Author: Usha Chandru, hgusha@gmail.com

0

ನೀನಾಸಂನಲ್ಲಿ 1.5 ದಿನ

Share Button

ಮೇ ತಿಂಗಳ 10 ಅಥವ 11ನೇ ತಾರೀಖು ಇರಬೇಕು, ಸಂಬಂಧದಲ್ಲಿ ಅಣ್ಣನಲ್ಲದಿದ್ದರೂ ಅಣ್ಣನಾದ ವಿಜಯ ನಾನು ಛಾಯಚಿತ್ರದ 3 ದಿನದ ವಸತಿ ಕೂಡಿದ ವರ್ಕ್ ಶಾಪ್ಗೆ ಹೋಗುತ್ತಿದ್ದೇನೆ ಅಂದರು. ಹಾದಾ ಯಾರಾದರೂ ಬರಬಹುದಾ ಎಂದಿದ್ದಕ್ಕೆ, ಹೂಂಂ ಯಾರಾದರೂ ಬರಬಹುದು ಕ್ಯಾಮರಾ ಇದ್ದರೆ ಅಂದರು. ಸರಿ ಯೋಚಿಸಿ ಮನೆಯಲ್ಲಿ...

1

ಒಂದು ಹಾವಿನ ಕಥೆ..

Share Button

ಹಾವೆಂದರೆ ಯಾರಿಗಾದರೂ ಹೆದರಿಕೆ.   ನಾಗರಹಾವೆಂದರೆ ಒಂದು ಪಾಲು ಹೆಚ್ಚೇ. ಕಾಳಿಂಗ ಸರ್ಪ ಅಷ್ಟಾಗಿ ಕಾಣ ಸಿಗದು  ಜನನಿಬಿಡ ವಲಯಗಳಲ್ಲಿ. ಅದೊಂದು ಬೇಸಿಗೆ. ಮಕ್ಕಳಿಗೆ ರಜೆ ಬಾ ಊರಿಗೆ ಎಂದರು ಅಜ್ಜಿ. ಸರಿಯೆಂದು ಹೋಗಿದ್ದೆವು. ಮಕ್ಕಳ ಆಟ. ಹುಲ್ಲಿನ ಬಣವೆಯಲ್ಲಿ ಆಡುವ ಹುಚ್ಚು ನಮಗೆ. ನಮಗೆಲ್ಲಿ ಸಿಗಬೇಕು ಅದೆಲ್ಲಾ ಪೇಟೆಯಲ್ಲಿ. ಮನೆಯ ಹಿತ್ತಲೇ ಕಣ. ಕಣದಲ್ಲಿ 2-3 ಬಣವೆಗಳು  ಇರುತ್ತಿದ್ದವು. ಮನೆ ಮತ್ತು ಬಣವೆಯ ನಡುವೆ 200 ಅಡಿ ಖಾಲಿ ಜಾಗ. ಹುಲ್ಲಿನ ಸೋಂಕು ನವೆ ಆಡಬೇಡಿ ಹುಲ್ಲಿನಲ್ಲಿ ಅಂದರೆ ಕೇಳುವವರಾರು. ಆಡಿದ್ದೆ ಆಟ,ಅಡಗಿದ್ದೇ ಅಡಗಿದ್ದು ,ಹುಲ್ಲು ಹೊದ್ದು. ಆಟದ ಮಧ್ಯ  ನೀರಡಿಕೆಯಾಗಿ  ಮನೆಗೆ ಬಂದೆ. ಹುಲ್ಲಲ್ಲಿ  ಆಡುತ್ತಿದ್ದರು  ಇನ್ನಿಬ್ಬರು.  ನೀರು ಕುಡಿದಾಯಿತು .ಇಬ್ಬರು ಆಳುಗಳು ತಾಳಿ ಹಾವು ಹರಿದಂತಿದೆ ಎಂದರು. ಮನೆಯಲ್ಲಿದ್ದವರೆಲ್ಲಾ  ಹಿತ್ತಲಿಗೆ  ಓಡಿ ಬಂದರು. ಹುಲ್ಲಲ್ಲಿ ಆಡುತ್ತಿದ್ದವರಿಗೆ ಹೆದರಿಕೆ ಈ ಬದಿಗೆ ಬರಲು. ದೊಡ್ಡವರು ಒಬ್ಬರು  ಹೋಗಿ  ಕರೆತಂದರು. ಒಬ್ಬ ಆಳು ಹಾವು ಹೊಡೆಯುವುದರಲ್ಲಿ ನಿಪುಣ.ಅವರೂ ಅಲ್ಲೇ ಇದ್ದರು. ಬೇಸಿಗೆಯ ಬಿಸಿಲಿಗೆ ಹರಿದು ಬಂದಿತ್ತು. ಸರಿ ಹಾವು ಹಿಡಿಯ ಬೇಕು ಅಂತ ಮುಂದಾದರು. ಬಾಲ ಹಿಡಿಯುವುದು ಹೊರಗೆ ತರಲು ಬುಸ್ಸ್ ಹೀಗೆ 2 ಸಲವಾಗಿರಬೇಕು. ಒಮ್ಮೆ  ಜೋರಾಗಿ ಬತ್ತದ ಮೇಲೆ ಉರುಳಿಸುವ ಗುಂಡಿನ ಕೆಳಗಿಂದ ಹಿಡಿದು ಎಳೆದು ಹೊರಗೆ ಹಾಕಿದರು. ಬಯಲಿಗೆ ತಂದ ಮೇಲೆ ಹೊಡೆಯುವುದು ಸುಲಭ ಅವರಿಗೆ....

Follow

Get every new post on this blog delivered to your Inbox.

Join other followers: