಬಹುದು.   ನಾನು ಸಣ್ಣವಳಿದ್ದಾಗ ಚುನಾವಣೆ ಬರಲೆಂದು ಹಂಬಲಿಸುತ್ತಿದ್ದೆ. ನಾನಷ್ಟೇ ಅಲ್ಲ ನನ್ನ ಒಡಹುಟ್ಟಿದವರಿಗೂ ಇದೇ ಆಸೆ ಇದ್ದಿರಬೇಕು. ಆಗ ನಮಗೆ ಚುನಾವಣೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.ನಾವು ವಯಸ್ಕರೂ ಆಗಿರಲಿಲ್ಲ. ಹಾಗಾಗಿ  ಮತದಾರರೂ ಆಗಿರಲಿಲ್ಲ. ಚುನಾವಣೆಯಿಂದಾಗುವ ಪರಿಣಾಮದ ಅರಿವೂ ಇರಲಿಲ್ಲ. ಚುನಾವಣೆಗಾಗಿ ನಾವು ಹಂಬಲಿಸಲು...

2

ಪ್ರೀತಿಯೆಂಬ ಮಾಯೆ‌..

Share Button

ಹೃದಯಗಳ ಕಣಿವೆಯಲ್ಲಿ ಪ್ರವಾಸ ಹೊರಟಿದ್ದೆ. ನನಗೊಂದು ಹೃದಯ ಡಿಕ್ಕಿ ಹೊಡೆಯಿತು. “ಅಬ್ಬಾ, ಯಾಕಿಷ್ಟು ಭಾರವಾಗಿದ್ದೀಯಾ?” ಹೊಡೆತದ ನೋವಿಗೆ ಕೇಳಿದೆ. “ಪ್ರೀತಿಯ ನೋವಿಗೆ ಭಾರವಾಗಿದ್ದೇನೆ.” ನಿಡುಸುಯ್ದು ಅದು ಹೇಳಿತು. ಮುಂದೆ ಹೋದಾಗ ಕಾಮನಬಿಲ್ಲಿನಂತೆ ವರ್ಣಮಯವಾಗಿ , ಚಿಟ್ಟೆಯಂತೆ ತೇಲುತ್ತಾ ಸಾಗುವ ಹೃದಯವನ್ನು ಕಂಡು ಆಶ್ಚರ್ಯದಿಂದ ಕಣ್ಣು ಬಿಟ್ಟು ನಿಂತಿದ್ದೆ....

3

ಪರೀಕ್ಷಾ ಕೊಠಡಿಯಲ್ಲಿ ಮೂರು ಗಂಟೆಗಳು.

Share Button

ಪರೀಕ್ಷೆಯೆಂದರೆ ವಿದ್ಯಾರ್ಥಿಗಳಿಗೆ ಭಯ, ಕಳವಳ.  ಎಸ್ ಎಸ್ ಎಲ್ ಸಿ ಪರೀಕ್ಷೆ ಬಂತೆಂದರೆ ನನಗೂ ಕಳವಳ. ಶಿಕ್ಷಕಿಯಾಗಿ ನನ್ನ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುವರೋ ಎಂಬುದು ನನ್ನ ಕಳವಳದ ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ, ಕೊಠಡಿ ಮೇಲ್ವಿಚಾರಣೆ ಎಂಬ ಆ ಮೂರು ಗಂಟೆಗಳು ನನಗೆ ಜೈಲೊಳಗಿದ್ದಂತೆ...

1

ಕ್ರೈಸ್ತರ ಪವಿತ್ರ ಹಬ್ಬ, ಗುಡ್ ಫ್ರೈಡೆ

Share Button

 ‘ ಗುಡ್ ಫ್ರೈಡೆ ದಿನ ಕ್ರಿಶ್ಚಿಯನ್ನರಿಗೆ ವಿಶೇಷ ದಿವಸವಲ್ಲವೇ? ಆ ದಿನ ಶುಭಾಶಯ ಹೇಳಲಿಕ್ಕಿಲ್ಲ ಎಂದು ಯಾರೋ ಅಂದರು. ಯಾಕೆ ಎಂದು ನನ್ನ ಮಿತ್ರರೊಬ್ಬರು ಕೇಳಿದರು. ಶುಭಾಶಯ ಹೇಳಿದರೆ ಅಪರಾಧವೇನೂ ಅಲ್ಲ. ಆದರೆ ಇದು ಸಂಭ್ರಮಿಸುವ ಹಬ್ಬವಲ್ಲ. ದುಃಖದಿಂದ, ಅತೀವ ಭಕ್ತಿಯಿಂದ ಆಚರಿಸುವ ಅತಿ ಮಹತ್ವದ ಹಬ್ಬ....

3

ಗ್ರಹಣ ಮತ್ತು ನಾನು

Share Button

   . ಖಗೋಳವೆಂಬ ವಿಷಯವೇ ಅಂಥದ್ದು. ಸ್ವಲ್ಪ ಆಸಕ್ತಿ ಬೆಳೆಸಿಕೊಂಡರೆ ಅದು ಮಹಾ ಕುತೂಹಲವಾಗಿ ಬೆಳೆದುಬಿಡುತ್ತದೆ. ನನ್ನ ಬಾಲ್ಯದಲ್ಲಿ ರಾತ್ರಿ ಆಕಾಶ ನೋಡುವುದೆಂದರೆ ನನಗೆ ಬಹಳ ಅಚ್ಚುಮೆಚ್ಚಿನ ವಿಷಯವಾಗಿತ್ತು. ಅನಂತಕೋಟಿ ನಕ್ಷತ್ರಗಳು ಮಿನುಗುವ ಆಕಾಶ, ಬೆಳ್ಳಿ ಬೆಳಕಿನ ಚಂದಿರ ಹೊಳೆವ ಆಕಾಶ ನೋಡಿ ನಾನು ಮಂತ್ರಮುಗ್ಧಳಾಗಿ ನಿಂತುಬಿಡುತ್ತಿದ್ದೆ.‌ ನನ್ನ ವಿವಾಹದ...

Follow

Get every new post on this blog delivered to your Inbox.

Join other followers: