Author: Dr. Govinda Hegade, hegadegs@gmail.com

1

ಮೊರೆ

Share Button

ಹೂವು ಅರಳುತ್ತಿಲ್ಲ ದುಂಬಿ ಗುಂಜನವಿಲ್ಲ ಕುಕಿಲು ಕೇಕೆಗಳೆಲ್ಲಿ ಮರೆಯಾದವೋ ಬಳೆ ಗೆಜ್ಜೆ ಕಿಂಕಿಣಿಯದೀಗ ಘನಮೌನ ಯಮುನಾತೀರದಲಿ  ಸೂತಕದ ಛಾಯೆ ಪ್ರಭೂ, ಕಂಡೆ ನೀ ತೆರಳಿದ್ದನ್ನ ಬೃಂದಾವನದ ಎದೆ ಬಿರಿದಿದ್ದನ್ನ ಅನಾಥ ಮುರಳಿ ತಲೆಮರೆಸಿ ಕೊಂಡಿಹನು ಸ್ತಬ್ದವಾಗಿದೆ ಈಗ ವೇಣುಗಾನ ಗೋಪಿಯರೆಲ್ಲ ಗುಳೆ ಹೋಗಿದ್ದಾರೆ ಸೇರಿದ್ದಿರಬೇಕು ನಗರ ತೀರ...

1

ಶಬರಿ

Share Button

  ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ  ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು  ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು...

0

ನಗು ನೀನು

Share Button

ನಗು ನೀನು ಎಲ್ಲ ಮರೆತಿರೆ ನೀನು ಇನ್ನು ಕಾಡುವುದಿಲ್ಲ ಮೇಘ, ಕಪೋತ ಸಂದೇಶಗಳ ತರುವ ನಿರೀಕ್ಷೆಯಿಲ್ಲ ಎದೆಯೆ ಬತ್ತಿರುವಾಗ ಕಣ್ಣಿಗೆ ಹೊಳಪಿಲ್ಲ ಭಾವ ಸತ್ತಿರುವಾಗ ನುಡಿಯಲೇನೂ ಇಲ್ಲ ಇಲ್ಲಗಳ ಸಂತೆಯಲಿ ಇನ್ನು ಕೇಳುವುದೇನು ನಂಜು ನುಂಗುವೆ ನಾನು ನೋವ ಸಂಕಲೆ ಮುರಿದು ನಗು ನೀನು ನನ್ನನೂ ಮರೆತು...

1

ದಿವ್ಯ

Share Button

  ಎಂಥದೋ ತೊಳಲಿಕೆಯ ವಿಧ್ವಸ್ತ ಮನದಲ್ಲಿ ಮನೆ ತಲುಪಿದೆ ಒಂದು ಕೈಯಲ್ಲಿ ವಾಕರ್ ಇನ್ನೊಂದರಲ್ಲಿ ಪೈಪು ಹಿಡಿದು ಸಸಿ ಮಕ್ಕಳಿಗೆ ನೀರು ಹನಿಸುತ್ತಿರುವ ಅಮ್ಮನನ್ನು ಕಂಡಿದ್ದೇ ಈಗ ಎಲ್ಲದಕ್ಕೂ ಬೇರೆಯದೇ ಬಣ್ಣ ಬಂದಿದೆ -ಡಾ. ಗೋವಿಂದ ಹೆಗಡೆ +8

0

ಕಾರಂತಜ್ಜನಿಗೆ….

Share Button

ನಿನ್ನ ಬಗ್ಗೆ ಹೇಳಹೊರಡುವುದು ಶರಧಿಗೆ ಕೊಡುವ ಷಟ್ಪದಿಯ ದೀಕ್ಷೆಯಾದೀತೆಂಬ ಅಳುಕು ಕೃಷೀವಲ ನೀನು ಶ್ರದ್ಧೆಯಿಂದ ಮಾಡುತ್ತಲೇ ಹೋದೆ ನಾಡಿಗರೆದೆಯ ಉತ್ತುವ ಬಿತ್ತುವ ಕಾಯಕ ಹತ್ತೇ ಹದಿನೆಂಟೇ ಮುಖ ಮೊಳಕೆ ಎಲ್ಲಕ್ಕೂ ಬೆಳೆವ ಬೆಳೆಸುವ ಬದುಕ ಹಿರಿದಾಗಿಸುವ ತವಕ ಆನೆಯಂತೆ ನಡೆದೆ ಬಿಚ್ಚುತ್ತ ನಿನ್ನದೇ ದಾರಿ ;ಇಲ್ಲ ರಾಜಿ...

4

ಹಾದಿ

Share Button

ಹಾದಿ ತೆರೆಯುತ್ತಲೇ ಇದೆ ಮೆಟ್ಟಿಲು ಮೆಟ್ಟಿಲುಗಳಾಗಿ ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ ನಿಲ್ಲುವಂತಿಲ್ಲ  ಮನ ಸೋತು ಮೈಸೋತು ಏರುದಾರಿಯಲಿ ಏರಲೇ ಬೇಕು ಹಾಡು ಮುಗಿವವರೆಗೂ ಹಾದಿ ತೆರೆದಿರುವ ನಂಬಿಕೆಯಲ್ಲಿ ಏರು ಪಯಣ-‘ನಂಬಿ ಕೆಟ್ಟವರಿಲ್ಲ ‘ ಕೈಹಿಡಿದ ಪುಟ್ಟಿ ಮುಂದೆ ಸಾಗಿದಂತೆಲ್ಲ ಬೆಳೆ ಬೆಳೆದು ಮುಂದೊಂದು ಮೆಟ್ಟಿಲಲ್ಲಿ ಪಾತ್ರ...

0

ಸಂತೆ-ಸಂತ

Share Button

ಕನ್ನಡಿಯಲ್ಲಿ ತನ್ನ ತಾನೇ ಕಂಡು ಬೆರಗಾಗಿದೆ ಸಂತೆ ಮಾಯಾಲಾಂದ್ರದಿಂದ ಹೊರಬಂದಂತೆ ಒಂದೊಂದೇ ಸರಕು ಸರಂಜಾಮು ಅಂಗಡಿಗಳೇ ತೆರಪಿಲ್ಲದೇ ಬಂದು ಶಿಸ್ತಾಗಿ ಕೂತ ಪರಿಗೆ ಏನೆಲ್ಲ ವೈವಿಧ್ಯ-ಗಾತ್ರ ಗುಣಗಳಲ್ಲಿ ದೃಶ್ಯ ರುಚಿ ಸದ್ದು ವಾಸನೆಯ ಹಸಿವಿಗೆ ತೆರೆದುಕೊಳ್ಳುವ ಲೋಕ ಕಂಡಷ್ಟೂ ಕಾಣುವ ಬಗೆದಷ್ಟೂ ಮೊಗೆಯಲಿರುವ ತನ್ನೊಡಲು ಬಿಚ್ಚಿ ಹರವಿದ...

0

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ

Share Button

ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಮಹಾಸ್ವಾಮಿ ಆ ಸಂಜೆ ನಿಮ್ಮಿಂದ ದೂರಾಗಿ ನಡೆದೆನಲ್ಲ ಆಗಿನಕಿಂತ ಕಾಡು ನುಂಗಿತ್ತು ನನ್ನ, ನೀಲಿ ಕಾಡು, ಮಹಾಸ್ವಾಮಿ ನೀಲಿ ಕಾಡು ಮತ್ತು ಮೇಲೆ ಪಶ್ಚಿಮದಲ್ಲಿ ಕಂದಿದ ಚುಕ್ಕಿಗಳು ನಾನು ನಗಲಿಲ್ಲ,ಚೂರೂ ಇಲ್ಲ, ಮಹಾಸ್ವಾಮಿ...

2

ಪ್ರೇಮರೂಪಿ ಮಾಧವ

Share Button

ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ ದಿವದ ಒಲವಿನ ಧಾರೆ ಹರಿಸುವೆ ಎಂಥ ಮೋದವು,ಸೋಜಿಗ ನೋಡುತಿರುವುದು ಹೇಗೆ ನಿಮ್ಮನು ದೃಷ್ಟಿಯಾಗದೆ ಒಲುಮೆಗೆ ಲಜ್ಜೆ ಸುಳಿಯಲಿ ನಮ್ಮ ನೂಕಿದೆ ಹೇಗೆ ಇರುವುದು ಬಳಿಯಲೆ ಬಿಟ್ಟು ತೆರಳಲಿ ಹೇಗೆ ನಿನ್ನನು ಬಿಡಲೆ ಒಲವಿನ ಪಾಲನು ಗಾಳಿ ಬೀಸುತ ಸೇವೆಗೈಯುತ ಕಣ್ಣ...

2

ಹೊಸಗಾಲ

Share Button

ಹರ್ಷವರ್ಷದ ಒಸಗೆ ತಂತು ಹೊಸಗಾಲ ಖುಷಿಗಡಲನು ಕಡೆವ ಮಂತು ಹೊಸಗಾಲ ಸುಡುವ ಕೊಳ್ಳಿಗಳೆದೆಯ ಸುತ್ತುವರಿದಿರುವಲ್ಲಿ ಅಭಯ ಹಸ್ತವನೆತ್ತಿ ಬಂತು ಹೊಸಗಾಲ ಅಪಸ್ವರದ ಅಪಶ್ರುತಿಯ ಗೋಳೆ ಬಾಳಾದಾಗ ಕರುಳಒಳಗನು ಮಿಡಿವ ತಂತು ಹೊಸಗಾಲ ಮುಖಹೀನ ದಿಗಿಲು ಪರಕೀಯ ತಲ್ಲಣವ ನೀಗಿ ಇರವ ಬೆಳಗಿದೆ ಪ್ರೀತಿಯಲಿ ನಿಂತು ಹೊಸಗಾಲ ಶಿಶಿರನಿದ್ರೆಗೆ...

Follow

Get every new post on this blog delivered to your Inbox.

Join other followers: